ದಿನಾಂಕ 10-09-2020 ರಂದು ಬೆಳಿಗ್ಗೆ 11 ಘಂಟೆಯಿಂದ 1 ಘಂಟೆಯವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರ ಗೋಷ್ಠಿಯು ಆನ್‌ಲೈನ್‌ನಲ್ಲಿ ಗೂಗಲ್‌ಮೀಟ್ ಮುಖಾಂತರ ಜರುಗಿತು. ಗೋಷ್ಠಿಯು ಶ್ರೀ ಆರ್. ಎಸ್. ಭಟ್ಟ ಇವರ ಪ್ರಾರ್ಥನೆಯಿಂದ ಪ್ರಾರಂಭವಾಯಿತು.
ಜಿಲ್ಲಾ ಅಧ್ಯಕ್ಷರಾದ ಶ್ರೀ ಏಕನಾಥ ಜಿ.ಪಾಟೀಲ್‌ರವರು ಎಲ್ಲರನ್ನು ಸ್ವಾಗತಿಸಿದರು. ಶ್ರೀ ಭಾಸ್ಕರ ದೇಶಪಾಂಡೆಯವರು ಮುಖ್ಯ ವಕ್ತಾರರಾಗಿ ಕಾರ್ಯಕ್ರಮಕ್ಕೆ ಆಗಮಿಸಿ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಕಾರ್‍ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಅರುಣ್ ಶಹಾಪುರ್‌ರವರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲ್, ರಾಜ್ಯ ಖಜಾಂಚಿಗಳಾದ ಶ್ರೀ ಜೋಶಿರವರು ಭಾಗವಹಿಸಿದ್ದರು. ಅಲ್ಲದೆ ನಮಗೆಲ್ಲಾ ಹಿರಿಯರು, ಮಾರ್ಗದರ್ಶಕರಾದ ಶ್ರೀ ಅಶೋಕ್‌ರವರು ಕೂಡ ಭಾಗವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಾಗಿ ಸುದೀರ್ಘ ಚರ್ಚೆಯನ್ನು ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಉಮೇಶ್ ಕುಲಕರ್ಣಿಯವರು ಉಪಸ್ಥಿತರಿದ್ದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.
ದಿನಾಂಕ 13-9-2020 ರಂದು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ರಾಮನಗರ ಜಿಲ್ಲೆಯಿಂದ ಸಭೆ ನಡೆಸಲಾಯಿತು. ಸಭೆಯಲ್ಲಿ ರಾಮನಗರ ಜಿಲ್ಲೆಯ ೮೦ಕ್ಕಿಂತ ಹೆಚ್ಚು ಶಿಕ್ಷಕರು ಸಭೆಯಲ್ಲಿ ಭಾಗವಹಿಸಿದ್ದರು. ಎಬಿಆರ್‌ಎಸ್‌ಎಂನ ರಾಷ್ಟ್ರೀಯ ಮಹಿಳಾ ಸಹ ಕಾರ್ಯದರ್ಶಿಗಳಾದ ಮಮತ.ಡಿ.ಕೆಯವರ ಸರಸ್ವತಿ ವಂದನೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ರಾಜ್ಯಪ್ರತಿನಿಧಿ ಸಿದ್ದಲಿಂಗ ಸ್ವಾಮಿಯವರು ಸ್ವಾಗತಿಸಿದರು. ಜಿಲ್ಲಾ ಘಟಕದ ಅಧ್ಯಕ್ಷರಾದ ಸಿ.ವಿ ಜಯಣ್ಣನವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಣ ನೀತಿ ನಡೆದು ಬಂದ ದಾರಿಯನ್ನು ತಿಳಿಸಿದರು. ನಂತರ ಮಾನ್ಯ ಶ್ರೀ ರಘುನಂದನ್‌ಜಿ ರವರನ್ನು ರಾಜ್ಯ ಸಹಕಾರ್ಯದರ್ಶಿಗಳಾದ ಗಂಗಾಧರಾಚಾರಿಯವರು ಪರಿಚಯಿಸಿದರು.
ನಂತರ ಉಪನ್ಯಾಸವನ್ನು ನೀಡುತ್ತಾ ಮಾತನಾಡಿದ ರಘುನಂದನ್‌ಜಿಯವರು ಹಿಂದಿನ ರಾಷ್ಟ್ರೀಯ ಶಿಕ್ಷಣ ನೀತಿಯು ಬ್ರಿಟಿಷರ ಹಿಡಿತದಲ್ಲಿ ಇದ್ದು, ಅವರು ಅನುಸರಿಸಿಕೊಂಡು ಬಂದ ವಿಚಾರಗಳು, ಸ್ವಾತಂತ್ರ್ಯ ನಂತರ ಬಂದ ಶಿಕ್ಷಣ ನಿಯಮಗಳು, ಅದರಲ್ಲಿ ಬಂದ ಲೋಪ ದೋಷಗಳು 1986 ಶಿಕ್ಷಣ ನೀತಿ ವಿಚಾರಗಳನ್ನು ವಿವರವಾಗಿ ವಿವರಿಸಿ ಶಿಕ್ಷಣದಲ್ಲಿ ಬದಲಾವಣೆಯ ಅವಶ್ಯಕತೆಯನ್ನು ಒತ್ತಿ ಹೇಳಿದರು. 2020 ರ ರಾಷ್ಟ್ರೀಯ ಶಿಕ್ಷಣ ನೀತಿಯ ಅವಶ್ಯಕತೆ, 1 ರಿಂದ 12 ನೇ ತರಗತಿಯ ಹಂತಗಳನ್ನು ಹೇಳಿದರು. ಹೊಸ ಶಿಕ್ಷಣ ನೀತಿಯಲ್ಲಿ ಇರುವ ಪ್ರಮುಖ ಹನ್ನೊಂದು ಅಂಶಗಳನ್ನು ವಿವರಿಸಿದರು. ಪ್ರಸ್ತುತ ಸನ್ನಿವೇಶದಲ್ಲಿ ಹೊಸ ಶಿಕ್ಷಣ ನೀತಿ ಬಗ್ಗೆ ಸವಿವರವಾಗಿ ವಿವರಿಸಿದರು. ನಂತರ ಶಿಕ್ಷಕರ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ರಘುನಂದನ್‌ಜಿಯವರನ್ನು ಅಭಿನಂದಿಸಲಾಯಿತು. ರಾಜ್ಯಕಾರ್ಯದರ್ಶಿಗಳಿಂದ ಚಿದಾನಂದ ಪಾಟೀಲ್‌ರವರು ರಾಜ್ಯ ಜಿಲ್ಲಾ ಘಟಕದ ಈ ಕಾರ್ಯಕ್ರಮವನ್ನು ಕುರಿತು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರಾದ ಸಂದೀಪ್ ಬೂದಿಹಾಳ್, ಖಜಾಂಜಿ ಜೆ.ಎಂ ಜೋಶಿ, ತಾ|| ಅಧ್ಯಕ್ಷರು, ಜಿಲ್ಲಾಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು. ಸುಮಂಗಲರವರು ವಂದಿಸಿದರು. ಜಿಲ್ಲಾಘಟಕದ ಕಾರ್ಯದರ್ಶಿಗಳಿಂದ ಚೆನ್ನೇಗೌಡ ಬಿ. ಯವರು ಕಾರ್ಯಕ್ರಮವನ್ನು ನಿರೂಪಿಸಿದರು.