ಬೆಂಗಳೂರು ಉತ್ತರ ಜಿಲ್ಲೆ
ದಿನಾಂಕ: ೨೦-೮-೨೦೨೫ ಹಾಗೂ ೨೧-೮-೨೦೨೫ರಂದು ಮಾಧ್ಯಮಿಕ ಶಿಕ್ಷಕ ಬೆಂಗಳೂರು ಉತ್ತರ ಜಿಲ್ಲಾ ಘಟಕದಿಂದ ಸದಸ್ಯತಾ ಅಭಿಯಾನ ಕಾರ್ಯಕ್ರಮವು ದಿನವಿಡಿ ಜರುಗಿತು. ಈ ಅಭಿಯಾನದಲ್ಲಿ ರಾಜ್ಯದ ಕಾರ್ಯಾಲಯ ಪ್ರಮುಖರಾದ ಶ್ರೀ ಜೆ.ಎಂ ಜೋಶಿ, ಬೆಂಗಳೂರು ಉತ್ತರ ಮತ್ತು ಗ್ರಾಮಾಂತರ ಜಿಲ್ಲೆಯ ಪ್ರಮುಖರಾದ ಶ್ರೀ ಗಂಗಪ್ಪ, ಬೆಂಗಳೂರು ಉತ್ತರ ಜಿಲ್ಲೆಯ ಗೌರವಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಕೂಡಗಿ, ಅಧ್ಯಕ್ಷರಾದ ಶ್ರೀ ಹರಿದಾಸ್.ಬಿ.ಆರ್, ಪ್ರಧಾನ ಕಾರ್ಯದರ್ಶಿಯಾದ ಶ್ರೀ ಕಿರಣ್ ಕುಮಾರ್, ಬೆಂಗಳೂರು ಉತ್ತರ ವಲಯ-೩ರ ಕಾರ್ಯದರ್ಶಿಯಾದ ಶ್ರೀ ರಾಮಕೃಷ್ಣ ಮತ್ತು ಇತರ ಪದಾಧಿಕಾರಿಗಳು ಭಾಗವಹಿಸಿ, ಶಿಕ್ಷಕ ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡುವುದರ ಮೂಲಕ ಸದಸ್ಯತಾ ಅಭಿಯಾನವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಕಲಬುರಗಿ ಜಿಲ್ಲೆ
ಕಲಬುರಗಿ, ಆಗಸ್ಟ್-೧೮ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ರಾಜ್ಯ ಕಾರ್ಯದರ್ಶಿಗಳಾದ ಮಹೇಶ ಬಸರಕೋಡ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಲಬುರಗಿ ವಿಭಾಗ ಪ್ರಮುಖರಾದ ಚಂದ್ರಶೇಖರ ಪಾಟೀಲ, ಜಿಲ್ಲಾಧ್ಯಕ್ಷರಾದ ಸಂಜೀವಕುಮಾರ ಪಾಟೀಲ, ಶ್ರೀಶೈಲ, ಶ್ರೀಮತಿ ಸೇವಂತಾ ಚವ್ಹಾಣ ಶ್ರೀಮತಿ ಸ್ವಾತಿ ಉಪಸ್ಥಿತರಿದ್ದರು.
ಬೀದರ್ ಜಿಲ್ಲೆ
ಬೀದರ್ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಒಂದು ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದು ಸಂಘದ ಜಿಲ್ಲಾಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ ಹೇಳಿದರು. ಋಷಿಕೇಶ ಶಿಕ್ಷಣ ಸಂಸ್ಥೆ ಸಂಚಾಲಿತ ನಗರದ ಅರುಣೋದಯ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ನಡೆದ ಸದಸ್ಯತ್ವ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಗಸ್ಟ್ ೩೧ರ ವರೆಗೆ ಪ್ರತಿ ತಾಲ್ಲೂಕು, ವಲಯ ಮಟ್ಟದಲ್ಲಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು. ಅಭಿಯಾನಕ್ಕೆ ಚಾಲನೆ ನೀಡಿದ ಸಂಘದ ಕಲಬುರಗಿ ವಿಭಾಗ ಪ್ರಮುಖ ಚಂದ್ರಶೇಖರ ಪಾಟೀಲ ಮಾತನಾಡಿ, ಸಂಘವು ಆರು ದಶಕಗಳಿಂದ ಶಿಕ್ಷಕರ ಸಂಘಟನೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸುತ್ತಾ ಬಂದಿದೆ. ಶಿಕ್ಷಕರು ಸಂಘಟನೆಯ ಶಕ್ತಿಯಾಗಿದ್ದಾರೆ. ಪ್ರತಿಯೊಬ್ಬ ಶಿಕ್ಷಕರೂ ಸದಸ್ಯತ್ವ ಪಡೆಯುವ ಮೂಲಕ ಸಂಘವನ್ನು ಬಲಪಡಿಸಬೇಕು ಎಂದು ಹೇಳಿದರು.
ಶಾಲೆಯ ೩೦ ಶಿಕ್ಷಕರು ಸಂಘದ ಸದಸ್ಯತ್ವ ಪಡೆದರು. ಋಷಿಕೇಶ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷ ಕುಮಾರ ಮಂಗಳೂರೆ, ಮುಖ್ಯ ಶಿಕ್ಷಕರಾದ ಲಕ್ಷ್ಮಣ ಪೂಜಾರಿ, ನರಸಾರೆಡ್ಡಿ, ಸಂತೋಷ ಸೋಲಪುರೆ, ಉಮಾಕಾಂತ ಮೀಸೆ, ಆನಂದಜಾಧವ್, ರಮೇಶ ಪಾಟೀಲ, ಸುಮೀತ್ ಮಂಗಳೂರೆ, ರವೀಂದ್ರ ಹೂಗಾಡೆ, ಮಾರುತೆಪ್ಪ ಗೋರನಳ್ಳಿ, ಪ್ರಶಾಂತ, ಗಣಪತಿ, ಪೀಟರ್, ಅಲ್ಯಾವತಿ ಹೊಸದೊಡ್ಡೆ ಮತ್ತಿತರರು ಇದ್ದರು. ನೀಲಮ್ಮಗಜಲೆ ನಿರೂಪಿಸಿದರು. ಮಮತಾ ಮಂಗಳೂರೆ ವಂದಿಸಿದರು.
ಮಂಡ್ಯ ಜಿಲ್ಲೆ
ದಿ.೨೨.೦೮.೨೫ರಂದು ಮಾಧ್ಯಮಿಕ ಶಿಕ್ಷಕ ಸಂಘ ,ಮಂಡ್ಯ ಜಿಲ್ಲಾ ವತಿಯಿಂದ ಸದಸ್ಯತ್ವ ಅಭಿಯಾನದಲ್ಲಿ ಸರ್ಕಾರಿ ಪ.ಪೂ.ಕಾಲೇಜು ಹಾಗೂ ಪ್ರೌಢಶಾಲೆಯ ಶಿಕ್ಷಕರನ್ನು ಸದಸ್ಯತ್ವ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ ಗಂಗಾಧರಾಚಾರಿಯವರು ಜಿಲ್ಲಾಧ್ಯಕ್ಷರಾದ ಶ್ರೀ ಕಾಳೇಗೌಡರು, ಮಹಿಳಾ ಪ್ರಮುಖರಾದ ಶ್ರೀಮತಿ ಉಷಾ ಮೇಡಮ್ ರವರು ಕೋಶಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ರವರು ಉಪಸ್ಥಿತರಿದ್ದರು.
ಮಾಧ್ಯಮಿಕ ಶಿಕ್ಷಕ ಸಂಘ, ಮಂಡ್ಯ ಜಿಲ್ಲಾ ಘಟಕದ ಸದಸ್ಯತ್ವ ಅಭಿಯಾನದಲ್ಲಿ ಎಂ.ಇ.ಎಸ್. ಪ್ರೌಢಶಾಲೆ, ಹಾಗೂ ಡೆಫೋಡಿಲ್ಸ್ ಇಂಟರ್ ನ್ಯಾಷನಲ್ ಪ್ರೌಢಶಾಲೆಯ ಶಿಕ್ಷಕರನ್ನು ಸದಸ್ಯತ್ವ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ವೃಷಬೇಂದ್ರಸ್ವಾಮಿ ರವರು, ಉಪಾಧ್ಯಕ್ಷರಾದ ಶ್ರೀಗಂಗಾಧರಾಚಾರಿಯವರು, ಜಿಲ್ಲಾಧ್ಯಕ್ಷರಾದ ಶ್ರೀ ಕಾಳೇಗೌಡರು, ರವರು ಉಪಸ್ಥಿತರಿದ್ದರು.
ಮೈಸೂರು ಜಿಲ್ಲೆ
ದಿ. ೨೨.೦೮.೨೦೨೫ ರಂದು ಕೆ.ಆರ್.ಎಂ.ಎಸ್ಎಸ್ ಮೈಸೂರು ಜಿಲ್ಲಾ ಘಟಕದ ಸದಸ್ಯತ್ವ ಅಭಿಯಾನದ ಪ್ರಯುಕ್ತ ಶಿಕ್ಷಕರ ಸದಸ್ಯತ್ವ ಮಾಡಿಸಲಾಯಿತು, ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ರಾಜ್ಯ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.