ಕ್ಯಾಲೆಂಡರ್ ಬಿಡುಗಡೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಘಟಕಗಳು ಜಂಟಿಯಾಗಿ ದಿನಾಂಕ 12-4-2017 ೭ರಂದು ಸಂಜೆ 4.30 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ಹೊಸವರ್ಷದ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಸುರೇಂದ್ರರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಎಸ್.ಜಿ ತಾಂಬೆಯವರು ಪರಿಚಯಿಸಿ, ಸ್ವಾಗತಿಸಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಖಜಾಂಚಿಗಳಾದ ಶ್ರೀ ಜೆ.ಎಂ ಜೋಶಿಯವರು ಸಂಘವು ನಡೆದು ಬಂದ ದಾರಿಯ ಬಗ್ಗೆ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.

calender1

ಹೊಸ ವರ್ಷದ ಕ್ಯಾಲೆಂಡರ್‌ನ್ನು ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯರಾದ ಶ್ರೀ ಸಪ್ತಗಿರಿಗೌಡ, ಅಧ್ಯಕ್ಷರು, ಬಿಜೆಪಿ ಯುವ ಮೋರ್ಚಾ ಬೆಂಗಳೂರು, ಸಂಘದ ಪೋಷಕರಾದ ಶ್ರೀ ಹೆಚ್.ನಾಗಭೂಷಣರಾವ್, ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ಸಿಂಧನಕೇರಾ ಮತ್ತು ಶ್ರೀ ಜೆ.ಎಂ. ಜೋಶಿ ಅವರುಗಳು ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾದ ಹೆಚ್. ನಾಗಭೂಷಣರಾವ್ ಅವರು ಹೊಸವರ್ಷ ಯುಗಾದಿಯ ಮಹತ್ವ ಕುರಿತು ವಿವರವಾಗಿ ತಿಳಿಸಿದರು. ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲಾ ಘಟಕಗಳು ಪ್ರತಿಭಾ ಪುರಸ್ಕಾರ ಮತ್ತು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಗಳನ್ನು ತಪಸ್ಸಿನ ಹಾಗೆ ಚಾಚೂ ತಪ್ಪದೇ ಮಾಡಿಕೊಂಡು ಬರುತ್ತಿದೆ, ವೈಜಾನಿಕವಾಗಿ ಯುಗಾದಿಯೇ ಹೊಸವರ್ಷ. ಇದನ್ನು ಶಿಕ್ಷಕರಾದ ನಾವು ಮಕ್ಕಳಲ್ಲಿ ಮನದಟ್ಟುಮಾಡಬೇಕು. ಪೋಷಕರೂ ಮಕ್ಕಳಲ್ಲಿ ಇದರ ಬಗ್ಗೆ ಅರಿವು, ತಿಳುವಳಿಕೆ ನೀಡಿದರೆ ಮುಂದಿನ ಪೀಳಿಗೆಗೆ ಸಂಸ್ಕೃತಿ ಹರಿದು ಸಮೃದ್ಧ ರಾಷ್ಟ್ರವಾಗಿ ಉಳಿಯುವುದರಲ್ಲಿ ಸಂಶಯವಿಲ್ಲ ಮತ್ತು ಈ ಯುಗಾದಿ ಸಂದೇಶವನ್ನು ಹೇಗೆಲ್ಲಾ ಸಂಬಂಧಿಕರಲ್ಲಿ, ಬಂಧು ಬಾಂಧವರಲ್ಲಿ, ಸ್ನೇಹಿತರಲ್ಲಿ ಸಾರಬಹುದು ಎಂದೂ ತಿಳಿಸಿದರು.

calender2

ಶ್ರೀ ಸಪ್ತಗಿರಿಗೌಡರು ಮಾತನಾಡಿ ಕ್ರೈಸ್ತರ ಕ್ಯಾಲೆಂಡರ್ ಬಿಟ್ಟು ಭಾರತೀಯ ಸಂಸ್ಕೃತಿಯ ಪ್ರಕಾರ ನೀವು ಯುಗಾದಿಯಿಂದ ಯುಗಾದಿಗೆ ಕ್ಯಾಲೆಂಡರ್ ಮಾಡುತ್ತಿರುವುದಕ್ಕೆ ತಮಗೆ ಧನ್ಯವಾದಗಳು, ನಾವು ವಿಶ್ವಗುರು ಆಗಬೇಕಾಗದರೆ ನಮ್ಮ ತನವನ್ನು ನಾವು ಪಾಲಿಸಬೇಕು ಎಂದು ಕರೆಕೊಟ್ಟರು, ಶಿಕ್ಷಕರು, ಪೋಷಕರು ಮಕ್ಕಳಿಗೆ ನಮ್ಮ ಸಂಸ್ಕೃತಿ ಬಗ್ಗೆ ಪ್ರೋತ್ಸಾಹಿಸಬೇಕು ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಾನಂದ ಸಿಂಧನಕೇರಾರವರು ಮಾತನಾಡಿ ಶಿಕ್ಷಕರಲ್ಲಿ ಆತ್ಮ ವಿಶ್ವಾಸ ಹೆಚ್ಚಬೇಕು. ವಿದ್ಯಾರ್ಥಿಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಮೂಡಿಸಿ ಅವರಲ್ಲಿ ದೇಶಭಕ್ತಿಯನ್ನು ಹೆಚ್ಚಿಸಬೇಕೆಂದು ತಿಳಿಸಿದರು. ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಗಂಗಪ್ಪ ಇವರು ವಂದನಾರ್ಪಣೆಯನ್ನು ಮಾಡಿದರು. ಬೆಂಗಳೂರು ದಕ್ಷಿಣ ಜಿಲ್ಲೆ ಕಾರ್ಯದರ್ಶಿಯಾದ ಶ್ರೀಮತಿ ವಾಸುಕಿಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

Highslide for Wordpress Plugin