ನಮ್ಮ ರಾಷ್ಟ್ರದ ಶಿಕ್ಷಣ ನೀತಿ ಹೇಗಿರಬೇಕೋ ಅದೇ ಕಲ್ಪನೆಯಲ್ಲಿಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುಪ್ರತಿ ತಯಾರಾಗಿದೆಯೆಂದು ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯರಾದ ಪ್ರೋ|| ಎಂ.ಕೆ ಶ್ರೀಧರ್‌ರವರು ದಿನಾಂಕ 20-6-2019 ರಂದು ಶಾಸಕರಭವನ, ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಏರ್ಪಡಿಸಿದ್ದ “ರಾಷ್ಟ್ರೀಯ ಶಿಕ್ಷಣ ನೀತಿ-2049 (ಕರಡು), ಚಿಂತನ-ಮಂಥನದಲ್ಲಿ ಹೇಳಿದರು.
ಹೊಸ ಶಿಕ್ಷಣ ನೀತಿಯ ಅನೇಕ ಬಿಂದುಗಳ ಮೇಲೆ ಶಿಕ್ಷಣ ತಜ್ಞರು, ಶಾಸಕರು, ವಿಧಾನಪರಿಷತ್ತಿನ ಸದಸ್ಯರು, ವಿದ್ವಾಂಸರು, ಶಿಕ್ಷಕರು ಸವಿಸ್ತಾರವಾಗಿ ಚರ್ಚಿಸಿದರು. ಮೂರು ವರ್ಷದಿಂದ ಪ್ರಾರಂಭವಾಗುವ ಶಿಕ್ಷಣದಿಂದ ಹಿಡಿದು ಉಚ್ಚ ಶಿಕ್ಷಣದವರೆಗೆ ಯಾವ-ಯಾವ ಕೋರ್ಸ್‌ಗಳು ಇರಬೇಕು, ಪಠ್ಯಕ್ರಮ ಹೇಗಿರಬೇಕು? ಶಿಕ್ಷಕರ ನೇಮಕ ಪ್ರಕ್ರಿಯೆ ಹೇಗಿರಬೇಕು? ಎಂಬ ವಿಷಯಗಳ ಬಗ್ಗೆ ಪ್ರೋ|| ಎಂ.ಕೆ.ಶ್ರೀಧರ್‌ರವರು ತಿಳಿಸಿದರು. ಎಲ್ಲರೂ ಚರ್ಚೆಯಲ್ಲಿ ಉತ್ಸಾಹಿತರಾಗಿ ಭಾಗವಹಿಸಿದರು.
ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಮಹಾಮಂತ್ರಿಗಳಾದ ಶ್ರೀ ಶಿವಾನಂದ ಸಿಂಧನಕೇರಾರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಜಿ ಶಿಕ್ಷಣ ಸಚಿವರಾದ ತನ್ವೀರ್ ಸೇಠ್‌ರವರು, ವಿಧಾನಪರಿಷತ್ತಿನ ಸದಸ್ಯರಾದ ಶ್ರೀ ಅರುಣ್ ಶಹಾಪುರ್, ಶ್ರೀಮತಿ ತಾರಾ, ಶ್ರೀ ಪುಟ್ಟಣ್ಣ ಇನ್ನಿತರ ಪ್ರಮುಖರು ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲ್‌ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಸಹ ಕಾರ್ಯದರ್ಶಿಗಳಾದ ಶ್ರೀಯುತ ಗಂಗಾಧರ್ ರವರು ಎಲ್ಲರನ್ನೂ ಸ್ವಾಗತಿಸಿದರು. ಮತ್ತು ಅ.ಭಾ.ರಾ.ಶೈ.ಮಹಾಸಂಘದ ಮಹಿಳಾವಿಭಾಗದ ಸಹ ಕಾರ್ಯದರ್ಶಿಗಳಾದ ಶ್ರೀ ಮಮತಾ ಡಿ.ಕೆ ರವರು ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ವಂದಿಸಿದರು.