ಬೆಂಗಳೂರು: ಸಮಾಜ ಪರಿವರ್ತನೆ ಆಗಬೇಕಾದರೆ ಶಿಕ್ಷಕನ ಮಾನಸಿಕತೆ ಪರಿವರ್ತನೆಯಾಗಬೇಕಾಗಿದೆ, ಶಿಕ್ಷಕ ಪರಿವರ್ತನೆಯಾಗಬೇಕೆಂದರೆ ಶಿಕ್ಷಕ ಸಂಘಟನಾತ್ಮಕವಾಗಿ ಸೇರಬೇಕಾಗಿದೆ ಎಂದು ಎ.ಬಿ.ಆರ್.ಎಸ್.ಎಂ ಎನ್ ರಾಷ್ಟ್ರೀಯ ಸಂಘಟನ ಮಂತ್ರಿ ಶ್ರೀ ಮಹೇಂದ್ರ ಕಪೂರ್ ಹೇಳಿದರು. ನಗರದ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಕೇಂದ್ರದಲ್ಲಿ ರವಿವಾರ ನಡೆದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಾಂತ ಅಭ್ಯಾಸ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ, ಶಿಕ್ಷಕನ ಹಿತಕ್ಕಾಗಿ ಸಮಾಜ ಎಂಬುದು ಬರೀ ಘೋಷಣೆ ಅಲ್ಲ ಅದು […]
ಶಿಕ್ಷಕರಿಂದ ಸಮಾಜದ ಡೊಂಕುಗಳನ್ನು ತಿದ್ದುವ ಕಾರ್ಯವಾಗಲಿ: ಡಾ. ಜ್ಯೋಶೆಫ್ ವಿ ಜಿ ಬೆಂಗಳೂರು: ಗುರು ಆದವನಿಗೆ ನಾನು ಗುರು ಎಂಬ ಹೆಮ್ಮೆ ಅತ್ಯಧಿಕವಾಗಬೇಕು, ಕಲಿಸುವ ವಿಷಯದ ಮೇಲೆ ಹೆಚ್ಚು ಪ್ರೀತಿ ಇರಬೇಕು, ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುವ ಗೌರವಿಸುವ ಗುಣವಿರಬೇಕು ಎಂದು ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಜ್ಯೋಶೆಫ್ ವಿ ಜಿ ಹೇಳಿದರು. ನಗರದ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಾಂತ ಅಭ್ಯಾಸ ವರ್ಗದಲ್ಲಿ ಕಾರ್ಯಕ್ರಮ ಉದ್ಘಾಟನೆ […]
ಅಖಿಲ ಕರ್ನಾಟಕ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆ ವತಿಯಿಂದ ಧಾರವಾಡದಲ್ಲಿ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪನವರನ್ನು ಭೇಟಿಯಾಗಿ ಎಸ್‌ಎಸ್‌ಎಲ್‌ಸಿ ವಿಜ್ಞಾನ ಪ್ರಶ್ನೆ ಪತ್ರಿಕೆ ವಿನ್ಯಾಸ ಮತ್ತು ರಚನೆಯಲ್ಲಿ ವಿದ್ಯಾರ್ಥಿ ಸ್ನೇಹಿಯಾದ ಪ್ರಶ್ನೆ ಪತ್ರಿಕೆಯಲ್ಲಿ ಸೂಕ್ತ ಬದಲಾವಣೆಗೆ ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ವೇದಿಕೆ ರಾಜ್ಯ ಅಧ್ಯಕ್ಷರಾದ ಶ್ರೀಧರ ಪಾಟೀಲ ಕುಲಕರ್ಣಿ, ಶಿಕ್ಷಕ ಸಂಘದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ಬಸವರಾಜ ಗುರಿಕಾರ ಸರ್, ಮತ್ತು ವೇದಿಕೆ ಪದಾಧಿಕಾರಿಗಳಾದ ವಿ ಎಸ್ ಹುದ್ದಾರ, ಸಂಜೀವಕುಮಾರ ಬುಶೆಟ್ಟಿ, ಡಿ. […]
ಖಾಲಿ ಹುದ್ದೆ ಭರ್ತಿಗೆ ಬೇಗ ಅನುಮತಿ ನೀಡಿ ಹುಬ್ಬಳ್ಳಿ: ರಾಜ್ಯದ ಅನುದಾನಿತ ಶಾಲಾ, ಕಾಲೇಜುಗಳಲ್ಲಿ 2015 ರ ನಂತರ ಖಾಲಿ ಆಗಿರುವ ಹುದ್ದೆಗಳ ಭರ್ತಿ ಮಾಡಲು ಆಡಳಿತ ಮಂಡಳಿಗೆ ಅನುಮತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ (ಕೆಆರ್‌ಎಂಎಸ್‌ಎಸ್) ನಿಯೋಗದ ಸದಸ್ಯರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಧಾರವಾಡದಲ್ಲಿ ಮಂಗಳವಾರ ಮನವಿ ಸಲ್ಲಿಸಿದರು. ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, […]
ದಿನಾಂಕ: 16-9-2024 ರ ಸೋಮವಾರ ಬೆಳಿಗ್ಗೆ ೬-೪೫ಕ್ಕೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಲಯ, ಯಾದವಸ್ಮೃತಿಯಿಂದ ಕಾರ್ಯಾಲಯ ಪ್ರಮುಖರಾದ ಶ್ರೀ ಜೆ.ಎಂ ಜೋಷಿರವರ ಮಾರ್ಗದರ್ಶನದಲ್ಲಿ ಬೆಂಗಳೂರು ವಿಭಾಗ ಪ್ರಮುಖರಾದ ಶ್ರೀ ಗಂಗಪ್ಪ, ಉತ್ತರ ಜಿಲ್ಲೆ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ.ಜಿ ಕೂಡಗಿ, ಕಾರ್ಯದರ್ಶಿ ಶ್ರೀ ಹರಿದಾಸ್‌ರವರ ನೇತೃತ್ವದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಚಿದಾನಂದ ಪಾಟೀಲ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್‌ರವರ ಸಹಯೋಗದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಪದಾಧಿಕಾರಿಗಳ ಒಂದು ದಿನದ ಸಹಲ್ […]
ಧಾರವಾಡ: ಕೆ.ಆರ್.ಎಂ.ಎಸ್.ಎಸ್ ಸಂಸ್ಥಾಪನ ದಿನ ಹಾಗೂ ಶಿಕ್ಷಕರ ದಿನಾಚರಣೆ ನಿಮಿತ್ತ ಪ್ರೇರಣಾ ದಿವಸ ಮತ್ತು ಒಂದು ದಿನದ ವಿಚಾರ ಸಂಕಿರಣ ಉದ್ಘಾಟನೆ 4-9-2024 ರಂದು ಕರ್ನಾಟಕ ವಿಶ್ವವಿದ್ಯಾಲಯದ ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ನೆರವೇರಿತು. “ಶಿಕ್ಷಕರ ಅಭಿವೃದ್ಧಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಉಪಕ್ರಮಗಳು” “ಟೀಚರ್ ಡೆವಲಪ್‌ಮೆಂಟ್ : ಯುಜಿಸಿ ಇನಿಷೀಯಟಿವ್ಸ್” ವಿಷಯದ ಮೇಲೆ ಡಾ. ತ್ಯಾಗರಾಜ, ಕುಲಪತಿಗಳು, ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರು ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಡಾ. ಪ್ರಮೋದ ಗಾಯಿ ಸರ್ ನಿವೃತ್ತ ಕುಲಪತಿಗಳು […]
ಜೀವನದಲ್ಲಿ ಜನ್ಮ ನೀಡಿದ ತಂದೆ-ತಾಯಿ ಹಾಗೂ ವಿದ್ಯೆ ಕಲಿಸಿದ ಗುರುವನ್ನು ಎಂದೂ ಮರೆಯಬಾರದು ಎಂದು ಬಾರತೀಯ ಶಿಕ್ಷಣ ಮಂಡಲದ ಉತ್ತರ ಪ್ರಾಂತದ ಮಹಿಳಾ ಪ್ರಕಲ್ಪ ಪ್ರಮುಖ ಪ್ರತಿಭಾ ಚಾಮಾ ಹೇಳಿದರು. ನಗರದ ಅರುಣೋದಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗುರು ಕರುಣೆ ಇಲ್ಲದೆ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಗುರುವಿನ ಮಾರ್ಗದರ್ಶನ ಬಹಳ ಅವಶ್ಯಕ ಎಂದು ತಿಳಿಸಿದರು. ಮಂಡಳದ ಶಿಕ್ಷಕ ಪ್ರಕೋಷ್ಠದ ಸಂಚಾಲಕ ಬಸವರಾಜ ಸ್ವಾಮಿ ಮಾತನಾಡಿ ಭಾರತೀಯ […]