ವಾರ್ಷಿಕ ಸಾಮಾನ್ಯ ಸಭೆ 2025

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವಾರ್ಷಿಕ ಸಾಮಾನ್ಯ ಸಭೆ ದಿನಾಂಕ ೧೨, ೧೩ ಜುಲೈ ೨೦೨೫

ಜನಸೇವಾ ವಿದ್ಯಾ ಕೇಂದ್ರ ಚನ್ನೇನಹಳ್ಳಿ ಬೆಂಗಳೂರು ಇಲ್ಲಿ ೨೦೨೪ -ನೇ ಸಾಲಿಗೆ ಸಂಬಂಧಿಸಿದ ವಾರ್ಷಿಕ ಸಾಮಾನ್ಯ ಸಭೆ ಜುಲೈ ಮಾಸದ ೧೨ ಮತ್ತು ೧೩ನೇ ದಿನಾಂಕಗಳಂದು ಎರಡು ದಿನಗಳ ಕಾಲ ನಡೆಯಿತು.

ಪ್ರಥಮ ದಿನ ಉದ್ಘಾಟನಾ ಅವಧಿಯಲ್ಲಿ ಶ್ರೀ ಸಂದೀಪ್ ಬೂದಿಹಾಳ ಅಧ್ಯಕ್ಷರು, ಕೆಆರ್‌ಎಂಎಸ್‌ಎಸ್ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಾರ್ಷಿಕ ಸಾಮಾನ್ಯ ಸಭೆಯ ಉದ್ದೇಶವನ್ನು ತಿಳಿಸಿಕೊಟ್ಟರು.

ಡಾಕ್ಟರ್ ವಿಷ್ಣು ಭರತ್ ಆಲಂಪಲ್ಲಿ, ಅಧ್ಯಕ್ಷರು, ಎ.ಪಿ.ಎಸ್ ಶಿಕ್ಷಣ ಸಂಸ್ಥೆ ಬೆಂಗಳೂರು, ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಗುರುವಿನ ಮಹತ್ವ, ಶಿಕ್ಷಕರ ಕರ್ತವ್ಯಗಳನ್ನು ವಿವರಿಸಿದರು. ಬ್ರಹ್ಮ ವಿಷ್ಣು ಮಹೇಶ್ವರರ ಪ್ರತಿಬಿಂಬದಂತೆ ಶಿಕ್ಷಕರು ಸಮಾಜದಲ್ಲಿ ಅತ್ಯಂತ ಗೌರವಕ್ಕೆ ಪಾತ್ರರಾದವರು. ಮೊನ್ನೆಯಷ್ಟೇ, ಆಷಾಢ ಪೌರ್ಣಿಮೆ ದಿನ ಗುರುಪೂರ್ಣಿಮೆಯನ್ನು ಆಚರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಅತ್ಯಂತ ಉನ್ನತ ಸ್ಥಾನವನ್ನು ಅಲಂಕರಿಸಿದ ತಮ್ಮೆಲ್ಲರಿಗೂ, (ಎಲ್ಲಾ ಶಿಕ್ಷಕ ಬಂಧುಗಳಿಗೂ) ಶುಭವಾಗಲೆಂದು ಹಾರೈಸಿದರು.

ABRSM ನ ಸಹ ಸಂಘಟನಾ ಮಂತ್ರಿ ಶ್ರೀ ಲಕ್ಷ ಣ್‌ರವರು ಮಾತನಾಡಿ ಕೆಆರ್‌ಎಂಎಸ್‌ಎಸ್‌ಗೆ ಇದೀಗ ೬೦ ವರ್ಷ ತುಂಬಿದೆ. ಅನೇಕ ಹಿರಿಯರು ಕರ್ನಾಟಕದಲ್ಲಿ ಈ ನಮ್ಮ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ಅವರಲ್ಲಿ ಪೂಜ್ಯ ಕೃ ನರಹರಿಯವರ ನಿಸ್ವಾರ್ಥಸೇವೆ ಹಾಗೂ ಸಮರ್ಪಣೆ ಅಗಾಧವಾದುದೆಂದು ಸ್ಮರಿಸಿದರು ೧೯೯೮ರಲ್ಲಿ ಎಬಿಆರ್‌ಎಸ್‌ಎಮ್ ಸ್ಥಾಪನೆಯಾಯಿತು. ದೇಶದಾದ್ಯಂತ ಇಂದು ಅನೇಕ ಸದಸ್ಯರನ್ನು ಒಳಗೊಂಡಿದೆ. ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನೊಳಗೊಂಡ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ನಮ್ಮ ಶಿಕ್ಷಕ ಸಂಘಟನೆ ಅಹರ್ನಿಶಿ ಶ್ರಮಿಸುತ್ತಿದೆ ಎಂದರು.

ಇಂತಹ ದೇಶ ಭಕ್ತ ಶಿಕ್ಷಕ ಸಂಘಟನೆಗೆ ಸ್ಫೂರ್ತಿ ಖSS. ಇಂದಿಗೆ ಖSS ಜನ್ಮ ತಾಳಿ ೧೦೦ ವರ್ಷಗಳು ಗತಿಸಿವೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಶತಮಾನೋತ್ಸವ ನಡೆಯಲಿದೆ.

೧೯೨೫- ವಿಜಯದಶಮಿಯಂದು ಮಾನನೀಯ ಡಾಕ್ಟರ್ ಕೇಶವ ಬಲಿರಾಂ ಹೆಡೆಗೇವಾರ್ ಖSS ನ್ನು ಸ್ಥಾಪಿಸಿದರು. ಇವರು ಮಹಾ ದ್ರಷ್ಟಾರರು. ದೇಶದ ಭವಿಷ್ಯತ್ತನ್ನು ಊಹಿಸಿ ನಮ್ಮಲ್ಲಿ ಒಗ್ಗಟ್ಟಿನ ಅಗತ್ಯವಿದೆ ಎಂದು ಮನಗಂಡು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದರು. ಇಂದು ಲಕ್ಷೋಪಲಕ್ಷ ಸ್ವಯಂಸೇವಕರು ಸಂಘದ ಶಾಖೆಯ ಮೂಲಕ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಭಾರತಾಂಬೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದಾರೆ. ವಿಸ್ಮ ತಿಗೆ ಒಳಗಾಗಿ ನಾವು ನಮ್ಮತನವನ್ನು ಮರೆಯುತ್ತಿದ್ದೇವೆ. ನಮ್ಮ ದೇಶದ ಇತಿಹಾಸದ ಬಗ್ಗೆ, ಗುರುಕುಲ ಶಿಕ್ಷಣದ ಬಗ್ಗೆ, ಶ್ರೇಷ್ಠ ಪರಂಪರೆಯ ಬಗ್ಗೆ ಶಿಕ್ಷಕರಾದ ನಮಗೆ ಸದಾ ಹೆಮ್ಮೆ ಇರಲಿ. ವಸುದೈವ ಕುಟುಂಬಕಮ್ ಎಂಬ ವಿಶಾಲ ಭಾವನೆ ನಮ್ಮದು. ಈ ಹಿನ್ನೆಲೆಯಲ್ಲಿ ವಿವಿಧ ಗೋಷ್ಠಿಗಳಲ್ಲಿ ಅನೇಕ ಹಿರಿಯರು ಮಾರ್ಗದರ್ಶನ ಮಾಡಲಿದ್ದಾರೆ. ನಾವೆಲ್ಲರೂ ಹೊಸ ಚೈತನ್ಯ ನವ ಸ್ಫೂರ್ತಿ ಪಡೆದು ಇಲ್ಲಿಂದ ತೆರಳೋಣ ಎಂಬುದಾಗಿ ಎರಡು ದಿನದ ಸಾಮಾನ್ಯ ಸಭೆಯ ಉದ್ದೇಶವನ್ನು ಸ್ಪಷ್ಟಪಡಿಸಿದರು.

ಶ್ರೀ ಭರತ್ ಕುಮಾರ್, ದಕ್ಷಿಣ ಮಧ್ಯಕ್ಷೇತ್ರಿಯ ಖSS ಪ್ರಚಾರಕರು, ಇಂಜಿನೀಯರ್ ಪದವೀಧರರು. ೩೪ ವರ್ಷಗಳಿಂದ ಖSS ಕಾರ್ಯಕರ್ತರು- ಇವರು ಕಾರ್ಯಕರ್ತ ಎಂಬ ವಿಷಯದ ಬಗ್ಗೆ ಬೈಠಕ್ ತೆಗೆದುಕೊಂಡರು. ನಮ್ಮ ಶಿಕ್ಷಕ ಸಂಘಟನೆಯ ಕಾರ್ಯಕರ್ತರು ಯಾವೆಲ್ಲಾ ಗುಣ ಲಕ್ಷಣಗಳನ್ನು ಹೊಂದಿರಬೇಕು ಎಂಬುದನ್ನು ತಮ್ಮ ಅವಧಿಯಲ್ಲಿ ಉದಾಹರಣೆ ಸಹಿತ ವಿವರಿಸಿದರು.

  • ಶಿಕ್ಷಕ ತನ್ನ ತರಗತಿಯಲ್ಲಿ ರಾಷ್ಟ್ರೀಯ ವಿಚಾರವನ್ನೂ ಸಹ ಬೋಧಿಸಬೇಕು.
  • ಶಿಕ್ಷಣ ಇಲಾಖೆಯ ಃ.ಇ.ಔ, ಆ.ಆ.P.I, ಅ.P.I- ಮುಂತಾದ ಎಲ್ಲಾ ಹಂತದ ಅಧಿಕಾರಿಗಳ ಪರಿಚಯ ಹೊಂದಿರಬೇಕು. ಸಮಸ್ಯೆ ನಿವಾರಣೆಗೆ ಯತ್ನಿಸಬೇಕು.
  • ಉ.ಔ (ಉovಣ. ಔಡಿಜeಡಿ) ಅಧ್ಯಯನ ಮತ್ತು ಅನುಪಾಲನೆ ಅಗತ್ಯ
  • ಇತರ ವ್ಯಕ್ತಿಗಳ ಶಕ್ತಿ ಮತ್ತು ದೌರ್ಬಲ್ಯಗಳ ಅರಿವು ಇರಬೇಕು.
  • ಶಿಕ್ಷಣ ಇಲಾಖೆಗೆ ವಿವಿಧ ಸಂದರ್ಭಗಳಲ್ಲಿ ಹತ್ತಾರು ಸಮಸ್ಯೆಗಳ ಬಗ್ಗೆ ಮನವಿ ಕೊಡಬೇಕಾಗುತ್ತದೆ. ಅಂತಹ ಮನವಿ, ಅರ್ಜಿಗಳನ್ನು ಸ್ವತಃ ಬರೆಯುವ ಸಾಮರ್ಥ್ಯ ಹೊಂದಿರಬೇಕು.
  • ತನ್ನ ವ್ಯಾಪ್ತಿಗೆ ಬರುವ ಸರ್ಕಾರಿ/ ಅನುದಾನಿತ/ ಖಾಸಗಿ/ ಶಾಲೆಗಳ ಸಮಗ್ರ ವಿವರ ಇರಬೇಕು.
  • ಸಂಘಟನೆಯ ಧೇಯೋದ್ದೇಶಗಳ ಸ್ಪಷ್ಟ ಪರಿಕಲ್ಪನೆ ಇರಬೇಕು, ಜೊತೆಗೆ ಅವುಗಳ ಅನುಪಾಲನೆಗೆ ಕಟ್ಟಿಬದ್ಧರಾಗಿರಬೇಕು; ತನ್ನ ಜವಾಬ್ದಾರಿಯ ಅರಿವು ಹಾಗೂ ಬದ್ಧತೆ ಅತೀವ ಮುಖ್ಯ.
  • ತರಗತಿಗಳಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲಬೇಕು, ನಗುಮುಖ, ಪ್ರಸನ್ನತೆ, ಕ್ರಿಯಾಶೀಲತೆ ಶಿಕ್ಷಕನಿಗೆ ಇರಬೇಕು.
  • ವಿದ್ಯಾರ್ಥಿಗಳು ಸದಾಕಾಲ ಶಿಕ್ಷಕರ ಉಪದೇಶಕ್ಕಿಂತಲೂ ಶಿಕ್ಷಕರ ನಡೆ-ನುಡಿಗಳನ್ನು ಹೆಚ್ಚು ಗಮನಿಸುತ್ತಾರೆ ಮತ್ತು ಅನುಕರಿಸುತ್ತಾರೆ.
  • ಕೆಲವು ರಚನಾತ್ಮಕ ಕ್ರಿಯೆಗಳಿಂದ ಸಮಗ್ರ ಶಾಲಾ ವಾತಾವರಣವನ್ನು ಬದಲಾಯಿಸಬಹುದು; ಸುಗಂಧ ಬೀರುವ ಹಾಗೆ ಮಾಡಬಹುದು; ಉದಾಹರಣೆಗೆ ವಿದ್ಯಾರ್ಥಿಗಳ ಜನ್ಮದಿನಾಚರಣೆ ಸಂದರ್ಭದಲ್ಲಿ ಗಿಡ ನೆಡುವ ಪರಿಪಾಠವನ್ನು ಆರಂಭಿಸಬಹುದು.
  • ನಿತ್ಯವೂ ವಿದ್ಯಾರ್ಥಿಯು ಮಲಗುವ ಮೊದಲು, ಪಠ್ಯಪುಸ್ತಕವನ್ನು ಬಿಟ್ಟು, ಇತರ ಜೀವನ ಮೌಲ್ಯಾಧಾರಿತ ಪುಸ್ತಕಗಳ ಐದು ಪುಟಗಳನ್ನು ಕಡ್ಡಾಯವಾಗಿ ಓದುವ ಹಾಗೆ ಪ್ರೇರಣೆ ನೀಡಬೇಕು
  • ಕಾರ್ಯಕರ್ತರ ಇನ್ನೊಂದು ಪ್ರಮುಖ ಸ್ವಭಾವ ಹೀಗಿರಬೇಕು. ಏನೆಂದರೆ ಸಂಘಕ್ಕಾಗಿ ಹೆಚ್ಚು ಹೆಚ್ಚು ಸಮಯ ನೀಡುವುದು.
  • ಶಿಕ್ಷಕ ಸಂಪರ್ಕ, ಸ್ನೇಹ, ಒಟ್ಟೊಟ್ಟಿಗೆ ಕೆಲಸಮಾಡುವ ಕಾರ್ಯಪದ್ಧತಿ
  • ತನ್ನ ವಾಸಸ್ಥಳದಿಂದ ೩೦ ರಿಂದ ೪೦ ಕಿಲೋಮೀಟರ್‌ವರೆಗೆ ಪ್ರವಾಸ ಮಾಡಬೇಕು.
  • ಸಮಾಜದಲ್ಲಿ ಸಾಮರಸ್ಯ, ದೇಶದ ಏಕತೆ, ಸಂಘಟನಾತ್ಮಕ ಶಕ್ತಿ-ಇವುಗಳಿಗೆ ಶಿಕ್ಷಕ ಸದಾ ಹಂಬಲಿಸಬೇಕು.

ಶ್ರೀ ಕೆ.ಹರೀಶ್, ಅಧ್ಯಕ್ಷರು, ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಗಳು ಹಾಗೂ ಇಸ್ರೋದ ಮಾಜಿ ವಿಜ್ಞಾನಿ ಬೃಹತ್ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ನಮ್ಮ ಭಾರತೀಯ ಶ್ರೇಷ್ಠ ಪರಂಪರೆಯಾಧಾರಿತ ಶಿಕ್ಷಣವನ್ನು ನೀಡುತ್ತಾ ಬಂದಿರುವ ಶ್ರೀಯುತರು ತಮ್ಮ ಜೀವನದಲ್ಲಿ ನಡೆದ ಸತ್ಯ ಘಟನೆಗಳನ್ನು ಉಲ್ಲೇಖಿಸಿ ಇಂದು ಶಿಕ್ಷಕರ ಪಾತ್ರ ಎಷ್ಟು ಪ್ರಧಾನವಾದುದು ಮತ್ತು ಎಷ್ಟೇ ಸವಾಲುಗಳು ಎದುರಾದರೂ ಎದೆಗುಂದದೇ ಧ್ಯೇಯವಾದಿಗಳಾಗಿ ಹೇಗೆ ಮುನ್ನುಗ್ಗಬೇಕು ಎಂಬುದನ್ನು ಉದಾಹರಣೆ ಸಹಿತ ಸಭೆಗೆ ಮನವರಿಕೆ ಮಾಡಿಕೊಟ್ಟರು.

ಶ್ರೀ ಯಂಡಮೂರಿ ವೀರೇಂದ್ರನಾಥರ ದುಡ್ಡು ದುಡ್ಡು ಕಾದಂಬರಿ ಓದಿದ ಮೇಲೆ ಸ್ವತಂತ್ರವಾಗಿ ಕಾಯಕವನ್ನು ಆರಂಭಿಸಬೇಕೆಂದು ತೀರ್ಮಾನಿಸಿ ಶಿಕ್ಷಣ ಸಂಸ್ಥೆಯನ್ನು ಕಟ್ಟುವ ಸಂಕಲ್ಪ ಮಾಡಿದ ಹಿನ್ನೆಲೆಯನ್ನು ವಿವರಿಸಿದರು. ಖ್ಯಾತ ವಾಗ್ಮಿ ದಿವಂಗತ ವಿದ್ಯಾನಂದ ಶೆಣೈ ಇವರ ಪ್ರಭಾವ ನನ್ನ ಮೇಲಾಯಿತು; ತಾಯಿ ಭಾರತೀಯ ಸೇವೆಯನ್ನು ಯಾವುದಾದರೂ ಒಂದು ರೂಪದಲ್ಲಿ ಮಾಡಬೇಕೆಂಬ ನಿರ್ಧಾರಕ್ಕೆ ಬಂದೆ; ಪೂಜ್ಯ ಶ್ರೀ ಜಗದಾತ್ಮಾನಂದರ ಶ್ರೇಷ್ಠ ಕೃತಿ ಬದುಕಲು ಕಲಿಯಿರಿ ಎಂಬ ಗ್ರಂಥವೂ ಸಹ ನನ್ನ ಮೇಲೆ ಗಾಢ ಪರಿಣಾಮ ಬೀರಿದೆ ಎಂಬುದಾಗಿ ಸ್ಮರಿಸಿಕೊಂಡರು.

೨೦೦೪ರಲ್ಲಿ ವಾಗ್ದೇವಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ ಶ್ರೀಯುತರು ಈ ರೀತಿಯ ರಚನಾತ್ಮಕ ಕಾರ್ಯಕ್ಕೆ ಪ್ರೇರಣೆ ನೀಡಿದ್ದು ಖSS ಎಂದು ಹೇಳಿದರು. ಎಲ್ಲಾ ಸಕಾರಾತ್ಮಕ ಅಂಶಗಳಿಗೆ ತಾಯಿಬೇರು ಖSS ಎಂದು ಅಭಿಪ್ರಾಯಪಟ್ಟರು.

ದೈವಭಕ್ತಿ ಮತ್ತು ದೇಶಭಕ್ತಿ- ಇವು ಸದಾ ಅತ್ಯವಶ್ಯಕ. ಈ ಸಮಾಜ ಕಾರ್ಯ ದೈವದತ್ತವಾದದು- ಆದ್ದರಿಂದ ಶಿಕ್ಷಕರಾಗಿ ನಾವು ದೇಶಭಕ್ತಿ ಜಾಗ್ರತವಾಗುವಂತೆ ಮಕ್ಕಳಿಗೆ ಆರಂಭದಿಂದಲೇ ಬೋಧಿಸಬೇಕು. ಭವ್ಯ ಭಾರತದ ನಿರ್ಮಾಣವೇ ನಮ್ಮೆಲ್ಲರ ಗುರಿ. ಈ ಬಗ್ಗೆ ಸದಾ ಅರಿವು ಅತ್ಯಗತ್ಯ. ಶಿಕ್ಷಕರು ವಿದ್ಯಾರ್ಥಿಗಳ ಮುಂದಿನ ಸುಂದರ ಬದುಕನ್ನು ರೂಪಿಸಬಲ್ಲರು. ಈ ನಿಟ್ಟಿನಲ್ಲಿ ಸಂಘವು ನೂರಾರು ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡುವಂತೆ ಮಾಡುತ್ತಿದೆ. ನಾವು ಸದಾ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಕನಸು ನನಸಾಗುವ ಹೆಜ್ಜೆ ಇಡೋಣ. ಹೀಗೆ ಶ್ರೀಯುತರು ತಮ್ಮ ಜೀವನಾನುಭವದ ಅಮೃತವನ್ನೇ ಸಭಿಕರಿಗೆ ಉಣ ಬಡಿಸಿದ್ದು ವಿಶೇಷವಾಗಿತ್ತು.

ಶ್ರೀ ಶಶಿಲ್ ನಮೋಶಿ (ವಿಧಾನ ಪರಿಷತ್ ಸದಸ್ಯರು ಈಶಾನ್ಯ ಪದವೀಧರ ಕ್ಷೇತ್ರ) ಶ್ರೀಯುತರು ಶಾಲಾ ಶಿಕ್ಷಣ ಇಲಾಖೆಯ ಇಂದಿನ ಕಾರ್ಯವೈಖರಿಯ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆಯಾಗಿದೆ. ಉದಾಹರಣೆಗೆ ವೆಬ್‌ಕಾಸ್ಟಿಂಗ್ ಜಾರಿಯಾಗಿದೆ. ಇತ್ತೀಚೆಗೆ ಜಿಲ್ಲಾ ಪಂಚಾಯತ್ ಅ.ಇ.ಔ ರವರು ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿ ಮಾರ್ಗದರ್ಶನ ಮಾಡುತ್ತಿರುವುದು ಅಷ್ಟು ಸೂಕ್ತವಲ್ಲ ಇಲಾಖೆಯಲ್ಲಿ ಆ.S.ಇ.ಖ.ಖಿ, ಆ.I.ಇ.ಖಿ ನ ಅಧಿಕಾರಿಗಳು ಹಾಗೂ ಅ.P.I, ಆ.ಆ.P.I, ಃ.ಇ.ಔ ಮುಂತಾದ ಸಮರ್ಥ ಅಧಿಕಾರಿಗಳಿದ್ದಾರೆ. ಅವರೆಲ್ಲರೂ ಎಂದಿನಂತೆ ಶಾಲಾ ಶಿಕ್ಷಣದ ಸುಧಾರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ; ಈ ಪದ್ಧತಿ ಮುಂದುವರಿಯಬೇಕು.

  • ಪ್ರತಿವರ್ಷವೂ ಶೈಕ್ಷಣಿಕ (ಮೇ ೨೯ರಂದು) ವರ್ಷದ ಆರಂಭದಲ್ಲೇ ಶೈಕ್ಷಣಿಕ ಕ್ಯಾಲೆಂಡರ್ ಮುಖ್ಯ ಶಿಕ್ಷಕರಿಗೆ ತಲುಪುವ ಹಾಗೆ ಮಾಡಬೇಕು.
  • ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳೂ ಸಹ ತಾವೇ ಸಿದ್ಧಪಡಿಸಿದ ಕ್ಯಾಲೆಂಡರ್‌ಗೆ ಬದ್ಧವಾಗಿರಬೇಕು ಉದಾಹರಣೆಗೆ ಪರೀಕ್ಷಾ ವೇಳಾಪಟ್ಟಿ, ಶಿಕ್ಷಕರಿಗೆ ತರಬೇತಿ ಮುಂತಾದವು.
  • ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆಗಾಗಿ ವಿವಿಧ ಚಟುವಟಿಕೆಗಳು ಜೂನ್ ತಿಂಗಳಿನ ಮೊದಲ ವಾರದಲ್ಲೇ (ವಿಶೇಷ ತರಗತಿ ಮುಂತಾದವು) ಆರಂಭವಾಗಬೇಕು. ವರ್ಷದ ಕೊನೆಯಲ್ಲಿ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಮುಖ್ಯ ಶಿಕ್ಷಕರಿಗೆ ಒತ್ತಡ ಹೇರುವ ಪದ್ಧತಿ ಸೂಕ್ತವಲ್ಲ
  • ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ತರಬೇತಿ ಹೊಂದಿದ ಶಿಕ್ಷಕರ ನೇಮಕಾತಿ ಆಗಬೇಕು.\
  • ಈಐಓ ಪದ್ಧತಿ ಜೂನ್ ೧ ತಿಂಗಳು ಮಾತ್ರ ಇರಬೇಕು.
  • ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿ ಆಗಬೇಕು. ಸರ್ಕಾರಿ ಪ್ರೌಢಶಾಲೆಗಳಲ್ಲಿರುವಂತೆ ಅತಿಥಿ ಶಿಕ್ಷಕರ ನೇಮಕಾತಿ ಪದ್ಧತಿಯನ್ನು ಅನುದಾನಿತ ಶಾಲೆಗಳಿಗೂ ವಿಸ್ತರಿಸಬೇಕು.
  • ಓಇP- ೨೦೨೦ ಕೂಡಲೇ ಎಲ್ಲಾ ಹಂತದಲ್ಲೂ ಜಾರಿಯಾಗಬೇಕು.\
  • ಇತ್ತೀಚೆಗೆ ದ್ವಿಭಾಷಾ ನೀತಿ ಬಗ್ಗೆ ಅಲ್ಲಲ್ಲಿ ಚರ್ಚೆಯಾಗುತ್ತಿದೆ ಇದನ್ನು ಬಲವಾಗಿ ವಿರೋಧಿಸುವುದಲ್ಲದೆ ಈಗಿರುವ ತ್ರಿಭಾಷಾ ಸೂತ್ರ ಪದ್ಧತಿಯೇ ಮುಂದುವರೆಯುವಂತೆ ನೋಡಿಕೊಳ್ಳಬೇಕು.

ಒಟ್ಟಾರೆಯಾಗಿ ಗುಣಮಟ್ಟದ ಕಲಿಕೆಗೆ ಸರ್ಕಾರ ಕೂಡಲೇ ಕ್ರಮ ವಹಿಸುವಂತಾಹಾಗಬೇಕು ಶಿಕ್ಷಕರ ಸಂಘಟನೆ ಬಲಿಷ್ಠವಾಗಿ ಬೆಳೆಯಬೇಕು. ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು ಸಾಮೂಹಿಕವಾಗಿ ನಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಾಗ ನಮ್ಮ ಸಂಘಟಿತ ಶಕ್ತಿಗೆ ಖಂಡಿತ ಸರ್ಕಾರ ತಲೆಬಾಗುತ್ತದೆ ಎಂಬ ಅಂಶವೇ ಶ್ರೀಯುತರ ಮಾತಿನ ಸಾರಾಂಶವಾಗಿತ್ತು.

ಮುಂದುವರಿದ ಗೋಷ್ಠಿಯಲ್ಲಿ ಶ್ರೀ ಶಿವಪೂಜಿ ಕೋಟಿ ರವರು ಎಬಿಆರ್‌ಎಸ್‌ಎಂ ಬಗ್ಗೆ ಮಾತನಾಡಿ ಕೆಆರ್ ಎಂ ಎಸ್ ಎಸ್ ಗೆ ಸಂಬಂಧಿಸಿದ ಹತ್ತು ಹಲವು ಸಮಸ್ಯೆಗಳಿಗೆ ಎ. ಬಿ. ಆರ್. ಎಸ್. ಎಮ್. ಸಂಘಟನೆ ಖಂಡಿತವಾಗಿಯೂ ಪರಿಹಾರವನ್ನು ಒದಗಿಸಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕೆ. ಆರ್. ಎಂ. ಎಸ್. ಎಸ್. ಜೊತೆಗೆ ಎ. ಬಿ. ಆರ್. ಎಸ್. ಎಮ್ ಹಮ್ಮಿಕೊಳ್ಳುವ ಅನೇಕ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸೋಣ ಎಂಬುದಾಗಿ ಅಭಿಪ್ರಾಯಪಟ್ಟರು

ಶ್ರೀ ಎನ್ ತಿಪ್ಪೇಸ್ವಾಮಿ ಬಿ ಇ ಪದವೀಧರರು ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹರು ಆರ್ ಎಸ್ ಎಸ್ ಇವರು ಆರ್ ಎಸ್ ಎಸ್ ಸಂಘಟನೆಯ ಸಮಾಜಮುಖಿ ಕಾರ್ಯಗಳ ಸಮಗ್ರ ಚಟುವಟಿಕೆಗಳನ್ನು ಸಭೆಯ ಗಮನಕ್ಕೆ ತಂದರು ಇಂದು ಆರ್ ಎಸ್ ಎಸ್ ಅಡಿಯಲ್ಲಿ ೩೮ಕ್ಕೂ ಹೆಚ್ಚು ವಿವಿಧ ಸಂಸ್ಥೆಗಳು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ವ್ಯಕ್ತಿ ನಿರ್ಮಾಣವೇ ಸಂಘದ ಮುಖ್ಯ ಗುರಿಯಾಗಿದೆ ದೇಶ ಮೊದಲು ಎಂಬ ಭಾವನೆಯನ್ನು ಶಾಖೆಗಳ ಮೂಲಕ ನಿತ್ಯವೂ ಸಂಘ ಕಲಿಸುತ್ತಾ ಬಂದಿದೆ. ನಿಸ್ವಾರ್ಥ ಮನೋಭಾವನೆಯಿಂದ ದೇಶಕ್ಕಾಗಿ ಸಮಯ ನೀಡುವ ಅಸಂಖ್ಯ ಕಾರ್ಯಕರ್ತರ ದೊಡ್ಡ ತಂಡ ಎಲ್ಲಾ ಕಡೆ ಇಂದು ಕಾಣ ಸಿಗುತ್ತದೆ ಸಂಘದ ಕಾರ್ಯ ಪದ್ಧತಿಯ ಮುಖ್ಯ ಜೀವಾಳವೇ ಸಾಮೂಹಿಕ ನಿರ್ಣಯ, ನಿರಂತರ ಪ್ರವಾಸ ಆರ್ ಎಸ್ ಎಸ್ ಇದು ವ್ಯಕ್ತಿ ನಿರಪೇಕ್ಷ ಸಂಘಟನೆ. ವಿದ್ಯಾಭಾರತಿ ಶಾಲೆಗಳು -೩೦,೦೦೦, ಸೇವಾ ಭಾರತಿ ಕೇಂದ್ರಗಳು -೧,೪೦,೦೦೦ , ವನವಾಸಿ ಕಲ್ಯಾಣ ಯೋಜನೆಯ ಪೂರ್ಣಾವಧಿ ಕಾರ್ಯಕರ್ತರು ೧,೨೦೦, ಸಂಘದ ಶಾಖೆಗಳು ೮೩,೦೦೦, ಸಂಘದಲ್ಲಿ ಪೂರ್ಣಾವಧಿ ಕಾರ್ಯಕರ್ತರು ೩೫೦೦. ಹೀಗೆ ಆರ್.ಎಸ್.ಎಸ್.ನ ವಿರಾಟ ಸ್ವರೂಪವನ್ನು ಶ್ರೀಯುತರು ಪರಿಚಯಿಸಿದರು. ಮುಂದುವರೆದು ಸಂಘದ ಶತಮಾನೋತ್ಸವದ ಆಚರಣೆಯ ವೈವಿಧ್ಯವನ್ನು ವಿವರಿಸಿದರು. ನಾವೆಲ್ಲರೂ ನಮ್ಮ ನಮ್ಮ ಊರುಗಳಲ್ಲಿ ಈ ಸಂಭ್ರಮದ ಶತಮಾನೋತ್ಸವದಲ್ಲಿ ಭಾಗವಹಿಸೋಣ ಎಂಬುದಾಗಿ ಅಭಿಪ್ರಾಯಪಟ್ಟರು.

ಇನ್ನುಳಿದಂತೆ ಶ್ರೀ ಲಕ್ಷ ಣ್ ಅವರು ಜಿಲ್ಲಾವಾರು ಉಪಸ್ಥಿತಿಯ ಮಾಹಿತಿಯನ್ನು ಸ್ವೀಕರಿಸಿದರು ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ವಿವಿಧ ಯೋಜನೆಗಳನ್ನು ವಿವರಿಸಿದರು. ಅಖಿಲ ಭಾರತೀಯ ಶಾಲಾ ಶಿಕ್ಷಣದ ಪ್ರಮುಖರಾದ ಶ್ರೀ ಶಿವಾನಂದ ಸಿಂಧನಕೇರ ಅವರು ಎಬಿಆರ್‌ಎಸ್‌ಎಮ್ ವತಿಯಿಂದ ಈ ವರ್ಷ ಕೈಗೊಳ್ಳಬೇಕಾದ ವಿವಿಧ ಸಂಘಟನಾತ್ಮಕ ಚಟುವಟಿಕೆಗಳನ್ನು ಸವಿಸ್ತಾರವಾಗಿ ವಿವರಿಸಿದರು. ಪ್ರಶಿಕ್ಷಣ ಪ್ರಮುಖರಾದ ರಘು ಅಕಮಂಚಿಯವರು ರಾಷ್ಟ್ರ ಪುನರ್ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಎಂಬ ವಿಷಯದ ಬಗ್ಗೆ ಶಿಕ್ಷಕರೊಂದಿಗೆ ಸಂವಾದ ರೂಪದಲ್ಲಿ ಗೋಷ್ಠಿಯನ್ನು ಸ್ವೀಕರಿಸಿದರು. ನಮ್ಮ ಸಂಘಟನೆಯ ಟ್ರೇಡ್ ಯೂನಿಯನ್ ಅಲ್ಲ. ಬದಲಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಆರಂಭವಾಗಿ ರಾಷ್ಟ್ರೀಯ ವಿಚಾರಗಳ ಮೂಲಕ ದೇಶವನ್ನು ಪರಮವೈಭವಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸುವ ಸಂಘಟನೆ. ರಾಜ್ಯ, ರಾಷ್ಟ್ರ ಎಂಬ ಪದದ ಅರ್ಥ ವಿಶ್ಲೇಷಣೆ miಟಿಜ-miಟಿಜseಣ ಬಗ್ಗೆ ವಿವರಣೆ; ಅಭಿಪ್ರಾಯ ಸಂಗ್ರಹ ಮುಂತಾದವುಗಳಿಂದ ಶ್ರೀಯುತರು ಎಲ್ಲಾ ಶಿಕ್ಷಕರಿಗೂ ಸಹ ಗೋಷ್ಠಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿದ್ದು ವಿಶೇಷವಾಗಿತ್ತು

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ೨೦೨೪ ೨೫ನೇ ಸಾಲಿನ ಲೆಕ್ಕಪತ್ರವನ್ನು ರಾಜ್ಯ ಖಜಾಂಚಿ ಶ್ರೀ ಸುರೇಂದ್ರರವರು ಮಂಡಿಸಿದರು. ಜೊತೆಯಲ್ಲಿ ಪ್ರಸ್ತುತ ಕಾರ್ಯಾಲಯ ಪ್ರಮುಖರಾದ, ನಿಕಟಪೂರ್ವ ಕೋಶಾಧ್ಯಕ್ಷರಾದ ಶ್ರೀ ಜೆ.ಎಂ ಜೋಶಿಯವರು ಸಹಕರಿಸಿದರು.

ದಿನಾಂಕ ೧೩.೦೭.೨೦೨೫ರ ಮಧ್ಯಾಹ್ನ ೩.೦೦ ರಿಂದ ೪.೩೦ ರವರೆಗೆ ಸಮಾರೋಪ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ ಇವರು ಎರಡು ದಿನದ ಸಾಮಾನ್ಯ ಸಭೆಯಲ್ಲಿ ಆದ ಚರ್ಚೆಯ ಸಾರಾಂಶಗಳ ಮೇಲೆ ಬೆಳಕು ಚೆಲ್ಲಿದರು. ಶ್ರೀ ಲಕ್ಷ್ಮಣ್ ಸಹ ಸಂಘಟನಾ ಮಂತ್ರಿ ಇವರು ಮಾತನಾಡಿ ಎರಡು ದಿನಗಳಲ್ಲಿ ತೆಗೆದುಕೊಂಡ ವಿವಿಧ ವಾರ್ಷಿಕ ಯೋಜನೆಗಳ ಅನುಷ್ಠಾನದ ಬಗ್ಗೆ ನಾವೆಲ್ಲರೂ ಗಮನಹರಿಸೋಣ ಎಂಬುದಾಗಿ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

ರಾಜ್ಯ ಪದಾಧಿಕಾರಿಗಳು ಹಾಗೂ ಎಲ್ಲಾ ವಿಭಾಗ ಪ್ರಮುಖರನ್ನು ಒಳಗೊಂಡಂತೆ ಅನೇಕ ಪದಾಧಿಕಾರಿಗಳು ಮುಖ್ಯ ಅತಿಥಿಗಳನ್ನು ಪರಿಚಯಿಸುವುದು, ವೇದಿಕೆ ಹಂಚಿಕೊಳ್ಳುವುದು, ಕಾರ್ಯಕ್ರಮ ನಿರೂಪಣೆ, ವಿವಿಧ ಗೋಷ್ಠಿಗಳ ನಿರ್ವಹಣೆ, ಹಿರಿಯರ ಜೊತೆ ಉಪಸ್ಥಿತಿ ಹೀಗೆ ಎರಡು ದಿನವೂ ಸಹ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬಹಳ ಯೋಜನಾ ಬದ್ಧವಾಗಿ ಮತ್ತು ಅಚ್ಚುಕಟ್ಟಾಗಿ ವಾರ್ಷಿಕ ಸಾಮಾನ್ಯ ಸಭೆ ಸಂಪನ್ನವಾಯಿತು. ವಸತಿ ವರ್ಗವಾಗಿದ್ದ ಕಾರಣ ಮೊದಲಿನ ದಿನ ಸಂಜೆ ಭೋಜನೋತ್ತರ ಅನೌಪಚಾರಿಕ ಕಾರ್ಯಕ್ರಮವಿತ್ತು ಇದರಲ್ಲಿ ಬಹುತೇಕ ಶಿಕ್ಷಕರು ತಮ್ಮಲ್ಲಡಗಿರುವ ಪ್ರತಿಭೆಯ ಅನಾವರಣ ಮಾಡಿ ಎಲ್ಲರನ್ನೂ ಮನರಂಜಿಸಿದರು. ಸುಮಾರು ೭೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಚಿಂತನ ಮಂಥನದಲ್ಲಿ ಪಾಲ್ಗೊಂಡಿದ್ದರು. ೧೦ ಜನ ಶಿಕ್ಷಕರು ಇದೇ ಪ್ರಥಮ ಬಾರಿ ಈ ವರ್ಗದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸುಸಜ್ಜಿತ ಕಟ್ಟಡ, ವಸತಿ, ಸಭಾಂಗಣ ಒದಗಿಸಿದ ಜನಸೇವಾ ವಿದ್ಯಾ ಕೇಂದ್ರದ ಎಲ್ಲಾ ಪ್ರಮುಖರಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಕೃತಜ್ಞತೆಗಳನ್ನು ಸಮರ್ಪಿಸುತ್ತದೆ ಹಾಗೂ ಚಿರಋಣಿಯಾಗಿರುತ್ತದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ಶಿಕ್ಷಕ ಮಿತ್ರರಿಗೂ ಪದಾಧಿಕಾರಿಗಳಿಗೂ ನಮ್ಮ ಕೆಆರ್‌ಎಂಎಸ್‌ಎಸ್ ಆಭಾರಿಯಾಗಿರುತ್ತದೆ.

ಭಾರತ ಮಾತಾಕಿ ಜೈ | ವಂದೇ ಮಾತರಂ.

Highslide for Wordpress Plugin