ಪ್ರೊ. ಜೆ. ಪಿ. ಸಿಂಘಾಲ್‌ಜೀ – ಭಾವಪೂರ್ಣ ಶ್ರದ್ಧಾಂಜಲಿ

ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಟಿಕ ಮಹಾಸಂಘ (ABRSM) ದ ನಿಕಟಪೂರ್ವ ಅಧ್ಯಕ್ಷರು, ಶಿಕ್ಷಣ ತಜ್ಞರು, ರಾಜಸ್ಥಾನ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು ಆದಂತಹ ಪ್ರೊ. ಜೆ. ಪಿ. ಸಿಂಘಾಲ್ ಅವರ ದೇಹಾವಸಾನದಿಂದ ಶೈಕ್ಷಣಿಕ ಕ್ಷೇತ್ರದ ರಾಷ್ಟ್ರ ಜೀವನದಲ್ಲಿ ಒಂದು ದೇದೀಪ್ಯಮಾನ ನಕ್ಷತ್ರದ ಅಸ್ತಂಗತವಾಗಿದೆ. ಪ್ರೊ. ಜೆ. ಪಿ, ಸಿಂಘಾಲ್ ಅವರು ಈಗ ನೆನಪು ಮಾತ್ರ.

ದೇಶದ ಎಲ್ಲಾ ರಾಜ್ಯಗಳ ಶಿಕ್ಷಕರ ಸಮಸ್ಯೆಗಳನ್ನು ಕ್ರೋಢೀಕರಿಸಿ ಶಿಕ್ಷಣತಜ್ಞರು ಮತ್ತು ABRSM ನಿಯೋಗದೊಂದಿಗೆ ಕೇಂದ್ರ ಶಿಕ್ಷಣ ಸಚಿವರನ್ನು ಭೇಟಿ ಮಾಡಿ, ಕೇಂದ್ರ ಸರಕಾರದ ಆಯಕಟ್ಟನ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದ ಮುಖಾಂತರ ಅನೇಕ ಸಮಸ್ಯೆಗಆಗೆ ಪರಿಹಾರ ದೊರಕಿಸಿ ಕೊಟ್ಟಿದ್ದಾರೆ. ABRSM ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ, ಅಧ್ಯಕ್ಷರಾಗಿ ನೂರಾರು ವಿಚಾರ ಸಂಕಿರಣ, ಬೃಹತ್ ಸಮ್ಮೇಳನ, ಶಿಕ್ಷಾಭೂಷಣ ಪ್ರಶಸ್ತಿ ಸಮಾರಂಭಗಳು, ದುಂಡು ಮೇಜಿನ ಸಭೆ, ಅಂತರಾಷ್ಟ್ರೀಯ ಸಮ್ಮೇಳನ ಹೀಗೆ ಹಲವು ಭೂಮಿಕೆಗಳಲ್ಲಿ ಪ್ರಭಾವಿಯಾಗಿ ಕಾರ್ಯನಿರ್ವಹಿಸಿದ ಪ್ರೊ. ಜೆ. ಪಿ. ಸಿಂಘಾಲ್ ಅವರು ಉದಾತ್ತ ಮಾನವತಾವಾದಿ ಮತ್ತು ಸಂವೇದನಾಶೀಲ ವ್ಯಕ್ತಿಯಾಗಿದ್ದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪರವಾಗಿ ಪ್ರೊ. ಜೆ. ಪಿ. ಸಿಂಘಾಲ್ ಅವರ ಕುಟುಂಬ ಮತ್ತು ಪ್ರೀತಿ ಪಾತ್ರರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ. ಅಂತಹ ಮಹಾನ್ ಸಂಘಟನಾಕಾರ, ಶಿಕ್ಷಣ ತಜ್ಞರಿಗೆ ನಾವು ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಅಗಲಿದ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

Highslide for Wordpress Plugin