ತರಗತಿ 10 ಮತ್ತು 12 ರ ನಂತರ ಮುಂದೇನು?

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ದಕ್ಷಿಣ ಜಿಲ್ಲಾವತಿಯಿಂದ ದಿನಾಂಕ 18-2-2018 ರಂದು ಹತ್ತನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ಮುಂದಿನ ಜೀವನವನ್ನು ನಿರ್ಧರಿಸುವಲ್ಲಿ ಈ ತರಗತಿಗಳು ಜೀವನದ ಪ್ರಮುಖ ಘಟ್ಟಗಳು. ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳ ಆಸೆ, ಅಭಿರುಚಿಗಳಿಗನುಗುಣವಾಗಿ ಭವಿಷ್ಯ ಜೀವನ ನಿರ್ಧಾರವಾದರೆ ಅವರ ಆತ್ಮವಿಶ್ವಾಸ ಹೆಚ್ಚಿ ಕೆಲಸದಲ್ಲಿ ಸ್ಪಷ್ಟತೆ ನಿಖರತೆ ಕಂಡುಬರುತ್ತದೆ. ಅನಿಶ್ಚಿತ ಗುರಿಯಿರುವ ವಿದ್ಯಾರ್ಥಿ ಏನನ್ನೂ ಸಾಧಿಸಲಾರ ಹಾಗೂ ಸಮಾಜಕ್ಕೆ ಹೊರೆಯಾಗುತ್ತಾನೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ವೃತ್ತಿಮಾರ್ಗದರ್ಶನ ಕಾರ್ಯಕ್ರಮ ನಡೆಸಲಾಯಿತು.

workshop

ಬಸವನಗುಡಿ ಸರ್ಕಾರಿ ಪದವಿಪೂರ್ವಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ನಸೀಮ ಬಾನುರವರು ಅಧ್ಯಕ್ಷರಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬ್ರಿಗಿಂಗ್ ಸ್ಮೈಲ್ಸ್ ಫೌಂಡೇಷನ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಂಟೆಲ್‌ನ ಮಾಜಿ ಇಂಜಿನಿಯರ್ ಆದ ಸೈಯದ್ ನೂರುದ್ದೀನ್‌ರವರು ಪವರ್ ಪಾಯಿಂಟ್ ಪ್ರಸೆಂಟೇಷನ್ ನೀಡುವುದರ ಮೂಲಕ ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಬಸವನಗುಡಿ ಶಾಲೆ ಮತ್ತು ನ್ಯಾಷನಲ್ ಹೈಸ್ಕೂಲ್ ಬಸವನಗುಡಿ ಈ ಎರಡೂ ಶಾಲೆಯ ಸುಮಾರು 250 ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಂಡರು. ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ವಾಸುಕಿ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಹಿಳಾ ವಿಭಾಗದ ಹಿರಿಯ ಕಾರ್ಯಕರ್ತೆ ಶ್ರೀಮತಿ ಆರ್. ಸೀತಾಲಕ್ಷ್ಮಿಯವರು ಹಾಗೂ ಕೆಲವು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ : ಆರ್.ಸೀತಾಲಕ್ಷ್ಮಿ

Highslide for Wordpress Plugin