ಶಿಕ್ಷಕರ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ದಿನಾಂಕ 30-06-2022 ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಾನ್ಯ ಶ್ರೀ ಬಿ. ಸಿ. ನಾಗೇಶ್ ಅವರೊಂದಿಗೆ ಚರ್ಚೆ ನಡೆಸಲಾಯಿತು.
ಚರ್ಚೆಯ ವಿಷಯಗಳು :
♦ ಜೆ.ಓ.ಸಿ ಯಿಂದ ವಿಲೀನವಾದ ಶಿಕ್ಷಕರ ಸಮಸ್ಯೆಗಳು.
♦ ಪ್ರೌಢಶಾಲೆಯಿಂದ ಪದವಿ ಪೂರ್ವಕ್ಕೆ ಮತ್ತು ಪದವಿ ಪೂರ್ವ ಉಪನ್ಯಾಸಕರಿಂದ ಪ್ರಾಚಾರ್ಯರ ಹುದ್ದೆಗೆ ಬಡ್ತಿ.
♦ ಹಿಂದಿ ಮತ್ತು ಸಂಸ್ಕೃತ ವಿಷಯ ಶಿಕ್ಷಕರ ಸಮಸ್ಯೆ.
♦ ಹೆಚ್ಚುವರಿ ಪ್ರಕ್ರಿಯೆಯಲ್ಲಿ ಚಿತ್ರಕಲೆ, ಸಂಗೀತ, ವೃತ್ತಿ ಶಿಕ್ಷಣ ಶಿಕ್ಷಕರ ಸಮಸ್ಯೆ.
♦ ಕಲಿಕಾ ಚೇತರಿಕೆ.
♦ ಅನುದಾನಕ್ಕೆ ಒಳಪಡಿಸುವ ಮತ್ತು ಅನುದಾನಿತ ಶಿಕ್ಷಕರ ಸಮಸ್ಯೆಗಳು.
ಈ ಎಲ್ಲ ವಿಷಯಗಳಿಗೆ ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಧನ್ಯವಾದಗಳು.