34 ನೇ ಪ್ರತಿಭಾ ಪುರಸ್ಕಾರ ಬೆಂಗಳೂರು ಉತ್ತರ ಜಿಲ್ಲೆ

ಅಂಕ ಗಳಿಸುವುದು ಜೀವನದ ಒಂದು ಚಿಕ್ಕ ಭಾಗವಷ್ಟೆ ಆದರೆ ಸಂಸ್ಕಾರ ಮತ್ತು ಸಮಾಜ ಸೇವೆ ನಮ್ಮ ಜೀವನದ ಅವಿಭಾಜ್ಯ ಅಂಗ. ಮಾತೃಭೂಮಿಯ ಬಗ್ಗೆ ನಮಗೆ ಸದಾ ಗೌರವ ಇರಬೇಕು. ಚಾರಿತ್ರ್ಯ ನಿರ್ಮಾಣ ಸಾಧ್ಯವಾದರೆ ಮಾನವ ದೇವನಾಗಬಲ್ಲನೆಂದು ಗೌರವ ಅತಿಥಿಗಳಾದ ಪೂಜ್ಯ ಮಂಗಲನಾಥಾನಂದಜಿ ಮಹಾರಾಜ್ ಜಿ ರಾಮಕೃಷ್ಣ ಮಠ ಬೆಂಗಳೂರು ಇವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ಜಿಲ್ಲಾ ಘಟಕವು ದಿನಾಂಕ 28-7-19 ರಂದು ಬೆಂಗಳೂರಿನ ಹಿಮಾಂಶುಜ್ಯೋತಿ ಕಲಾಪೀಠದಲ್ಲಿ ಆಯೋಜಿಸಿದ್ದ ೩೪ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಮಾನ್ಯ ಉಪನಿರ್ದೇಶಕರು, ಬೆಂಗಳೂರು ಉತ್ತರ ಜಿಲ್ಲೆ ಇವರು ಮಾತನಾಡಿ, ಇದೊಂದು ನಿಮಗೆ ಮೊದಲ ಮೆಟ್ಟಿಲು ಮುಂದೆ ಇನ್ನೂ ನೀವು ಸಾಧಿಸಬೇಕಾದದ್ದು ಬಹಳಷ್ಟಿದೆ. ಯೋಗ ವನ್ನು ನಮ್ಮ ಪ್ರಧಾನಮಂತ್ರಿಗಳು ಇಡೀ ಪ್ರಪಂಚಕ್ಕೆ ಪರಿಚಯಿಸಿ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿದರು ಎಂದು ನುಡಿದರು.

ಹಿಮಾಂಶು ಶಾಲೆಯ ನಿರ್ದೇಶಕರಾದ ಶ್ರೀ ಬಿ. ವಿ. ವಿಜಯಕುಮಾರ್‌ರವರು ಮಕ್ಕಳಿಗೆ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಕರೆ ನೀಡಿದರು.

ಶ್ರೀಮತಿ ಪುಷ್ಪಾಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಜಿಲ್ಲಾ ಅಧ್ಯಕ್ಷರಾದ ಶ್ರೀ ಎಸ್.ಜಿ ತಾಂಬೆಯವರು ಎಲ್ಲ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ರಾಜ್ಯಕೋಶಾಧ್ಯಕ್ಷರಾದ ಶ್ರೀ.ಜೆ.ಎಂ ಜೋಶಿಯವರು ಪ್ರಾಸ್ತಾವಿಕ ನುಡಿಯಲ್ಲಿ ಸಂಘದ ಚಟುವಟಿಕೆಗಳನ್ನು ಪರಿಚಯಿಸಿದರು. ಶ್ರೀಮತಿ ವಾಸುಕಿಯವರು ಪ್ರತಿಜ್ಞಾ ಬೋಧನೆ ಮಾಡಿದರು. ಸಂಘದ ಹಿರಿಯರಾದ ಶ್ರೀ ಜಿ ಎಸ್. ಕೃಷ್ಣಮೂರ್ತಿಯವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾರಾಯಣಭಟ್ಟರು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿಯಾದ ಶ್ರೀ ಗಂಗಪ್ಪನವರು ವಂದನಾರ್ಪಣೆ ಸಲ್ಲಿಸಿದರು ಶ್ರೀಮತಿ ಜ್ಯೋತಿ ಮಹೇಶ್‌ರವರ ವಂದೇ ಮಾತರಂನೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸುಮಾರು ೨೦೦ ಶಾಲಾ ಪ್ರಥಮಿಗರು ಹಾಗೂ ೫೦ ಶಿಕ್ಷಕರ ಮಕ್ಕಳಿಗೆ ಸನ್ಮಾನಿಸಲಾಯಿತು.

ವರದಿ : ಶ್ರೀ ಎಸ್. ಜಿ. ತಾಂಬೆ

Highslide for Wordpress Plugin