ದಿನಾಂಕ 17-3-2019 ರಂದು ಶೇಷಾದ್ರಿಪುರಂನಲ್ಲಿ ಶಿಕ್ಷಕ ಸಂಘದ ಕಾರ್ಯಾಲಯ ಯಾದವಸ್ಮೃತಿಯಲ್ಲಿ ಈ ಶೈಕ್ಷಣಿಕ ವರ್ಷದ ಕೊನೆಯ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು.
ಎಂದಿನಂತೆ ಸರಸ್ವತಿಯ ಪ್ರಾರ್ಥನೆ, ಸಹಪ್ರಧಾನ ಕಾರ್ಯದರ್ಶಿಗಳಿಂದ ಸ್ವಾಗತ, ಪ್ರಧಾನ ಕಾರ್ಯದರ್ಶಿಗಳಿಂದ ಹಿಂದಿನ ಸಭೆಯ ನಡಾವಳಿ ಮಂಡನೆ ನಡೆಯಿತು.
ನಂತರ ಆಯಾ ಜಿಲ್ಲೆಗಳ ಕಾರ್ಯಕರ್ತರು ವರದಿ ವಿವರ ನೀಡಿದರು. ಈ ಬಾರಿ 20 ಜಿಲ್ಲೆಗಳಲ್ಲಿ ಕರ್ತವ್ಯ ಬೋಧ್ ದಿವಸ್ ನಡೆದದ್ದು ವಿಶೇಷ ಎನಿಸಿತು. ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳಿಗಾಗಿ ಸಂಘದಿಂದ ಅನೇಕ ಉಪಯುಕ್ತ ಕಾರ್ಯಕ್ರಮಗಳು ನಡೆದ ಬಗ್ಗೆ ವಿವರ ದೊರೆಯಿತು. ಮೇ ತಿಂಗಳಿನಲ್ಲಿ ಅಭ್ಯಾಸವರ್ಗ ನಡೆಯುವ ಬಗ್ಗೆ ತೀರ್ಮಾನಿಸಲಾಯಿತು ಹಾಗೂ ಸಂಘಟನೆಯನ್ನು ಬಲ ಗೊಳಿಸಲು ರಜಾಕಾಲದಲ್ಲಿ ಪ್ರವಾಸಯೋಜನೆಯನ್ನು ರೂಪಿಸಲಾಯಿತು. ಪ್ರತಿ ವಿಭಾಗಕ್ಕೂ ಪ್ರವಾಸ ಕೈಗೊಳ್ಳಬೇಕಾದವರ ವರದಿ ತಯಾರಿಸಲಾಯಿತು. ಎ.ಬಿ.ಆರ್.ಎಸ್.ಎಂ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಸಿಂಧನಕೇರಾ ಅವರು ಮುಂಬೈನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯ ವಿವರ ನೀಡಿದರು.
ಶಿಕ್ಷಕ ಪ್ರತಿನಿಧಿಗಳಾದ ಶ್ರೀಯುತ ಅರುಣ್ ಶಹಾಪೂರ್, ಶ್ರೀಯುತ ಸಂಕನೂರ್ ಎ.ಬಿಆರ್.ಎಸ್.ಎಂನ ಶ್ರೀ ಕೃ. ನರಹರಿ ಜಿ, ಶ್ರೀಯುತ ಬಾಲಕೃಷ್ಣಭಟ್, ಶ್ರೀಯುತ ಶಿವಾನಂದ ಸಿಂಧನಕೇರಾ, ಶ್ರೀ ನಾಗಭೂಷಣ್ ರಾವ್, ಶ್ರೀ ಜಿ.ಎಸ್ ಕೃಷ್ಣಮೂರ್ತಿ, ಅಧ್ಯಕ್ಷರಾದ ಸಂದೀಪ್ ಬೂದಿಹಾಳ್ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ್ ಹಾಗೂ ಸಹ ಪ್ರಧಾನ ಕಾರ್ಯದರ್ಶಿ ಗಂಗಾಧರಾಚಾರಿ ಅವರು ಉಪಸ್ಥಿತರಿದ್ದರು.