ಕೆ.ಆರ್.ಪೇಟೆ : ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ, ಮಂಡ್ಯ ಜಿಲ್ಲಾ ಘಟಕ ಹಾಗೂ ಸತ್ಯಂ ಎಜುಕೇರ್ ಕಂಪನಿ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ತರಗತಿಗೆ ಆಂಗ್ಲಭಾಷೆ ಬೋಧಿಸುವ ಶಿಕ್ಷಕರಿಗೆ ಆನ್‌ಲೈನ್ ತರಬೇತಿ ಮಾದರಿಯ ತರಗತಿಗಳನ್ನು ಆಯೋಜಿಸಲಾಗಿದೆ.
ಇದು ಶಿಕ್ಷಕರಿಗೆ ಪುನರ್ ಮನನ ತರಬೇತಿಯಾಗಿರುತ್ತದೆ. ಮಕ್ಕಳಿಗೆ ಆಂಗ್ಲಭಾಷೆಯನ್ನು ಸುಲಭವಾಗಿ ಹೇಗೆ ಬೋಧಿಸಬೇಕು. ಕಠಿಣ ಎನ್ನುತ್ತಿರುವ ಆಂಗ್ಲಭಾಷೆಯನ್ನು ಸುಲಭ ಎನ್ನುವಂತಹ ವಾತಾವರಣವನ್ನು ಮಕ್ಕಳಲ್ಲಿ ನಿರ್ಮಿಸುವಂತಹ ಭೋಧನೆಗೆ ಶಿಕ್ಷಕರನ್ನು ಸಜ್ಜುಗೊಳಿಸಲು ಈ ತರಬೇತಿ ಅಗತ್ಯವಾಗಿದೆ. ಮಕ್ಕಳಿಗೆ ಸುಲಭವಾಗಿ ಕಲಿಸುವಂತಹ ತರಬೇತಿಯನ್ನು ಶಿಕ್ಷಕರಿಗೆ ನೀಡಲಾಗುವುದು. ಹಾಗಾಗಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಆಂಗ್ಲಭಾಷಾ ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ಕಮೀಷನರ್ ಕೆ.ಎಲ್.ನಾಗರಾಜು, ಮೈಸೂರು ಇವರು ತಮಗೆ ಆನ್ ಲೈನ್ ಮೂಲಕ ಸಮಗ್ರ ಮಾಹಿತಿ ನೀಡಲಿದ್ದಾರೆ.
ಹೆಚ್ಚಿನ ವಿವರಗಳಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಮಂಡ್ಯ ಜಿಲ್ಲಾಧ್ಯಕ್ಷರಾದ ಡಾ.ಕೆ.ಕಾಳೇಗೌಡ, 9448676723 ಹಾಗೂ ಸತ್ಯಂ ಎಜುಕೇರ್ ಕಂಪನಿ ಮ್ಯಾನೇಜಿಂಗ್ ಟ್ರಸ್ಟಿ ರಂಗೇಶ್ ಅರಕೆರೆ ಅವರನ್ನು ಸಂಪರ್ಕಿಲು ಕೋರಲಾಗಿದೆ.