ಬಡ್ತಿ ಮತ್ತು ಭರ್ತಿಗಾಗಿ ಕಪ್ಪು ಪಟ್ಟಿ ಹೋರಾಟ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ(ರಿ) ದಿನಾಂಕ 23-10-2016 ರಂದು ನಡೆದ ಪ್ರಾಂತ ಕೋರ್ ಕಮಿಟಿ ಸಭೆಯಲ್ಲಿ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜು ಉಪನ್ಯಾಸಕರ ಪದೋನ್ನತಿಗೆ ಆಗ್ರಹಿಸಿದೆ. ಶಿಕ್ಷಕರ ಬೇಡಿಕೆಯಾದ ಪದೋನ್ನತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಿನಾಂಕ 15-8-2016 ರಿಂದ 30-08-2016 ರವರೆಗೆ ರಾಜ್ಯದ ಪ್ರೌಢಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರಿಂದ ಪ್ರಥಮ ಹಂತದಲ್ಲಿ

• ಪ್ರೌಢಶಾಲೆಗಳ ಸಹಶಿಕ್ಷಕರನ್ನು ಮುಖ್ಯಶಿಕ್ಷಕರಾಗಿ ಹಾಗೂ ಪದವಿ ಪೂರ್ವ ಉಪನ್ಯಾಸಕರಾಗಿ ಮತ್ತು ದೈಹಿಕ ಶಿಕ್ಷಕರ, ವೃತ್ತಿಶಿಕ್ಷಕರ ಪದೋನ್ನತಿಗೆ ಆಗ್ರಹ.

• ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಶಿಕ್ಷಣಾಧಿಕಾರಿಗಳಾಗಿ ಪದೋನ್ನತಿಗೆ ಆಗ್ರಹ.

• ಪದವಿ ಪೂರ್ವ ಉಪನ್ಯಾಸಕರನ್ನು ಪ್ರಾಂಶುಪಾಲರಾಗಿ ಪದೋನ್ನತಿಗೆ ಆಗ್ರಹ.

• ಸರ್ಕಾರಿ/ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿಯ ಶಿಕ್ಷಕರ ಕಾಲ್ಪನಿಕ ವೇತನ ಬಡ್ತಿಗೆ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಯ ಶಿಕ್ಷಕರ ಕಾಲ್ಪನಿಕ ವೇತನ ಬಡ್ತಿಗೆ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಯ ಖಾಲಿ ಹುದ್ದೆಗಳ ನೇಮಕಾತಿ ಅನುಮತಿಗೆ ಆಗ್ರಹಪಡಿಸಿ ಪದೋನ್ನತಿಗಾಗಿ ಪತ್ರ ಚಳುವಳಿ ಹೋರಾಟವನ್ನು ನಡೆಸಿತ್ತು.

ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಎರಡನೇ ಹಂತದ ಹೋರಾಟವಾಗಿ ದಿನಾಂಕ 5-11-2016 ರಂದು ರಾಜ್ಯದ ಎಲ್ಲಾ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ತರಗತಿಗಳಿಗೆ ಹಾಜರಾಗಿ, ಶಾಲಾ ಅವಧಿಯ ನಂತರ ಜಿಲ್ಲಾಧಿಕಾರಿಗಳಿಗೆ ಮತ್ತು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಶಿಕ್ಷಕರ ಭಡ್ತಿ ಮತ್ತು ಭರ್ತಿ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ರಾಜ್ಯಾಧ್ಯಕ್ಷರಾದ ಶಿವಾನಂದ ಸಿಂಧನಕೇರಾ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಆಗ್ರಹಪಡಿಸಿತು.

ಶಾಲಾ ಅವಧಿಯ ನಂತರ ಶಿಕ್ಷಕರ ಭಡ್ತಿ ಮತ್ತು ಭರ್ತಿ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕನಕಪುರ, ಬೆಳಗಾವಿ, ಬಳ್ಳಾರಿ, ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.

ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ ಚಿತ್ರಗಳು

protest-21

protest-20

protest-19

protest-18

protest-17

protest-13

protest-12

protest-16

protest-15

protest-14

protest-11

protest-10

protest-9

protest-8

protest-7

protest-6

protest-5

protest-4

protest-3

protest-2

protest-1

protest

ವರದಿ:  ಚಿದಾನಂದ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ

Highslide for Wordpress Plugin