ಬೆಂಗಳೂರು ಉತ್ತರ ಜಿಲ್ಲೆ ಫೋನ್ ಇನ್ ಉದ್ಘಾಟನಾ ಸಮಾರಂಭ
ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಉತ್ತಮ ಪಡಿಸಲು ವಿದ್ಯಾರ್ಥಿಗಳ ಪಠ್ಯದ ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರಕ್ಕಾಗಿ “ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇಂದು ಬೆಂಗಳೂರು ಉತ್ತರ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಲೋಹಿತಾಶ್ವ ರೆಡ್ಡಿ, ಶಿಕ್ಷಣಾಧಿಕಾರಿಗಳಾದ ಶ್ರೀ ವಿ. ರಮೇಶ ಮತ್ತ ಶ್ರೀಮತಿ ಪಂಕಜಾ ಅವರು ಮತ್ತು ವಿಷಯ ಪರಿವೀಕ್ಷಕರಾದ ಶ್ರೀ.ಮಂಜುನಾಥ, ಶ್ರೀ ರಾಮಲಿಂಗೇಗೌಡ ಮತ್ತು ವೆಂಕಟೇಶ ಬಾಬು ಹಾಗೂ ಮಾಧ್ಯಮಿಕ ಶಿಕ್ಷಕ ಸಂಘ ದ ಪದಾಧಿಕಾರಿಗಳು ಉದ್ಘಾಟಿಸಿದರು.
ಫೋನ್ ಇನ್ ಉದ್ಘಾಟನೆ-ಬೆಂಗಳೂರು ದಕ್ಷಿಣ ಜಿಲ್ಲೆ
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ ಉಪನಿರ್ದೇಶಕರು ಬೆಂಗಳೂರು ದಕ್ಷಿಣ ಜಿಲ್ಲೆಯ ಇವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಾಗಿ ಫೋನ್ ಇನ್ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ಜರುಗಿತು. ಶಿಕ್ಷಣಾಧಿಕಾರಿಗಳಾದ ಶ್ರೀ ಎನ್. ವೆಂಕಟೇಶ್ ಮತ್ತು ಶ್ರೀ ಸಿ.ಹೆಚ್. ಮತ್ತಯ್ಯರವರು ಉದ್ಘಾಟಿಸಿ, ಸಂಘವು ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮ ಪಡಿಸಲು ಹಾಗೂ ಸಂದೇಹವನ್ನು ನಿವಾರಿಸಿ ಧೈರ್ಯ ತುಂಬಲು ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಇದರ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯುವಂತಾಗಲು ಸಂಬಂಧಿಸಿದ ಎಲ್ಲ ಅಧಿಕಾರಿಗಳೂ ಕ್ರಮವಹಿಸಬೇಕು ಎಂದು ಹೇಳಿದರು. ದಕ್ಷಿಣ ಜಿಲ್ಲೆಯ ಕಾರ್ಯದರ್ಶಿಗಳಾದ ಡಾ|| ವೆಂಕಟರಮಣ ದೇವರು ಭಟ್ಟರವರು ನಿರೂಪಣೆ ಮಾಡಿ ಗಣ್ಯರಿಗೆ ಸ್ವಾಗತ ಕೋರಿ ಸಂಘದ ಕಾರ್ಯ ಚಟುವಟಿಕೆಗಳ ಪರಿಚಯ ಮಾಡಿದರು. ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲ್ರವರು ಮಾತನಾಡಿ – ಸಂಘವು ಕಳೆದ ಆರು ವರ್ಷಗಳಿಂದ ಫೋನ್ ಇನ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಇದು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮ ಪಡಿಸಲು ಪೂರಕ ಯೋಜನೆಯಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಹಾಗೂ ಪೋಷಕರ ಅಭಿಪ್ರಾಯವಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ – ಎಂದು ತಿಳಿಸಿದರು. ಸರ್ಕಾರಿ ಪ್ರೌಢ ಶಾಲೆ ಕಾಡುಗೋಡಿಯ ಉಪಪ್ರಾಂಶು ಪಾಲರಾದ ಶ್ರೀ ಮುನಿರಾಜು ರವರು ವಂದನಾರ್ಪಣೆ ಮಾಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ವಿಷಯ ಪರಿವೀಕ್ಷಕರಾದ ಶ್ರೀ ಜಿಯಾ ಉಲ್ಲಾ (ಕನ್ನಡ), ಶ್ರೀ ಮಸ್ಸೂರ್ ಎಂ.(ಸಮಾಜ ವಿಜ್ಞಾನ), ಶ್ರೀ ಕೆಂಪೇಗೌಡ ಜಿ.(ಗಣಿತ), DYPC ಶ್ರೀಮತಿ ನಾಗಮಣಿ, APCO ಶ್ರೀಮತಿ ಚೇತನಾ ಹಾಗೂ ಶ್ರೀಮತಿ ಶಿಲ್ಪಕಲಾ, ECO ಗಳಾದ ಶ್ರೀಮತಿ ಶಾಂತಲಾ ಹೆಗಡೆ, ಶ್ರೀಮತಿ ಮೀನಾಕ್ಷಿ ಗಾಣಿಗೇರ ಹಾಗೂ ಶ್ರೀ ಗುರುರಾಜ ಮುಂತಾದ ಅಧಿಕಾರಿಗಳು ಪಾಲ್ಗೊಂಡರು. ಬೆಂಗಳೂರು ದಕ್ಷಿಣದ ಅಧ್ಯಕ್ಷರಾದ ಶ್ರೀ ಸುರೇಂದ್ರ, ಖಜಾಂಚಿಗಳಾದ ಶ್ರೀ ಚನ್ನ ಕೃಷ್ಣಪ್ಪರವರು, ವಿಷಯ ಪರಿಣತರಾದ ಶ್ರೀಮತಿ ಇಂದ್ರಾಣಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.