ವಿದ್ಯೆ ಕಲಿಯಲು ಆಸಕ್ತಿಯುಳ್ಳವರೇ ಕಲಿಸಲು ಯೋಗ್ಯರು ಶಿಕ್ಷಕರಾದವರು ಪ್ರತಿಕ್ಷಣ ವಿದ್ಯಾರ್ಥಿಗಳಾಗಿರಬೇಕು ಎಂದು ದಿನಾಂಕ 7/8-05-2022 ರ ಎರಡು ದಿನಗಳು ಬೆಂಗಳೂರಿನ ಹತ್ತಿರದ ಸುವರ್ಣಮುಖ ಆಶ್ರಮದಲ್ಲಿ ಶಿಕ್ಷಣ ಸಂಕುಲದ ಕಡೆಯಿಂದ ನಡೆದ ಶಿಕ್ಷಣ ವಿಕಾಸ ವರ್ಗದಲ್ಲಿ ಶ್ರೀ ಶ್ರೀ ವೀರೇಶಾನಂದ ಸ್ವಾಮಿಯಜಿಯವರು ಹೇಳಿದರು.
ದಿನಾಂಕ: 7-5-2022 ರಂದು ಶಿಕ್ಷಣ ಸಂಕುಲದ ಶಿಕ್ಷಣ ವಿಕಾಸ ವರ್ಗವನ್ನು ಉದ್ಘಾಟಿಸುತ್ತಾ ಭಾರತೀಯ ಜ್ಞಾನ ಪರಂಪರೆಯ ಉನ್ನತ ವಿಚಾರಧಾರೆಗಳನ್ನು ತಿಳಿಸಿದರು. ಸರಸ್ವತಿ ಮಾತೆ ಪುಷ್ಪಾರ್ಚನೆಯೊಂದಿಗೆ ವಿಕಾಸ ವರ್ಗ ಪ್ರಾರಂಭವಾಯಿತು. ಜಿ.ಆರ್ ಜಗದೀಶ್ರವರು ಶಿಕ್ಷಣ ಕ್ಷೇತ್ರದಲ್ಲಿರುವವರು ತಮ್ಮ ಜ್ಞಾನ ಭಂಡಾರವನ್ನು ಪ್ರತಿದಿನ ಹೆಚ್ಚಿಸುತ್ತಿರಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತೀಯ ಕೇಂದ್ರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದರಿಂದ ಶಿಕ್ಷಕರು ಭಾರತೀಯ ಶಿಕ್ಷಣದ ಬಗ್ಗೆ ಹೆಚ್ಚು ಜ್ಞಾನ ಹೊಂದಿರಬೇಕೆಂದು ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ಶಿಕ್ಷಣ ಸಂಕುಲದ ಸಂಚಾಲಕರಾದ ಚಿದಾನಂದ್ ಪಾಟೀಲ್ರವರು ವಿಕಾಸ ವರ್ಗದಲ್ಲಿರುವವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಪ್ರಥಮ ದಿನದ ಎರಡನೇ ಗೋಷ್ಠಿಯನ್ನು ಸುವರ್ಣಮುಖಿ ಆಶ್ರಮದ ಸಂಸ್ಥಾಪಕರಾದ ಶ್ರೀ ಡಾ|| ನಾಗರಾಜ್ರವರು ತೆಗೆದುಕೊಂಡು ವಿದೇಶದಲ್ಲಿ ಎಷ್ಟೇ ಹಣವನ್ನು ಸಂಪಾದಿಸುತ್ತಿದ್ದರೂ ಭಾರತಮಾತೆಯ ಒಡಲಲ್ಲಿ ಸಿಗುವ ಆನಂದ ಇನ್ನೆಲ್ಲೂ ಸಿಗಲಾರದು ಎಂಬ ಭಾವನೆಯಿಂದ ನಾನು ವಿದೇಶದಿಂದ ಹಿಂತಿರುಗಿ ಭಾರತ ಮಾತೆಯ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು. ಭಾರತದಲ್ಲಿ ಭ್ರಷ್ಟಾಚಾರವಿಲ್ಲದಂತಾಗಬೇಕು ಎಂದು ಆಶಿಸಿದರು.
ಎರಡನೇ ಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಸಂದೀಪ್ ಬೂದಿಹಾಳ್ರವರು ವಹಿಸಿದ್ದರು.
ಜಗತ್ತಿನ ಸೃಷ್ಟಿಯಾಗಿರುವುದೇ ಭಗವಂತನ ಸೇವೆಗೆಂದು. ಎಲ್ಲವನ್ನು ತ್ಯಜಿಸಿ ಸಂತೋಷವಾಗಿರಿ. ಇದರ ಅರ್ಥ ಎಲ್ಲವನ್ನು ಬಿಡುವುದು ಎಂದರ್ಥವಲ್ಲ. ನಮ್ಮ ಕರ್ಮಫಲಕ್ಕೆ ತಕ್ಕಂತೆ ಎಲ್ಲವನ್ನು ಭಗವಂತ ನೀಡುತ್ತಾನೆ. ಅವಶ್ಯಕತೆ ಇರುವಷ್ಟನ್ನು ಮಾತ್ರ ನಮ್ಮಲ್ಲಿಟ್ಟುಕೊಂಡು ಉಳಿದುದನ್ನು ಸಮಾಜಕ್ಕೆ ಕೊಡಬೇಕೆಂದು ಹೇಳಿದರು.
ಮೂರನೇ ಗೋಷ್ಠಿಯನ್ನು ಭಾರತೀಯ ವಿಜ್ಞಾನ ಎಂಬ ಶೀರ್ಷಿಕೆಯಡಿ ಡಾ|| ರಾಮಚಂದ್ರ ಶೆಟ್ಟಿಯವರು ತೆಗೆದುಕೊಂಡು ಋಗ್ವೇದದಲ್ಲಿಯೇ ವಿಜ್ಞಾನದ ತಳಹದಿಯಿದೆ. ವಿಜ್ಞಾನವೆಂಬುದು ನೂತನ ವಿಚಾರವೇನಲ್ಲ. ಹೊಸವರ್ಷವನ್ನು ಚೈತ್ರ ಮಾಸದಿಂದಲೇ ಪ್ರಾರಂಭ ಮಾಡಬೇಕು. September septa ಎಂಬುದು ಹೆಸರಿನಲ್ಲಿ Septa ಎಂದರೆ 7, octo ಎಂದರೆ ಎಂಟು ಎಂದು ಅರ್ಥ. ಮಾರ್ಚಿನಿಂದ ಲೆಕ್ಕಹಾಕಿದರೆ ಮಾತ್ರ Sep-7 & Oct 8 ಆಗಲು ಸಾಧ್ಯ. ಆದರೆ ಕ್ಯಾಲೆಂಡರ್ನಲ್ಲಿ September 9 ನೇ ತಿಂಗಳೆಂದು ಲೆಕ್ಕ ಹಾಕುತ್ತಾರೆ. ಇದೆಲ್ಲಾ ಅವೈಜ್ಞಾನಿಕವೆಂದು. ಶ್ರೀಮತಿ ವಿಜಯಲಕ್ಷ್ಮಿಯವರು ಹೇಳಿದರು. ಇವರು ಈ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
ನಾಲ್ಕನೇ ಗೋಷ್ಠಿಯಲ್ಲಿ ಜಿ.ಆರ್.ಜಗದೀಶ್ರವರು ಭಾರತೀಯ ಶಿಕ್ಷಣವು ಭಾರತೀಯ ಕೇಂದ್ರಿತವಾಗಿರಬೇಕೆಂದು ತಿಳಿಸಿದರು. ನಮ್ಮನ್ನು ನಾವು ಮರೆತು ಉಳಿದುದೆಲ್ಲವನ್ನು ಗ್ರೇಟ್ ಎನ್ನುವುದು, ಎಲ್ಲವೂ ನನಗೋಸ್ಕರವೇ ಇರುವುದು ಎಂದು ತಿಳಿಸುವುದು ವಿದೇಶಿ ಚಿಂತನೆ. ಶಿಕ್ಷಣವಿರುವಾಗ ವ್ಯವಹಾರಕ್ಕಲ್ಲ, ತ್ಯಾಗದಿಂದಲೇ ಅಮೃತತ್ವ. ಧರ್ಮ, ಅರ್ಥ, ಕಾಮ, ಮೋಕ್ಷದ ಸಾಧನೆ ಪಡೆಯುವುದೇ ಭಾರತೀಯ ಚಿಂತನೆ ಎಂದು ಹೇಳಿದರು.
ಐದನೇ ಗೋಷ್ಠಿಯ ವಿಚಾರ ಸಂಸ್ಕೃತ ವಾಙ್ಮಯದಲ್ಲಿ ವಿಜ್ಞಾನ ಎಂಬುದಾಗಿತ್ತು. ಎರಡನೇ ದಿನದ ಪ್ರಥಮ ಗೋಷ್ಠಿಯನ್ನು ವೇದ ವಿಜ್ಞಾನ ಗುರುಕುಲದ ಪ್ರಧಾನ ಆಚಾರ್ಯರಾದ ಡಾ|| ಮಹಾಬಲೇಶ್ವರ ಭಟ್ರವರು ಭಾರತೀಯ ಜ್ಞಾನ ಪರಂಪರೆಯಲ್ಲಿ ಭಗವದ್ಗೀತೆ ವಿಚಾರದ ಮೇಲೆ ತೆಗೆದುಕೊಂಡು ಭಗವದ್ಗೀತೆ ಎಂಬುದು ವಿಶ್ವದ ಎಲ್ಲರಿಗೂ ಜೀವನದ ದಾರಿಯನ್ನು ತೋರಿಸುವ ಮಾರ್ಗದರ್ಶಕ ಎಂದು ಹೇಳಿದರು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳ ಪರಿಚಯ ಮಾಡಿಕೊಟ್ಟರು.
ಕೊನೆಯದಾಗಿ ಶ್ರೀಮತಿ ಸುಜಾತ ದೇವಸೂರು ಇವರು ವಂದೇ ಮಾತರಂ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಲಾಯಿತು. ಶಿಕ್ಷಣ ವಿಚಾರ ವರ್ಗದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಎ.ಬಿ.ವಿ.ಪಿ, ಸಂಸ್ಕೃತಭಾರತಿ, ಜನಸೇವಾ ವಿದ್ಯಾಕೇಂದ್ರ, ಗುರುಕುಲ, ರಾಷ್ಟ್ರೋತ್ಥಾನ, ಸಮಿತಿ ಹೀಗೆ ಅನೇಕ ಸಂಘಟನೆಗಳಿಂದ ೫೦ ಶಿಕ್ಷಕರು ಭಾಗವಹಿಸಿ ವಿಚಾರ ವರ್ಗವನ್ನು ಯಶಸ್ವಿಗೊಳಿಸಿದರು.