ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದಿಂದ ಬಂದಿರುವ ಬೇಡಿಕೆಗಳ ಪಟ್ಟಿಯಂತೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಬೇಡಿಕೆಗಳ ಪಟ್ಟಿಯನ್ನು ಪ್ರಾದೇಶಿಕ ಭಾಷೆಯಲ್ಲಿ ತಯಾರು ಮಾಡಿ ಅನೇಕ ಜಿಲ್ಲೆಯ ಕಾರ್ಯಕರ್ತರು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನ ಮಂತ್ರಿಗಳು, ಭಾರತ ಸರ್ಕಾರ, ನವದೆಹಲಿ, ಮಾನ್ಯ ಮಾನವ ಸಂಪನ್ಮೂಲ ಮಂತ್ರಿಗಳು, ಭಾರತ ಸರ್ಕಾರ, ನವದೆಹಲಿ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು. ಮಾನ್ಯ ಶಿಕ್ಷಣ ಮಂತ್ರಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು ಇವರಿಗೆ ಮನವಿ ಸಲ್ಲಿಸಿದರು.
ಬೇಡಿಕೆಗಳು
➡ ಮಾಧ್ಯಮಿಕ ಶಿಕ್ಷಣ ಆಯೋಗವನ್ನು ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ಸ್ಥಾಪಿಸುವುದು.
➡ ಜಿ.ಡಿ.ಪಿ ಯ ಶೇ. 10ನ್ನು ಕೇಂದ್ರ ಸರಕಾರದಿಂದ ಹಾಗೂ ರಾಜ್ಯ ತನ್ನ ಬಜೆಟ್‌ನ ಶೇ. ೩೦% ನ್ನು ಶಿಕ್ಷಣದ ವಿಭಾಗದ ಮೇಲೆ ಖರ್ಚು ಮಾಡಬೇಕು.
➡ ಕೇಂದ್ರೀಯ ಶಿಕ್ಷಕರ ಸಮಾನ ಏಳನೇ ವೇತನ ಆಯೋಗವನ್ನು ಎಲ್ಲಾ ರಾಜ್ಯಗಳಲ್ಲೂ ಜಾರಿಗೊಳಿಸಬೇಕು.
➡ ನಿವೃತ್ತಿಯ ನಂತರ ಶಿಕ್ಷಕರು ಆರ್ಥಿಕವಾಗಿ ಸ್ವತಂತ್ರರಾಗಿರಲು ಹೊಸ ನಿವೃತ್ತಿಯೋಜನೆ (ಎನ್.ಪಿ. ಎಸ್) ನ್ನುತೆಗೆದು ಹಳೆ ನಿವೃತ್ತಿಯೋಜನೆಯನ್ನು ಜಾರಿಗೊಳಿಸಬೇಕು.
➡ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಬೇಕು.
➡ ಮಾಧ್ಯಮಿಕ ಶಾಲೆಗಳಲ್ಲಿ ಇರುವ ವ್ಯಾವಸಾಯಿಕ, ಶಾರೀರಿಕ ಮತ್ತು ಕಂಪ್ಯೂಟರ್ ಶಿಕ್ಷಣ ನೀಡಲು ಶಿಕ್ಷಕರನ್ನು ಹುದ್ದೆಗಳನ್ನು ಭರ್ತಿ ಮಾಡಬೇಕು.
➡ ಸಮಾನಕಾರ್ಯಕ್ಕೆ ಸಮಾನ ವೇತನ ಸಿದ್ಧಾಂತದ ಪಾಲನೆಯಾಗಬೇಕು. ದೇಶದಲ್ಲಿ ಸಮಾನ ಸೇವಾ ಷರತ್ತುಗಳು ಹಾಗೂ ಅನುಕೂಲಗಳನ್ನು ತರಬೇಕು. ತಿಂಗಳ ಮೊದಲನೇ ತಾರೀಖಿನಿಂದ ಶಿಕ್ಷಕರ ಖಾತೆಗೆ ವೇತನ ಜಮೆಯಾಗುವಂತೆ ಮಾಡಬೇಕು.
➡ ಮಾಧ್ಯಮಿಕ ಶಿಕ್ಷಣದಲ್ಲಿ ಖಾಸಗಿ ಸಂಸ್ಥೆಗಳಿಂದ ನಡೆಯುತ್ತಿರುವ ವ್ಯಾಪಾರೀಕರಣವನ್ನುತಡೆಯಬೇಕು.
➡ ಎಲ್ಲಾ ರಾಜ್ಯಗಳ ಶಿಕ್ಷಕರಿಗೂ ಕೇಂದ್ರೀಯ ಶಿಕ್ಷಕರಂತೆ ವೈದ್ಯಕೀಯ ಭತ್ಯೆ, ಆಸ್ಪತ್ರೆಗಳಲ್ಲಿ ದಾಖಲಾಗಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು.
➡ ಸಮಗ್ರ ಶಿಕ್ಷಣ ಅಭಿಯಾನದಲ್ಲಿ ಅನುದಾನಿತ ಮತ್ತು ಅನುದಾನರಹಿತ ವಿದ್ಯಾಲಯಗಳಿಗೆ ಬೇದಭಾವ ಮಾಡದೆ ಸಮಾನ ಸೌಲಭ್ಯಗಳನ್ನು ನೀಡಬೇಕು.
➡ ಸಂಪೂರ್ಣ ದೇಶದಲ್ಲಿ ಸೇವಾ ನಿವೃತ್ತಿಯ ವಯಸ್ಸನ್ನು 65 ವರ್ಷ ಮಾಡಬೇಕು.
➡ ಶಿಕ್ಷಕರಿಗೆ ಅನ್ಯಕಾರ್ಯದಿಂದ (ಶಿಕ್ಷಣವಲ್ಲದೆ) ಮುಕ್ತಿಗೊಳಿಸಬೇಕು.
➡ ಶಿಕ್ಷಣ ಕೆಡರ್ ಮಾಡಬೇಕು.
➡ ಬಡ್ತಿ ಪ್ರಕ್ರಿಯೆಯನ್ನು ಸರಳಗೊಳಿಸಿ ಸರಿಯಾದ ಸಮಯಕ್ಕೆ ಮಾಡಬೇಕು.
➡ ಮಗುವಿನ ಲಾಲನೆ ಪಾಲನೆ ಮಾಡುವ ರಜೆ, ಕುಟುಂಬದ ಲಾಲನೆ ಪಾಲನೆಯ ರಜೆ ನೀಡಬೇಕು
➡ ಶಿಕ್ಷಣ ಅಧಿಕಾರ ಅಧಿನಿಮಯ ಪ್ರಕಾರ ಮಕ್ಕಳ ಮತ್ತು ಶಿಕ್ಷಕರ ಅನುಪಾತವನ್ನು 30:1 ಎಂದು ಮಾಡಬೇಕು
➡ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ವರಮಾನದ ಶೇ. 80 ನ್ನು ಶಿಕ್ಷಕರ ವೇತನಕ್ಕಾಗಿ ಖರ್ಚು ಮಾಡಬೇಕು.
➡ ಸಂಪೂರ್ಣ ಶಿಕ್ಷಣ ಒಂದೇ ಇಲಾಖೆಯ ಅಧೀನದಲ್ಲಿರಬೇಕು
➡ ಪಿ ಎಫ್ ನ ಜಮೆಯಾದ ಹಣದಲ್ಲಿ ಸಾಲವನ್ನು ನೀಡುವಂತಾಗಬೇಕು.
➡ ಸಿ ಸಿ ಇ ಯನ್ನು ತೆಗೆಯಬೇಕು.
➡ ಶಿಕ್ಷಕ ಹುದ್ದೆಯ ಅರ್ಹತೆಯ ಶಿಕ್ಷಣಕ್ಕಿಂತ ಹೆಚ್ಚಿನ ಶಿಕ್ಷಣ ಮಾಡಿದವರಿಗೆ ಹೆಚ್ಚುವರಿ ವೇತನ ನೀಡಬೇಕು.