ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು, ಜಿಲ್ಲಾ ಘಟಕ ಕೊಪ್ಪಳ ಇವರ ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ವಿವೇಕಾ ಕಂಪ್ಯೂಟರ್‍ಸ್ ಕುಷ್ಟಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಶ್ರೀ ಬಿ. ಎಂ. ಜೋಶಿ ಮುಖ್ಯಸ್ಥರು, ವಿವೇಕ ಕಂಪ್ಯೂಟರ್‍ಸ್ ಕುಷ್ಟಗಿ ಇವರು ಉದ್ಘಾಟಿಸಿ ಮಾತನಾಡಿ ಗುರುಗಳನ್ನು ಸ್ಮರಿಸಿಕೊಳ್ಳುವ ಇಂತಹ ಕಾರ್ಯಕ್ರಮ ಶಿಕ್ಷಕರಲ್ಲಿ ಆತ್ಮಸ್ಥೈರ್ಯ, ನೈತಿಕ ಮೌಲ್ಯ ಮೂಡಿಸುತ್ತದೆ ಹಾಗೂ ಗುರುವಿನಿಂದ ಅಸಾಧ್ಯವಾಗಿದ್ದರೂ ಸಾಧ್ಯವಾಗಿಸುವ ಮಾರ್ಗವನ್ನು ಗುರು ಸಾಧಿಸಿ ತೋರಿಸುವುದು ದೊಡ್ಡ ಕಾರ್ಯವಾಗಿದೆ. ಆದ್ದರಿಂದ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ಮುಖ್ಯಭಾಷಣಕಾರರಾಗಿ ಮಂಗಳೂರು ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕರಾದ ಡಾ|| ಜಯಣ್ಣ ವಿ. ಗೊರೆ ಬಾಳವರವರು ಗುರುಪರಂಪರೆ ನಡೆದು ಬಂದ ದಾರಿ, ಗುರುವಿನ ಮಹತ್ವ, ಗುರುವಿನಿಂದ ಎಂತಹ ಸಾಧನೆಗಳು ಸಾಧ್ಯವಾಗುತ್ತದೆ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಗುರುವಂದನಾ ಕಾರ್ಯಕ್ರಮ ಸಂಘದವರು ಶಿಕ್ಷಕರಿಗಾಗಿ ಏರ್ಪಡಿಸಿ ಈ ಮೂಲಕ ಶಿಕ್ಷಕರಿಗೆ ಸ್ಫೂರ್ತಿದಾಯಕವಾಗುವಂತೆ ರಚನಾತ್ಮಕ ಕಾರ್ಯ ಇದಾಗಿದೆ ಎಂದರು. ಗುರು-ಗುರಿ ಇದ್ದರೆ ಯಶಸ್ಸು ತಾನಾಗಿಯೇ ಬರುತ್ತದೆ ಎಂದು ತಿಳಿಸಿದರು. ಶಿಕ್ಷಕರು ಕರ್ತವ್ಯನಿಷ್ಠೆ, ಸಮಯಪ್ರಜ್ಞೆ, ಶಿಸ್ತು, ಕಲಿಕೆ ಮೇಲೆ ಪ್ರೀತಿ, ಸ್ವಯಂಕಲಿಕೆ ನಿರಂತರ ಸಾಧಿಸಿ ಉತ್ತಮ ಶಿಕ್ಷಣ ನೀಡಿ ರಾಷ್ಟ್ರ ನಿರ್ಮಾಣದಂತಹ ಮಹತ್ಕಾರ್ಯ ನಡೆಯಲಿ ಎಂದು ಆಶಿಸಿದರು.
ಎಬಿಆರ್‌ಎಸ್‌ಎಮ್‌ನ ಮಹಿಳಾ ವಿಭಾಗದ ಸಹ ಕಾರ್ಯದರ್ಶಿ ಡಿ. ಕೆ. ಮಮತಾ ಇವರು ಸರಸ್ವತಿ ವಂದನೆ ನೆರವೇರಿಸಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯರು ಗುಂಡಾಚಾರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಸೋಮಶೇಖರರವರು, ಬಸವರಾಜ ಮಾಸ್ತಿ, ಕೆ. ದಯಾನಂದ ಬಾಬು ಉಪಸ್ಥಿತರಿದ್ದರು.
ಅರವಿಂದ ದೇಸಾಯಿ ನಿರೂಪಿಸಿದರು. ಎಸ್. ಸಿ ಮಾಟೂರ್‌ರವರು ಮುಖ್ಯ ಭಾಷಣಕಾರರ ಪರಿಚಯ ಪರಿಚಯ ಮಾಡಿಕೊಟ್ಟರು. ಕೊನೆಯಲ್ಲಿ ಹನಮೇಶ ಕುಲಕರ್ಣಿ ವಂದಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕ.ರಾ.ಮಾ.ಶಿ.ಸಂಘ ಅಥಣಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಗುರು ವಂದನಾ ಕಾರ್ಯಕ್ರಮ ದಿನಾಂಕ 27-7-2020 ರಂದು ಸಾಯಂಕಾಲ 4 ಗಂಟೆಗೆ ಜರುಗಿತು.