ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಕಲಬುರ್ಗಿ ದಿ: 6-8-15 ರಂದು ನಗರದ ಗುರುಕುಲ ಪದವಿಪೂರ್ವ ಕಾಲೇಜಿನಲ್ಲಿ ‘ಗುರುವಂದನಾ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದ ಬೀದರನ ಚಿದಂಬರಾಶ್ರಮದ ಪ.ಪೂ.ಶ್ರೀ ಶಿವಕುಮಾರ ಮಾಹಸ್ವಾಮೀಜಿ ಯವರು ಮಾತನಾಡಿ, ಸುಸಂಸ್ಕೃತ ಜನರು ಇರುವ ಭಾರತ ದೇಶ ಗುರು ಗೌರವ ದೇಶ. ಗುರುವನ್ನು ಪರಮಾತ್ಮ ಎಂದು ಸಂಭೋದಿಸುವ ರಾಷ್ಟ್ರ ಸಾವಿರಾರು ವರ್ಷಗಳ ಇತಿಹಾಸ ಇರುವ ಭಾರತ ದೇಶದಲ್ಲಿ ಗುರು ಪರಂಪರೆ ಪುರಾತನ ಕಾಲದಿಂದಲೂ ಇದೆ. ದೇವ ದೇವತೆಗಳಿಗೂ ಗುರುಗಳ ಮಾರ್ಗದರ್ಶನವಿದೆ. ಶ್ರೀ ರಾಮನಿಗೆ ವಶಿಷ್ಟರು, ಶ್ರೀಕೃಷ್ಣನಿಗೆ ಸಾಂದಿಪಿನಿ ಗರುಗಳಿದ್ದರು, ಅದಕ್ಕಾಗಿಯೇ ನಮ್ಮಲ್ಲಿ ಮುಂದೆ ಗುರಿ, ಹಿಂದೆ ಗುರು ಎಂಬ ಉಕ್ತಿ ಈಗಲೂ ಚಾಲ್ತಿಯಲ್ಲಿದೆ. ಗುರುಗಳಿಗೆ ಇದ್ದಷ್ಟು ಗೌರವ ಮನ್ನಣೆ ಜಗತ್ತಿನ ಯಾವ ದೇಶದಲ್ಲೂ ಇಲ್ಲ ಎಂದರು.
ತಾಯಿ ಮನೆಯಲ್ಲಿ ನೀಡುವ ಶಿಕ್ಷಣ ಮೊದಲ ಪಾಠಶಾಲೆಯಾದರೆ, ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ಮೂರ್ತಿಯನ್ನಾಗಿಮಾಡಿ ಅವರ ಉತ್ತಮ ಭವಿಷ್ಯ ನಿರ್ಮಾಣ ಮಾಡುವ ಪವಿತ್ರ ಕೆಲಸ ಮಾಡುತ್ತಾರೆ. ಪರಿಶುದ್ದವಾದ ಸೇವೆ ಅಂತ ಉಳಿದಿದ್ದರೆ ಅದು ಶಿಕ್ಷಕರ ಸೇವೆ ಒಂದೇ ಎಂದರು .
ಶಿಕ್ಷಕರಾದವರು ಮಕ್ಕಳಿಗೆ ಪಠ್ಯದ ಜೊತೆಗೆ ಮಾನವೀಯ ಗುಣಗಳು, ಉತ್ತಮ ಸಂಸ್ಕಾರ, ವಿಶ್ವಾಸ, ನಿರ್ದಿಷ್ಟ ಗುರಿ ಮತ್ತು ಬದ್ದತೆ ಕಲಿಸಬೇಕೆಂದರು. ವಿಧ್ಯಾರ್ಥಿಗಳು ಸಹ ಗುರುಗಳಿಗೆ ಅಪಾರ ಗೌರವದಿಂದ ಕಾಣಬೇಕು, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಅದನ್ನು ಹಾನಿ ಮಾಡಿಕೊಳ್ಳಬಾರದೆಂದು ಶ್ರೀಗಳು ನುಡಿದರು.
ಮುಖ್ಯ ಅತಿಥಿಗಳಾಗಿದ್ದ ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಅಧ್ಯಕ್ಷ ಶ್ರೀ ಶಿವಯ್ಯ ಮಠಪತಿ ಮಾತಾನಾಡಿ, ಭಾರತದಲ್ಲಿ ವಿಜ್ಞಾನ ಸಂಶೋಧಕರಾಗಲು ಉತ್ತಮ ಅವಕಾಶವಿದೆ, ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ಸಂಘದ ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ ಶ್ರೀ ಚಿದಾನಂದ ಪಾಟೀಲ ಮಾತಾನಾಡಿ ಸಂಘದ ಉಗಮ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಅಲ್ಲದೇ ಉಗ್ರರ ವಶದಲ್ಲಿದ್ದ ರಾಜ್ಯದ ಇಬ್ಬರು ಶಿಕ್ಷಕರು ಎಂದ ಮಾತ್ರಕ್ಕೆ ಬಿಡುಗಡೆ ಗೊಂಡಿದ್ದಾರೆ ಎಂದರೆ ಗುರುವಿನ ಸ್ಥಾನದಲ್ಲಿ ಎಂಥಹ ಸಾಮರ್ಥ್ಯವಿದೆ ಎಂದು ತಿಳಿಸಿ, ಜಗತ್ತನ್ನೇ ಗೆಲ್ಲುವ ಶಕ್ತಿ ಗುರುವಿನಲ್ಲಿದೆ ಎಂಬುವುದಕ್ಕೆ ಇವರೇ ಸಾಕ್ಷಿ. ಶಿಕ್ಷಕರು ಎಂದರೆ ಕೀಳರಿಮೆ ಬೇಡ ಎಂದರು.
ಜಾಜಿ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಶ್ರೀ ವಿಜಯಕುಮಾರ ಜಾಜಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಪ್ರಲ್ಹಾದ್ ಬುರ್ಲಿ ವಿಶ್ವನಾಥ ಪಾಟೀಲ, ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಚಂದ್ರಶೇಖರ್ ಎಸ್. ಪಾಟೀಲ್ ಶಿಕ್ಷಣ ಪ್ರಕೋಷ್ಟದ ಪ್ರಮುಖ ಶ್ರೀ ಐ. ಕೆ. ಪಾಟೀಲ ಉಪನ್ಯಾಸಕರು ವಿವಿಧ ತಾಲೂಕಗಳ ಶಿಕ್ಷಕರುಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಶ್ರೀಚಂದ್ರಶೇಖರ ಎಸ್. ಪಾಟೀಲ, ಅಧ್ಯಕ್ಷರು, ಜಿಲ್ಲಾ ಘಟಕ ಕಲಬುರ್ಗಿ