ದಿನಾಂಕ: 22 ರಿಂದ 24 ಮೇ 2016 ರವರೆಗೆ ಮೈಸೂರಿನ ಪ್ರಮಥಿ ವಸತಿಯುತ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ವರದಿ
ದಿನಾಂಕ 22-5-2016 ರ ಸಂಜೆ ಉದ್ಘಾಟನಾ ಸಮಾರಂಭವು ABRSM ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಯುತ ವಿಮಲ್ ಪ್ರಸಾದ್ ಅಗರ್‌ವಾಲ್ ಅವರ ಅಧ್ಯಕ್ಷತೆಯಲ್ಲಿ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗುವುದರೊಂದಿಗೆ ಆರಂಭವಾಯಿತು.
ವೇದಿಕೆಯ ಮೇಲೆ ABRSM ಪ್ರಧಾನ ಕಾರ್ಯದರ್ಶಿಗಳಾದ ಜೆ.ಪಿ. ಸಿಂಘಲ್‌ರವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಗಳಾದ ಶ್ರೀಯುತ ಮಹೇಂದ್ರಕಪೂರ್‌ರವರು ಮತ್ತು ಪ್ರಶಿಕ್ಷಣ ಪ್ರಕೋಷ್ಟಕದ ಪ್ರಮುಖರಾದ ಹೆಚ್. ನಾಗಭೂಷಣರವರು ಉಪಸ್ಥಿತರಿದ್ದರು.
ಶ್ರೀಯುತ ನಾಗಭೂಷಣರವರು ಎರಡು ವರ್ಷಗಳಿಗೊಮ್ಮೆ ಕಾರ್ಯಕರ್ತರ ಅಭ್ಯಾಸವರ್ಗ ನಡೆಸುವ ಉದ್ದೇಶವನ್ನು ತಿಳಿಸುತ್ತಾ… ವಾಲ್ಮೀಕಿ ಖುಷಿಗಳು ಮೊದಲು ಕಾಡಿನಲ್ಲಿ ದರೋಡೆಕೋರನಾಗಿದ್ದು ನಾರದ ಮುನಿಗಳ ಮುಖಾಂತರ ರಾಮನ ಮಂತ್ರದ ಉಪದೇಶವನ್ನು ಪಡೆದು ಸತತ ಪುನರ್ ಉಚ್ಚಾರಣೆಯೊಂದಿಗೆ ಮಹಾಋಷಿಯಾದನು. ಶ್ರೀರಾಮನ ದರ್ಶನ ಭಾಗ್ಯವೂ ಪಡೆದುಕೊಂಡ ಆದಿ ಕವಿ ಎಂದು ಪ್ರಸಿದ್ಧರಾದರು. ಧೃವ ಶ್ರೀ ನಾರಾಯಣ ಮಂತ್ರವನ್ನು ಸತತವಾಗಿ ಜಪಿಸಿ ನಕ್ಷತ್ರ ರೂಪವನ್ನು ಪಡೆದುಕೊಂಡನು. ಇದೇರೀತಿ ನಾವುಗಳೂ ಸಹ ಒಂದೇ ಮುಖ್ಯ ವಿಷಯವನ್ನು ಪುನಃ ಪುನಃ ಕೇಳುತ್ತಾ ಕೇಳುತ್ತಾ ಸಾಧಕರಾಗಲು ಸಾಧ್ಯವಿದೆ. ಆದ್ದರಿಂದ ಈ ಅಭ್ಯಾಸವರ್ಗದಲ್ಲಿ ಪೂರ್ಣಮನಸ್ಸಿನಿಂದ ಪಾಲ್ಗೊಳ್ಳೋಣ ಎಂದರು. ABRSM ಪ್ರಧಾನ ಕಾರ್ಯದರ್ಶಿಗಳಾದ ಜೆ.ಪಿ ಸಿಂಫಲ್‌ರವರು ಯಾವುದೇ ವಿಚಾರವನ್ನು ಕೇವಲ ಆಲಿಸುವುದರಿಂದ ಯಾವುದೇ ಲಾಭವಾಗುವುದಿಲ್ಲ. ವಿಷಯವನ್ನು ಅರ್ಥೈಸಿಕೊಂಡು ಕಾರ್ಯಾನ್ವಿತಗೊಳಿಸಿದಾಗ ಮಾತ್ರ ಭಾಗವಹಿಸಿದ್ದು ಸಾರ್ಥಕವಾಗುತ್ತದೆ. ಅನೇಕ ಬಾರಿ ಅಭ್ಯಾಸ ವರ್ಗದಲ್ಲಿ ಪುನಃ ಭಾಗವಹಿಸುವುದೇಕೆ ಎಂದು ಸಹಜವಾಗಿ ಮನಸ್ಸಿನಲ್ಲಿ ಸಂಶಯ ಮೂಡಿರಬಹುದು. ಆದರೆ ಒಂದೇ ವಿಚಾರವನ್ನು ಪುನಃ ಪುನಃ ಅಭ್ಯಾಸ ಮಾಡುವುದರಿಂದ ಅದನ್ನು ಜೀವನದಲ್ಲಿ ಸಮನ್ವಯಗೊಳಿಸಿಕೊಂಡು ಪ್ರಕ್ರಿಯೆಯಲ್ಲಿ ಒಳಗೊಳ್ಳುತ್ತೇವೆ. ಆಲಿಸುವ ಅಭ್ಯಾಸ ಮಾಡಿಸಿಕೊಂಡು ಸಕ್ರಿಯ ಶೋತೃಗಳಾಗಬೇಕು. ರೂಪರೇಷೆಗಳನ್ನು ಅರ್ಥೈಸಿಕೊಂಡು ಮಥಿಸಿ ಸಮಯದ ಸದುಪಯೋಗ ಮಾಡಿಕೊಳ್ಳೋಣ.
ಂಃಖSಒ ಅಧ್ಯಕ್ಷರಾದಂತಹ ಶ್ರೀಯುತ ವಿಮಲ್ ಪ್ರಸಾದ್ ಅಗರ್‌ವಾಲ್‌ರವರು ಕಾರ್ಯಕರ್ತರ ಬೆಳವಣಿಗೆಗಾಗಿ ಅನೇಕ ಕಾರ್ಯಗಳನ್ನು ಅಳವಡಿಸಿಕೊಡುವುದರ ಬಗ್ಗೆ ತಿಳಿಸಿದರು. ದ್ವಿಪಕ್ಷೀಯ ಮಾತುಕತೆಯಿಂದ ವಿಷಯ ಸ್ಪಷ್ಟಗೊಳ್ಳುತ್ತವೆ. ಚರ್ಚೆಯ ಮಾಧ್ಯಮವನ್ನು ನಮ್ಮದಾಗಿಸಿಕೊಂಡು ವಿಷಯವನ್ನು ಮುಂದುವರಿಸಬೇಕು. ಸಂಘಟನೆಯ ಬೈಠಕ್‌ಗಳನ್ನು ಆಯೋಜಿಸವುದು ವಿವಿಧ ಹಂತದ ಪ್ರವಾಸ, ಸದಸ್ಯತ್ವ ಅಭಿಯಾನ, ವಿಷಯಾಧಾರಿತ ತರಬೇತಿ, ಕಾರ್ಯಕರ್ತರ ಅಭ್ಯಾಸವರ್ಗ ಇವು ಅತ್ಯಂತ ಪ್ರಮುಖವಾದವುಗಳು.
ಉಪವಾಸ ಸತ್ಯಾಗ್ರಹ, ಸಾಮೂಹಿಕ ರಜೆಹಾಕುವುದು, ಕಪ್ಪುಬಟ್ಟೆಯನ್ನು ಧರಿಸಿ ಕರ್ತವ್ಯ ನಿರ್ವಹಿಸುವುದು, ಜ್ಞಾಪನಾಪತ್ರ, ನೀಡುವುದು, ಕಾರ್ಯಕರ್ತನಿಗೆ ತಿಳಿಹೇಳುವುದು, ಅಧಿಕಾರಿಗಳೊಂದಿಗೆ ಚರ್ಚೆ, ಪತ್ರಚಳುವಳಿ ಮುಂತಾದವುಗಳನ್ನು ನಡೆಸಿಕೊಂಡು ಆಂದೋಲನ ನಡೆಸುವುದು.
ಕೇವಲ ನಮ್ಮ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲದೆ ಸಾಮಾಜಿಕ ವಿಷಯಗಳನ್ನು ಜೋಡಿಸಿಕೊಂಡು ವಿಶೇಷ ವಿಷಯಗಳ ಬಗ್ಗೆ ಚರ್ಚಿಸಿ ಸಾಮೂಹಿಕ ನಿರ್ಣಯಗಳನ್ನು ತೆಗೆದುಕೊಳ್ಳುವುದು. ಇದರಿಂದಾಗಿ ವಿವಿಧ ವಿಷಯಗಳ ಬಗ್ಗೆ ಜ್ಞಾನಾಭಿವೃದ್ಧಿಯಾಗುವುದು.
ನಮ್ಮ ಆಂದೋಲನ ಹೇಗಿರಬೇಕೆಂದರೆ ಅತೀ ದೊಡ್ಡ ಸಂಖ್ಯೆಯಲ್ಲಿ ಸಂಘಟಿಸಬೇಕು. ಆದ್ದರಿಂದ ನಮ್ಮ ಆತ್ಮವಿಶ್ವಾಸ ವೃದ್ಧಿಸುವಂತಿರಬೇಕು. ನಮ್ಮ ಆಂದೋಲನವು ಪರೀಕ್ಷಾ ಸಮಯದಲ್ಲಿ ಸಂಘಟಿಸಬಾರದು. ವರ್ಷಕ್ಕೊಂದು ಬಾರಿ ಅಧಿವೇಶನ ಮತ್ತೊಂದು ಬಾರಿ ಅಭ್ಯಾಸವರ್ಗ. ಅಭ್ಯಾಸವರ್ಗದ ಉದ್ದೇಶ ಕಾರ್ಯಕರ್ತರ ಜ್ಞಾನಾಭಿವೃದ್ಧಿ ತನ್ಮೂಲಕ ಕಾರ್ಯ ವಿಸ್ತಾರ, ನೂತನ ಕಾರ್ಯಕರ್ತರ ನಿರ್ಮಾಣ ಸಂಖ್ಯೆ ಸೀಮಿತವಾಗಿರುತ್ತದೆ. ಅಭ್ಯಾಸ ವರ್ಗಗಳಲ್ಲಿ ಉತ್ತಮ ಫಲಿತಾಂಶ ಹೊರಬರಲು ಸಾಧ್ಯವಿರುತ್ತದೆ.
ಕೇವಲ ಅಭ್ಯಾಸ ವರ್ಗಗಳಲ್ಲಿ ಭಾಗವಹಿಸಿದಾಕ್ಷಣ ಯಾರೂ ಇತರರಿಗಿಂತ ದೊಡ್ಡವರಲ್ಲ. ಸಂಘಟನೆ ಯಾವುದೇ ನಿರ್ಭರವಾಗಿರುವುದಿಲ್ಲ. ವಿಷಯ ಮಂಥನವಾಗುತ್ತಿರಬೇಕು. ನಿರಂತರ ಅಭ್ಯಾಸದಿಂದ ಮಂದಮತಿಯು ಜ್ಞಾನವಂತ ನಾಗುತ್ತಾನೆ. ತಾಮ್ರದ ಪಾತ್ರೆಯು ದಿನವೂ ಉಜ್ಜುವುದರಿಂದ ಮಾತ್ರ ಹೊಳೆಯುತ್ತದೆ. ಬಿಟ್ಟಲ್ಲಿ ಕೆಲವೇ ದಿನಗಳಲ್ಲಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಆದರೆ ಕೇವಲ ಹೊರಗಿನಿಂದ ಮಾತ್ರವಲ್ಲದೆ ಒಳಗಿನಿಂದಲೂ ಸಹ ಸ್ವಚ್ಛಗೊಳಿಸುವುದು ಅವಶ್ಯವಿದೆ.
ಬೋರ್ಡಿನ ಮೇಲೆ ಒಂದು ರೇಖೆಯನ್ನು ಬರೆದು ಅದನ್ನು ಆಲಿಸದೇ ಸಣ್ಣದಾಗಿ ಮಾಡಬೇಕೆಂದರೆ ಅದಕ್ಕಿಂತ ಉದ್ದವಾದ ರೇಖೆಯನ್ನು ರಚಿಸುವುದೊಂದೆ ಮಾರ್ಗ. ಅದರಂತೆ ಕಾರ್ಯಕರ್ತರು ಎಲ್ಲಾ ಅಡೆತಡೆಗಳನ್ನು ಮೀರಿ ಮುಂದುವರೆಯಬೇಕು.
ನಾನು ಸಂಘಟನೆಯ ಕಾರ್ಯಮಾಡುತ್ತೇನೆಂದಾದರೆ ಸಂಘಟನೆಯ ಆಧಾರವೂ ಹೌದು. ವಿಕಾಸವನ್ನು ನನ್ನದಾಗಿಸಿ ಕೊಳ್ಳಬೇಕು. ಸುಧಾರಣೆ ಸಾಧ್ಯವಿಲ್ಲವೆಂದು ಯೋಚಿಸಿದರೆ ನಾವು ಜಡವಾಗುತ್ತೇವೆ. ಬದಲಾವಣೆಯಿಂದಾಗಿ ವಿಕಾಸ ಸಾಧ್ಯ ವಾಗುತ್ತದೆ. ಹೂವು ಹಣ್ಣುಗಳಿಂದ ಗಿಡಮರಗಳು ಶೋಭಿಸುತ್ತದೆ. ಕಾರ್ಯಕರ್ತರೊಂದಿಗೆ ಸಜೀವ ಸಂಪರ್ಕ ಸಾಧ್ಯವಾಗಿಸಿ ಕೊಳ್ಳಬೇಕು. ಕಾರ್ಯಕರ್ತರನ್ನು ಅವರ ಹೆಸರಿನೊಂದಿಗೆ ಸಂಬೋಧಿಸಿದಾಗ ಹೆಚ್ಚು ಪ್ರಭಾವಶಾಲಿಯಾಗುತ್ತೇವೆ. ಕಾರ್ಯಕರ್ತರ ಮನೆಗಳಿಗೆ ಭೇಟಿನೀಡಿ ಪರಿವಾರದೊಂದಿಗೆ ಸಂಪರ್ಕವಿಟ್ಟುಕೊಳ್ಳುವುದರಿಂದ ಮನೆ- ಮನಗಳ ಸಂಪರ್ಕ ಸಾಧ್ಯವಾಗುತ್ತದೆ. ಪ್ರತ್ಯಕ್ಷ ಸಂಪರ್ಕವೆ ಉತ್ತಮ ಮಾರ್ಗವಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರ ವಿಳಾಸ, ದೂರವಾಣಿಯ ಸಂಖ್ಯೆ, ಇ-ಮೇಲ್ ಐಡಿ ಮುಂತಾದವುಗಳನ್ನು ಸಂಗ್ರಹಿಸಿಕೊಳ್ಳಬೇಕು. ನಾವು ಉತ್ತಮಗೊಂಡಾಗ ಜಗತ್ತು ಉತ್ತಮಗೊಳ್ಳುತ್ತದೆ ಎಂದು ಧ್ಯೇಯ ವಾಕ್ಯದೊಂದಿಗೆ ನಾವು ಕಾರ್ಯ ಪ್ರವೃತ್ತರಾಗಬೇಕು.
* * *
ಶ್ರೀ ಹರಿಬಾವು ವಜೆ ಇವರು ಇತಿಹಾಸ ಸಂಕಲನದ ಸಂಚಾಲಕರಾಗಿದ್ದಾರೆ. ಶ್ರೀಯುತರು ತಮ್ಮ ವಿಚಾರಗಳನ್ನು ಕಾರ್ಯಕರ್ತರೊಂದಿಗೆ ಹಂಚಿಕೊಳ್ಳುತ್ತಾ ನಾನು ತಮಗೆ ಮಾರ್ಗದರ್ಶನ ಮಾಡಲು ಬಂದಿಲ್ಲಾ, ಬದಲಾಗಿ ತಮ್ಮ ದರ್ಶನ ಪಡೆಯಲು ಬಂದಿದ್ದೇನೆ. ಕಾರಣ ಶಿಕ್ಷಕರು ಸಮಾಜದಲ್ಲಿ ಸದಾಕಾಲ ಉನ್ನತ ಸ್ಥಾನವನ್ನು ಪಡೆದಿರುವಂತವರು. ನಾನೆಂದೂ ಶಿಕ್ಷಕನಾಗಲಿಲ್ಲ. ಮಹಾಪುರುಷರು ಜೀವನದಲ್ಲಿ ಹೇಳಿದ್ದನ್ನು ಆಚರಿಸಿರುತ್ತಾರೆ. ವಿದ್ಯಾರ್ಥಿಗಳಿಗೆ ಅಂತಹ ಮಹಾಪುರುಷರ ವಿಚಾರಗಳನ್ನು ತಿಳಿಸುವುದು ಅವಶ್ಯಕವಾಗಿದೆ. ಶ್ರೀ ಚಿನ್ಮಯಾನಂದರ ವಿಚಾರ ಹೀಗಿತ್ತು ಎಂದು ನಿಷ್ಕರ್ಶೆಯನ್ನು ವಿದ್ಯಾರ್ಥಿಗಳೆದುರಿಗೆ ಇಡಬಾರದು ಅವರ ಹೃದಯಕ್ಕೆ ನಾಟುವಂತ ರೀತಿಯಲ್ಲಿ ವಿಚಾರಗಳನ್ನು ತಿಳಿಸಬೇಕು. ತಮ್ಮ ನಡವಳಿಕೆಗಳೆ ಉದಾಹರಣೆಯಂತಿರಬೇಕು. ಒಂದು ಬಾರಿ ಒಬ್ಬ ತಾಯಿ ಒಂದು ಮಗುವನ್ನು ಬಿಸಿಲಿನಲ್ಲಿ ಕರೆದುಕೊಂಡು ಹೊರಟಿದ್ದಳು. ಮಗು ಕಾಲು ಸುಡುತ್ತಿದ್ದರಿಂದ ಎತ್ತಿಕೊಳ್ಳುವಂತೆ ಹಠಮಾಡುತ್ತಿತ್ತು. ಆದರೆ ತಾಯಿ ನಾನು ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. ಬೇಕಾದರೆ ಬಾ ಎಂದಾಗ ಮಗು ತಟ್ಟನೆ ಹಿಂಬಾಲಿಸಿತು. ಈ ರೀತಿ ಉತ್ತಮವಾದ ಪ್ರೇರಣೆಯನ್ನು ನೀಡುವಂತಹ ಕೆಲಸವನ್ನು ಶಿಕ್ಷಕರು ಮಾಡಬೇಕಾಗಿದೆ.
ಪಂಡಿತ್ ಮದನ್ ಮೋಹನ ಮಾಲವಿಯರು ಅಂಬೇಡ್ಕರ್‌ರವರ ವಿದ್ಯಾರ್ಥಿ ದೆಸೆಯಲ್ಲಿ ಅವರ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಅಂಬೇಡ್ಕರ್‌ರವರ ಕಾರ್ಯಕಲಾಪವನ್ನು ಗಮನಿಸಿ ಅವರನ್ನು ಉದ್ದೇಶಿಸಿ ನಿನ್ನ ಶಿಕ್ಷಣ ಪೂರ್ಣವಾದ ನಂತರ ನಮ್ಮ ವಿದ್ಯಾಸಂಸ್ಥೆಗೆ ಬಾ ಎಂದು ಆಹ್ವಾನಿಸಿದರು. ಆದರೆ ಅಂಬೇಡ್ಕರ್‌ರವರು ಬಂದ ತಕ್ಷಣ ಅಡಿಗೆಯವರು ಅಡುಗೆ ಮಾಡುವುದನ್ನು ನಿಲ್ಲಿಸಿದರು. ಆಗ ಮದನ್ ಮೋಹನ್ ಮಾಳವೀಯವರು ತಮ್ಮ ಮನೆಯಿಂದ ಊಟ ತರಹತ್ತಿದರು. ಅಂಬೇಡ್ಕರ್‌ರವರು ತಮ್ಮನ್ನ ತಾವೇ ಶಿಕ್ಷಕರೆಂದು ತಿಳಿದುಕೊಳ್ಳಲಿಲ್ಲ. ತಮ್ಮನ್ನು ತಾವೂ ಸದಾ ಕಾಲ ವಿದ್ಯಾರ್ಥಿಯೇ ಎಂದು ತಿಳಿದುಕೊಳ್ಳುತ್ತಿದ್ದರು. ಇಂತವರ ಜೀವನ ಅನುಸರಿಸಲು ಯೋಗ್ಯವಾಗಿದೆ.
ಬಾಬಾ ಅಮ್ಟೆಯವರು ಯಾದವ್ ರಾವ್‌ಜಿಯವರ ಸಹಪಾಠಿಯಾಗಿದ್ದರು. ಅಮ್ಟೆಯವರು ಯಾದವರಾವ್‌ರವರಿಗೆ ತಮ್ಮಲ್ಲಿ ಯುವಕರನ್ನು ಕಾಣುತ್ತಿದ್ದೇನೆ ಎನ್ನುತ್ತಿದ್ದರು. ಯುವಕರೆಂದರೇ ಭವ್ಯವಾದ ಕನಸುಗಳನ್ನು ಕಾಣಬಹುದು ಮತ್ತು ಎಷ್ಟೇ ಅಡೆತಡೆಗಳು ಬಂದರೂ ಸಹ ಹೊಂದುಕೊಳ್ಳುವ ಚಲವುಳ್ಳವರು. ಆಚಾರ್ಯರೆಂದರೆ ಒಂದು ವಿಷಯಗಳಲ್ಲಿ ಪರಿಣಿತ ಸಾಧಿಸುವುದು ದೊಡ್ಡದೇನಲ್ಲ. ಭಾರಿ ಪಾರಮಾರ್ಥಿಕ ವಿಚಾರಗಳಲ್ಲಿಯೂ ಸಹ ಪರಿಣಿತಿ ಹೊಂದಿರುವುವರನ್ನು ಋಷಿಗಳು ಎಂದು ಕರೆಯಲಾಗುತ್ತದೆ. ನಮ್ಮ ಜೀವನ ಪರಿಶುದ್ಧವಾಗಿರಬೇಕು. ನಮ್ರತೆಯನ್ನು ಒಳಗೊಂಡಿರಬೇಕು. ಯೋಚಿಸಿ ಅರ್ಥೈಸಿಕೊಂಡು ಮಾತನಾಡಬೇಕು. ಯಾವ ಭೂಪ್ರದೇಶದಲ್ಲಿ ವಾಸಿಸುವ ನಾಗರಿಕರು ಆ ದೇಶದ ರಕ್ಷಣೆಗಾಗಿ ತಮ್ಮ ಸರ್ವಸ್ವವನ್ನು ಆರ್ಪಿಸಲು ತಯಾರಿರುತ್ತಾರೋ ಅದನ್ನು ರಾಷ್ಟ್ರ ಎಂದು ಕರೆಯುತ್ತಾರೆ.
ಪ್ರಪಂಚದಲ್ಲಿ ಕೇವಲ ಎರಡು ರಾಷ್ಟ್ರಗಳು ಮಾತ್ರ ಕಳೆದ ನಾಲ್ಕು ಸಾವಿರ ವರ್ಷಗಳಿಂದ ತಮ್ಮ ಪರಂಪರೆಯನ್ನು ಕಾಪಾಡಿಕೊಂಡು ಬರಲು ಶಕ್ತವಾಗಿದ್ದವು. ಆದರೆ ಈಗ ಭಾರತ ಮಾತ್ರ ತನ್ನ ರಾಷ್ಟ್ರೀಯ ಪರಂಪರೆಯನ್ನು ಕಾಯ್ದುಕೊಂಡು ಬರುತ್ತಿದೆ. ಈ ರೀತಿಯ ಉದಾಹರಣೆಗಳೊಂದಿಗೆ ಪ್ರೇರಣೆ ನೀಡಬೇಕಾದುದ್ದು ನಮ್ಮ ಕರ್ತವ್ಯವಾಗಿದೆ. ಯಾರು ತಮ್ಮ ಇತಿಹಾಸವನ್ನು ಮರೆಯುತ್ತಾರೋ ಅವರಿಗೆ ಭವಿಷ್ಯವಿಲ್ಲ. ಇತಿಹಾಸದಿಂದಲೇ ಜೀವನ ನಿರ್ಮಾಣ ಸಾಧ್ಯವಾಗಿದೆ.
ವರದಿ: ಶ್ರೀ ಎಸ್. ಕೃಷ್ಣಮೂರ್ತಿ ಶ್ರೇಷ್ಠಿ