ವಿವಿಧೆಡೆಗಳಲ್ಲಿ ಗುರುವಂದನ ಕಾರ್ಯಕ್ರಮ

ಮಂಡ್ಯ ಜಿಲ್ಲೆ
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ( ರಿ) ಬೆಂಗಳೂರು. ಜಿಲ್ಲಾ ಶಾಖೆ ಮಂಡ್ಯ ಹಾಗೂ ಮಂಡ್ಯ ಎಜುಕೇಶನ್ ಸೊಸೈಟಿ. ಇವರ ಸಂಯುಕ್ತ ಆಶ್ರಯದಲ್ಲಿ ೦೬-೦೮-೨೦೨೫ ರಂದು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಕೆ.ಆರ್.ಎಂ.ಎಸ್.ಎಸ್. ನ ರಾಜ್ಯ ಉಪಾಧ್ಯಕ್ಷರಾದ ಎ. ಗಂಗಾಧರಚಾರಿ ಅವರು ಭಾಗವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರರೆಯುವುದರ ಮೂಲಕ ಪ್ರಾರಂಭಿಸಲಾಯಿತು. ಮುಖ್ಯ ಶಿಕ್ಷಕರಾದ ಅನಿತಾರವರು ಸ್ವಾಗತಿಸಿದರು. ಮೈಸೂರು ವಿಭಾಗ ಪ್ರಮುಖರಾದ ರಾಜು ಕೆ. ಆರ್. ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿಗಳದ ಎಂ.ವಿ ಧರಣೇಂದ್ರ ಅವರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಕೆ. ಪಳನಿರವರು ವಹಿಸಿದ್ದರು, ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಗಂಗಾಧರಾಚಾರಿರವರು ಗುರುವಿನ ಮಹತ್ವ ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಗುರುಗಳ ಕರ್ತವ್ಯದ ಬಗ್ಗೆ ಸವಿಸ್ತಾರವಾಗಿ ವಿವರಿಸುತ್ತಾ ಈ ದೇಶ ಕಂಡಂತ ಅನೇಕ ಗುರುಮಹನಿಯ ಪರಂಪರೆಯನ್ನು ಸ್ಮರಿಸಿ, ಶಿಕ್ಷಕರಾದ ನಾವುಗಳು ಗುರುವಿನ ಸ್ಥಾನದಲ್ಲಿದ್ದು ಉತ್ತಮ ಸಮಾಜ ನಿರ್ಮಾಣ ಮಾಡೋಣವೆಂಬ ಸಂದೇಶ ನೀಡಿದರು.

ಮೈಸೂರು ಜಿಲ್ಲೆ
ದಿನಾಂಕ ೨೨.೮. ೨೦೨೫ ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಸಂಘದ ಮೈಸೂರು ಜಿಲ್ಲಾ ಘಟಕದ ವತಿಯಿಂದ ಗುರುವಂದನಾ ಕಾರ್ಯಕ್ರಮವನ್ನು ಶ್ರೀಕಾಂತ ಮಹಿಳಾ ಪ.ಪೂ.ಕಾಲೇಜು, ಜಿಲ್ಲಾ, ಮೈಸೂರು ಇಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆಂಪಣ್ಣ ಜಿಲ್ಲಾಧ್ಯಕ್ಷರು ವಹಿಸಿದ್ದರು. ಸ್ವಾಗತ& ಪರಿಚಯವನ್ನು ಶ್ರೀ ವಿಜಯಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರ್ವಹಿಸಿದರು, ಪ್ರಾಸ್ತಾವಿಕವಾಗಿ ಸಂಘಟನೆ & ಕಾರ್ಯಕ್ರಮದ ಕುರಿತು ಶ್ರೀಅರುಣ್‌ಕುಮಾರ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವರು ಮಾತನಾಡಿದರು.

ಗುರುವಿನ ಮಹತ್ವದ ಕುರಿತಂತೆ ಶ್ರೀ ಎ. ಗಂಗಾಧರಾಚಾರಿ, ಪ್ರಾಂತ ಉಪಾಧ್ಯಕ್ಷರು ತಿಳಿಸಿದರು, ಈ ಸಂದರ್ಭದಲ್ಲಿ ಪ್ರಾಂಶುಪಾಲರುಗಳಾದ ಶ್ರೀ ಜಯಕುಮಾರ್, ಹಾಗೂ ಶ್ರೀಮತಿ ಸುಬ್ಬುಲಕ್ಷ್ಮಿ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ವೃಷಬೇಂದ್ರಸ್ವಾಮಿರವರು, ವಿಭಾಗ ಪ್ರಮುಖರಾದ ಶ್ರೀ ರಾಜು ರವರು, ಉಪಸ್ಥಿತರಿದ್ದರು, ಜಿಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು, ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀ ಸೋಮಶೇಖರರವರು ಸಲ್ಲಿಸಿದರು.

Highslide for Wordpress Plugin