16-1-2018 ರಂದು ಸರಕಾರಿ ಸಂಯುಕ್ತ ಪದವಿ ಪೂರ್ವ ಬಾಲಕಿಯರ ಕಾಲೇಜು (ಪ್ರೌಢ ಶಾಲಾ ವಿಭಾಗ), ಶಹಾಪುರ, ಜಿ.ಯಾದಗಿರಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ), ಬೆಂಗಳೂರು, ಜಿಲ್ಲಾ ಘಟಕ ಯಾದಗಿರಿ ವತಿಯಿಂದ ವಿಶ್ವಮಾನವ ಸ್ವಾಮಿ ವಿವೇಕಾನಂದರ ಹಾಗೂ ನೇತಾಜಿ ಸುಭಾಷ ಚಂದ್ರ ಬೋಸ್‌ರವರ ಜಯಂತಿ ಅಂಗವಾಗಿ ಸಂಕಲ್ಪ ದಿನ (ಕರ್ತವ್ಯ ಬೋಧ ದಿವಸ) ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಕ.ರಾ.ಮಾ.ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ. ಚಿದಾನಂದ ಪಾಟೀಲ, ಮುಖ್ಯ ಅತಿಥಿಗಳಾಗಿ ಆಗಮಿಸಿ ಶಿಕ್ಷಕರಿಗೆ ತಮ್ಮ ಕರ್ತವ್ಯದ ಬಗ್ಗೆ ಅರಿವು ಹಾಗೂ ಶಿಕ್ಷಕರು ತನು, ಮನ, ಧನದಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ತಮ್ಮ ವಿದ್ಯಾರ್ಥಿಗಳ ಸರ್ವತೋಮುಖ ಏಳ್ಗೆಗಾಗಿ ಸಂಕಲ್ಪ ಮಾಡಬೇಕೆಂದು ತಿಳಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಮಾದರಿ ವಿದ್ಯಾರ್ಥಿಗಳ ನಿದರ್ಶನದೊಂದಿಗೆ ಪ್ರೇರಣಾದಾಯಕವಾದ ಮಾತುಗಳನ್ನಾಡಿ ಮಕ್ಕಳ ಮೆಚ್ಚುಗೆಗೆ ಪಾತ್ರರಾದರು.
ಇದೇ ಸಂದರ್ಭದಲ್ಲಿ ಇನ್ನೋರ್ವ ಅತಿಥಿಗಳಾದ ಶ್ರೀ. ಮಹೇಶ ಬಸರಕೋಡ, ವಿಭಾಗ ಪ್ರಮುಖರು ಕ.ರಾ.ಮಾ.ಶಿಕ್ಷಕ ಸಂಘ ಇವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳೊಂದಿಗೆ ಉಪಸ್ಥಿತ ಶಿಕ್ಷಕರಿಗೆ ಸಂಕಲ್ಪ ಪ್ರಮಾಣ ಬೋಧನೆ ಮಾಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ. ಯಲ್ಲಪ್ಪ, ಮುಖ್ಯೋಪಾಧ್ಯಾಯರು, ಶ್ರೀ ರವೀಂದ್ರ ದೇಸಾಯಿ, ಶ್ರೀ. ಸುಧಾಕರ ಗುಡಿ, ಅಧ್ಯಕ್ಷರು, ಸರಕಾರಿ ನೌಕರರ ಸಂಘ, ಶಹಾಪುರ ಅತಿಥಿಗಳ ಸ್ಥಾನವನ್ನು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಎನ್.ಸಿ.ಪಾಟೀಲ ವಹಿಸಿದ್ದರು ಹಾಗೂ ಉಪಪ್ರಾಚಾರ್ಯರಾದ ಶ್ರೀಮತಿ. ನಾಗರತ್ನಮ್ಮ ಪಿ.ಓಲೇಕಾರ ಸಮಾರೋಪ ಭಾಷಣ ಮಾಡಿದರು. ಶ್ರೀ ಗೋರಖನಾಥ ಸ್ವಾಗತಿಸಿದರು, ಶ್ರೀ ಅನಿಲಕುಮಾರ ಬಿರಾದಾರ, ಜಿಲ್ಲಾ ಅಧ್ಯಕ್ಷರು, ಕ.ರಾ.ಮಾ.ಶಿ.ಸಂಘ ಇವರು ನಿರೂಪಿಸಿದರು ಹಾಗೂ ಶ್ರೀ. ಬಿ.ಜಿ.ಪಾಟೀಲ, ಪ್ರಧಾನ ಕಾರ್ಯದರ್ಶಿಗಳು, ಕ.ರಾ.ಮಾ.ಶಿ.ಸಂಘ ಇವರು ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಶಿಕ್ಷಕರು ಹಾಗೂ ಸಂಸ್ಥೆಯ ಎಲ್ಲ ಶಿಕ್ಷಕರು ಹಾಜರಿದ್ದರು.