ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರೌಢಶಾಲಾ ವಿಭಾಗದಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸುಮಾರು ವರ್ಷಗಳಿಂದ ಆ ಶಾಲೆ ಹಿರಿಯ ಸಹ ಶಿಕ್ಷಕರುಗಳು ಕಾರ್ಯನಿರ್ವಹಿಸುತ್ತಿರುವರು ಪ್ರತ್ಯೇಕವಾದ DDO ಕೋಡ್ ಹೊಂದಿರುವ ಪ್ರೌಢ ವಿಭಾಗದಲ್ಲಿ ಅವರಿಗೆ ಪ್ರಭಾರ ಭತ್ಯೆ, ಗಳಿಕೆ ರಜೆಯನ್ನು ಕೊಡುತ್ತಿದ್ದು, ಈಗ ಪ್ರೌಢ ವಿಭಾಗದಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ ಸೃಷ್ಟಿಸಿಲ್ಲ ಎಂದು ಆದೇಶದಲ್ಲಿ ತಿಳಿಸಿರುವುದು, ಗೊಂದಲ ಸೃಷ್ಟಿಸಿದೆ.
ಹೀಗಾಗಿ ಪ್ರಭಾರ ಭತ್ಯೆ, ಗಳಿಕೆ ರಜೆ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಸುಮಾರು ಬಾರಿ ಮುಖ್ಯೋಪಾಧ್ಯಾಯರಿಗೆ ಬಡ್ತಿ ಕೊಟ್ಟರೂ ಸಹ ಸದರಿ ಹುದ್ದೆಯು ಈ ಕಾರಣದಿಂದ ಬಹಳಷ್ಟು ದಿನಗಳಿಂದ ಖಾಲಿಯೇ ಉಳಿದಿದೆ. ಕೂಡಲೇ ಸರಕಾರಿ ಪದವಿಪೂರ್ವ ಕಾಲೇಜುಗಳ ಪ್ರೌಢ ವಿಭಾಗದಲ್ಲಿ ಮುಖ್ಯೋಪಾಧ್ಯಾಯರ ಹುದ್ದೆಯನ್ನು ಸೃಜಿಸಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಅನುಕೂಲ ಮಾಡಿಕೊಡಬೇಕಾಗಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಕಲ್ಬುರ್ಗಿ ವತಿಯಿಂದ ಮಾನ್ಯ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಲ್ಬುರ್ಗಿ ವಿಭಾಗ ಪ್ರಮುಖ ಮಹೇಶ ಬಸರಕೋಡ, ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪಾಟೀಲ, ರುದ್ರಪ್ಪ ಚಟ್ನನಳ್ಳಿ, ನೆಲೋಗಿ ಪ್ರಭಾರ ಮುಖ್ಯಗುರುಗಳಾದ ದೇವೇಂದ್ರಪ್ಪ ಗುಂಡಾಪುರ ಹಾಗೂ ಇತರರು ಉಪಸ್ಥಿತರಿದ್ದರು.