ರಾಷ್ಟ್ರ ಎಂದರೆ ಸಮಾಜ. ಶಿಕ್ಷಕರಲ್ಲಿ ರಾಷ್ಟ್ರದ ಅವಧಾರಣೆಯನ್ನು ಸ್ಪಷ್ಟಪಡಿಸಬೇಕು. All are one ಎಂದು All is one ಎಂದು ಹೇಳಬೇಕು. Each soul is potentially divine. The goal is to manifest this divinity…. By Swami Vivekanand ರವರ ಹೇಳಿಕೆಯನ್ನು 2018 ರ ಡಿಸೆಂಬರ್ 25, 26, 27 -ಈ ಮೂರು ದಿನಗಳಂದು ರಾಜಸ್ತಾನದ ಉದಯಪುರದಲ್ಲಿ ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ವಿಚಾರವರ್ಗದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಮನಮೋಹನ್ ವೈದ್ಯಜೀಯವರು ಹೇಳಿದರು.
ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಪರರು ಎಂದು ತಿಳಿದು ಉಪಕಾರ ಮಾಡದೇ, ನಮ್ಮವರು ಎಂದು ತಿಳಿದು ಉಪಕಾರವನ್ನು ಮಾಡಬೇಕೆಂದು ಹೇಳಿದರು.
ಮಹೇಂದ್ರಕುಮಾರ್ಜಿಯವರು ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳು, ಶಿಕ್ಷಕರಿಗೆ ಬೋಧನಾ ವಿಷಯದ ಬಗ್ಗೆ ಇರಬೇಕಾದ ಜ್ಞಾನದ ಬಗ್ಗೆ ತಿಳಿಸಿದರು. ಶಿಕ್ಷಕ ಹಾಗೂ ವಿದ್ಯಾರ್ಥಿಯ ಸಂಬಂಧದ ಬಗ್ಗೆ ತಿಳಿಸುತ್ತಾ ಸೂರ್ಯ ಮತ್ತು ಪೃಥ್ವಿಯ ಉದಾಹರಣೆಯನ್ನು ನೀಡಿದರು. ಸೂರ್ಯನ ಬೆಳಕಿನಿಂದ ಪೃಥ್ವಿಯಲ್ಲಿ ಜೀವನ ನಡೆಯುತ್ತದೆ. ಇದರ ಬದಲಾಗಿ ಪೃಥ್ವಿಯು ಸೂರ್ಯನಿಂದ ಬೇರೇನನ್ನು ಕೇಳುವುದಿಲ್ಲ. ಅಲ್ಲದೇ ಸೂರ್ಯನಾದರೂ ಪೃಥ್ವಿಯ ಮೇಲೆ ಅಧಿಪತ್ಯವನ್ನು ಸ್ಥಾಪಿಸಲು ಇಷ್ಟಪಡುವುದಿಲ್ಲ ಎಂದು ಹೇಳುತ್ತಾ ಸೂರ್ಯನನ್ನು ಶಿಕ್ಷಕನಿಗೆ ಹಾಗೂ ಪೃಥ್ವಿಯನ್ನು ಶಿಕ್ಷಾರ್ಥಿಗೆ ಹೋಲಿಸಿದರು.
ಶಿಕ್ಷಕ ಸಾಮರ್ಥ್ಯದವನಾಗಿದ್ದು, ಒಳ್ಳೆಯ ಚರಿತ್ರೆ ಹೊಂದಿದವನಾಗಿದ್ದರೆ ಶಿಕ್ಷಣ ಕ್ಷೇತ್ರವನ್ನು ಬದಲಾಯಿಸಬಹುದು. ಶಿಕ್ಷಕ ವೇತನ ಭೋಗಿಯಾಗದೇ ಕರ್ಮಯೋಗಿಯಾಗಬೇಕು. ಇತ್ತೀಚಿಗೆ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಮನೋಭಾವ ಕಡಿಮೆಯಾಗುತ್ತಿದೆ. ಶಿಕ್ಷಕ ಎಂದರೆ ಶಿಷ್ಟಾಚಾರ ಹೊಂದಿದವನು, ಕ್ಷಮಾಶೀಲ ಗುಣವುಳ್ಳವನಾಗಿದ್ದು ಕರ್ಮಯೋಗಿಯಾಗಿರಬೇಕು ಎಂದು ಅ.ಭಾ.ರಾ.ಶೈ. ಮಹಾಸಂಘದ ಅಧ್ಯಕ್ಷರಾದ ಸಿಂಘಾಲ್ಜೀಯವರು ಹೇಳಿದರು.
ಹನುಮಾನ್ ಸಿಂಗ್ಜೀ ರಾಥೋಡ್ರವರು ಅರ್ಬನ್ ನಕ್ಸಲಿಸಂ ಹೇಗೆ ನಡೆಯುತ್ತಿದೆ. ಬುದ್ದಿಜೀವಿಗಳು ಎಂದು ತಮ್ಮನ್ನು ತಾವು ಕರೆದುಕೊಳ್ಳುವವರು ಸಮಾಜವನ್ನು ಹೇಗೆ ಅಡ್ಡದಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಸಮಾರೋಪದಲ್ಲಿ ಉಪಸ್ಥಿತರಿದ್ದ ಮನಮೋಹನ್ಜೀ ವೈದ್ಯರವರು ವೈದ್ಯರ ಬಳಿ ಕೇವಲ ಅಸ್ವಸ್ಥರು ಮಾತ್ರ ಹೋಗುತ್ತಾರೆ. ಆದರೆ ಶಿಕ್ಷಕರ ಬಳಿ ಸ್ವಸ್ಥರು ಬರುತ್ತಾರೆ. ಇದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಶಿಕ್ಷಕ ಬೋಧನೆ ಮಾಡಬೇಕು. ಜೀವನ ಸಫಲಮಾಡಿಕೊಳ್ಳುವುದೇ ಜೀವನದ ಗುರಿಯಾಗಬಾರದು ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವುದು ಜೀವನದ ಪರಮ ಗುರಿಯಾಗಿರಬೇಕು. ನಿಮ್ಮೆಲ್ಲರ ಜೀವನ ಸಾರ್ಥಕವಾಗಲಿ ಎಂದು ಹಾರೈಸುತ್ತಾ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಲಾಯಿತು.
ಕರ್ನಾಟಕದಿಂದ ಅ.ಭಾ.ರಾ.ಶೈ.ಮಹಾಸಂಘದ ಮಹಾಮಂತ್ರಿಗಳಾದ ಶ್ರೀ ಶಿವಾನಂದ ಸಿಂದನಕೇರಾ, ಶ್ರೀ ಬಾಲಕೃಷ್ಣ ಭಟ್, ಕ.ರಾ.ಮಾ.ಶಿ.ಸಂಘದ ಕಾರ್ಯಧ್ಯಕ್ಷರಾದ ಶ್ರೀ ಅರುಣ್ ಶಹಾಪುರ್ರವರು, ಅಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ್ ಮತ್ತು ಶ್ರೀಮತಿ ಮಮತಾ ಡಿ. ಕೆ ಭಾಗವಹಿಸಿದ್ದರು. ದೇಶದ ಮೂಲೆ ಮೂಲೆಗಳಿಂದ ಸಂಘದ 80 ಪ್ರತಿನಿಧಿಗಳು ಭಾಗವಹಿಸಿದ್ದರು.