ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಆಳಂದ ಘಟಕ ಹಾಗೂ ಸರ್ ಜಗದೀಶಚಂದ್ರ ಬೋಸ್ ಇಕೋಕ್ಲಬ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜವಳಿ(ಡಿ)ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ನಾಗರೀಕರಿಗೆ ಹಾಗೂ ಮಕ್ಕಳಿಗೆ ಸಸಿಗಳನ್ನು ವಿತರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀ ಶಂಕರಲಿಂಗ ಜಿ. ಪಾಟೀಲ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅಭಾವ ಹಾಗೂ ಬರಗಾಲ ಪೀಡಿತ ಪ್ರದೇಶವಾಗಿ ರೈತರು ಕಂಗಾಲಾಗಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ ಕಾಡಿನ ನಾಶದಿಂದ ಪರಿಸರದಲ್ಲಿ ಅಸಮೋತೋಲನ ಉಂಟಾಗಿ ಮಳೆ ಮರೀಚಿಕೆಯಾಗಿರುವುದು. ಆದ್ದರಿಂದ ಹೆಚ್ಚು ಗಿಡ ಮರಗಳನ್ನು ಬೆಳೆಸುವುದರೊಂದಿಗೆ ಪರಿಸರ ವಿರೋಧಿ ಚಟುವಟಿಕೆಗಳನ್ನು ನಡೆಸದಂತೆ ಮನವಿ ಮಾಡಿದರು.
ಇಂದಿನ ಮಕ್ಕಳು ನಾಳೆಯ ನಾಗರೀಕರು ಹಾಗಾಗಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪಾಲಕರಿಗೆ ಕಿವಿ ಮಾತು ಹೇಳಿ ಶಾಲಾ ಆವರಣದಲ್ಲಿಯೇ ಸುಮಾರು ೧೫೦ ಸಸಿಗಳನ್ನು ಪಾಲಕರು ಶಿಕ್ಷಕರು ಹಾಗೂ ಮಕ್ಕಳು ನೆಡುವುದರೊಂದಿಗೆ ಪರಿಸರ ಪ್ರಜ್ಞೆ ಮೂಡಿಸಲಾಯಿತು.
ಕಾರ್ಯಕ್ರಮದ ಆಧ್ಯಕ್ಷತೆಯನ್ನು ಮುಖ್ಯಗುರುಗಳಾದ ಶ್ರೀಮತಿ ಸಾವಿತ್ರಿ ಕೆ. ವಹಿಸಿದ್ದರು. ಶ್ರೀಶೈಲ ಕೌಲಗಿ ನಿರೂಪಿಸಿದರು ಜಗದೀಶ ಬೆಳಮಗಿ ಸ್ವಾಗತಿಸಿದರು, ಭೀಮರಾಯ ಹಳ್ಳಿ ವಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶ್ರೀ ಮಾಹಂತಪ್ಪ ಮಲಶೆಟ್ಟಿ ಹಾಗೂ ಊರಿನ ಪ್ರಮುಖರು ವಿದ್ಯಾರ್ಥಿಗಳು ಭಾಗವಹಿಸಿದ್ದರು.