ಕ.ರಾ.ಮಾ.ಶಿ.ಸಂಘದ ಮತ್ತು ಎಬಿಆರ್ಎಸ್ಎಂನ ಪ್ರಮುಖರು ಮಾನ್ಯ ಬಿ. ಸಿ. ನಾಗೇಶ್ ಶಿಕ್ಷಣ ಸಚಿವರು ಹಾಗೂ ಶಿಕ್ಷಕ ಮತ್ತು ಪದವೀಧರ ಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಶಿಕ್ಷಕರ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ಚರ್ಚಿಸಿದರು. ಮಾನ್ಯ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ಪ್ರೌಢಶಾಲಾ ವಿಭಾಗದ ಸಮಸ್ಯೆಗಳು
1. ಪ್ರೌಢಶಾಲೆಗಳಲ್ಲಿ ವಿಶೇಷ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆ.
2. ಬಡ್ತಿ ಶಿಕ್ಷಕರ ಕಾಲಮಿತಿ ವೇತನ ಬಡ್ತಿಯ ಬಗ್ಗೆ.
3. ಸಂಸ್ಕೃತ ಭಾಷೆಯ ವಿದ್ಯಾರ್ಥಿಗಳಿಗೆ ನಿಲ್ಲಿಸಿದ್ದ ವಿದ್ಯಾರ್ಥಿ ವೇತನವನ್ನು ಮರುಜಾರಿ ಮಾಡುವ ಕುರಿತು.
4. ಅನುದಾನಿತ ಶಿಕ್ಷಕರಿಗೆ ನಿಶ್ಚಿತ ಪಿಂಚಣಿ ಯೋಜನೆ ಜಾರಿಮಾಡುವ ಕುರಿತು ಸ್ವಾತಂತ್ರ ಉದ್ಯಾನವನದಲ್ಲಿ ನಡೆಯುತ್ತಿರುವ ಧರಣಿನಿರತರ ಜೊತೆಯಲ್ಲಿ ಮುಖ್ಯ ಮಂತ್ರಿಗಳ ಸಭೆ ಆಯೋಜಿಸುವ ಕುರಿತು.
5. ಹಿಂದಿ ಶಿಕ್ಷಣದ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಗೆ ಒಂದರಂತೆ ಹಿಂದಿ ವಿಷಯ ಪರಿವೀಕ್ಷಕರ ನೇಮಕ ಮತ್ತು ಪ್ರೌಢಶಾಲೆಗಳಲ್ಲಿ ಹಿಂದಿ ವಿಷಯಕ್ಕೆ ೫ ಅವಧಿಗಳನ್ನು ನೀಡುವ ಕುರಿತು.
6. ದೈಹಿಕ ಶಿಕ್ಷಣದ ಅಭಿವೃದ್ಧಿಗಾಗಿ ಮಂಡನೆಯಾದ ವೈದ್ಯನಾಥ ವರದಿಯ ಅನುಷ್ಠಾನದ ಬಗ್ಗೆ.
7. ಕಾಲ್ಪನಿಕ ವೇತನ ಬಡ್ತಿ.
8. ಶಿಕ್ಷಕರಿಗೆ ಒಂದು ಬಾರಿ ಬಯಸಿದ ಜಿಲ್ಲೆಗಳಿಗೆ ವರ್ಗಾವಣೆಗೆ ಅವಕಾಶ ನೀಡುವ ಬಗ್ಗೆ.
9. ಡಯಟ್ ಮತ್ತು ಸಿ.ಟಿ.ಇ.ಗಳ ಪುನಃರಚನೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಮಾಂತರ ಹುದ್ದೆಗಳನ್ನು ಹೆಚ್ಚಿಸುವ ಬಗ್ಗೆ.
10. ಅನುದಾನ ರಹಿತ ಶಾಲೆಗಳಲ್ಲಿ ಕಾರ್ಯಮಾಡುವ ಶಿಕ್ಷಕರಿಗೆ ಇಲಾಖೆಯ ಎಲ್ಲಾ ತರಬೇತಿಯನ್ನು ನೀಡುವ ಕುರಿತು.
11. ಜಿಲ್ಲಾ ಹಂತದಲ್ಲಿ ಶೈಕ್ಷಣಿಕ ಅದಾಲತ್ ನಡೆಸುವ ಬಗ್ಗೆ.
12. ಜೆ.ಓ.ಸಿ. ಯಿಂದ ವಿಲೀನಗೊಂಡ ವೃತ್ತಿಶಿಕ್ಷಕರ ವೇತನ ಸರಿಪಡಿಸುವ ಬಗ್ಗೆ.
13. 8, 9 ಮತ್ತು 10 ತರಗತಿಗಳಿಗೆ ವಿಭಿನ್ನ ಪರೀಕ್ಷಾ ಪದ್ಧತಿ ಇದ್ದು, ಇದರಿಂದ 10ನೇ ತರಗತಿಯ ಪರೀಕ್ಷೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಆದ್ದರಿಂದ 10ನೇ ತರಗತಿಗೆ ಅನುಸರಿಸುವ ಪದ್ಧತಿಯನ್ನೇ ಉಳಿದ ತರಗತಿಗೂ ಅನುಸರಿಸುವ ಬಗ್ಗೆ.
14. ಅನುದಾನ ರಹಿತ ಪ್ರೌಢಶಾಲೆ ಮತ್ತು ಪಿ.ಯು ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ.
15. ಖಾಲಿ ಇರುವ ಅನುದಾನಿತ ಮತ್ತು ಸರ್ಕಾರಿ ಶಿಕ್ಷಕರ/ ಉಪನ್ಯಾಸಕರ ಹುದ್ದೆಗಳನ್ನು ತುಂಬುವುದು.
16. ಅನುದಾನಿಯ ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಜಾರಿಮಾಡುವ ಕುರಿತು.
ಪದವಿ ಪೂರ್ವ ಶಿಕ್ಷಣ ವಿಭಾಗದ ಸಮಸ್ಯೆಗಳು
1. ವೃತ್ತಿ ಶಿಕ್ಷಣ (ಜೆ.ಓ.ಸಿ) ಇಲಾಖೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಂಡ ಉಪನ್ಯಾಸಕರಿಗೆ ಬಿಎಡ್ ವಿನಾಯಿತಿ ನೀಡಿ ಪ್ರೊಬೆಷನರಿ ಅವಧಿ ಘೋಷಿಸುವ ಬಗ್ಗೆ.
2. ಪ್ರೌಢಶಾಲೆಗಳಿಂದ ಪದವಿಪೂರ್ವ ಹಂತಕ್ಕೆ ೫೦:೫೦ ಅನುಪಾತದಲ್ಲಿ ಬಡ್ತಿ ನೀಡುವುದು.
3. ಉಪನ್ಯಾಸಕರಿಗೆ ನಿಯಮಿತವಾಗಿ ಪ್ರಾಚಾರ್ಯರ ಹುದ್ದೆಗಳಿಗೆ ಬಡ್ತಿ ನೀಡುವ ಕುರಿತು.
4. ಬಡ್ತಿ ಉಪನ್ಯಾಸಕರ ಕಾಲಮಿತಿ ವೇತನ ಬಡ್ತಿಯ ಬಗ್ಗೆ.
5. ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ ವಿಷಯಗಳನ್ನು ಆಧುನಿಕವಾಗಿ ಮತ್ತು ಪ್ರಾಯೋಗಿಕವಾಗಿ ಬೋಧಿಸಲು ವಿಷಯವಾರು ಪ್ರತ್ಯೇಕ ಉಪನ್ಯಾಸಕರನ್ನು ನೇಮಿಸುವುದು. ಅದಕ್ಕಾಗಿ ಸಮಿತಿ ರಚಿಸುವ ಬಗ್ಗೆ.
6. ವಿಭಾಗ ಹಂತದಲ್ಲಿ ಶೈಕ್ಷಣಿಕ ಅದಾಲತ್ ನಡೆಸುವುದು.
7. ಜೆ.ಓಸಿ. ಯಿಂದ ವಿಲೀನಗೊಂಡ ಶಿಕ್ಷಕರ/ ಉಪನ್ಯಾಸಕರ ಖಾಯಂ ಪೂರ್ವ ಸೇವಾ ಅವಧಿಯನ್ನು ಪರಿಗಣಿಸಿ ನಿಶ್ಚಿತ ಪಿಂಚಣಿಗೆ ಒಳಪಡಿಸುವುದು.
8. ದ್ವಿತೀಯ ಪಿ.ಯು.ಸಿ ಮೌಲ್ಯಮಾಪನ ಕೇಂದ್ರಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸುವ ಕುರಿತು.