ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ), ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ದಿ: 19-9-2020 ರಂದು ರಾಷ್ಟ್ರೀಯ ಶಿಕ್ಷಣ ನೀತಿ -೨೦೨೦ರ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಬೆಂಗಳೂರು ಉತ್ತರ ವಲಯ-1 ರ ಅಧ್ಯಕ್ಷರಾದ ಶ್ರೀ ನಾರಾಯಣ ಭಟ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ವಿಚಾರ ಸಂಕಿರಣದ ಉಪನ್ಯಾಸಕರು, ಶಿಕ್ಷಣ ತಜ್ಞರು, ಎಮ್.ಇ.ಎಸ್ ಶಿಕ್ಷಕರ ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲರಾದ ಡಾ.ಹೆಚ್.ಎಸ್.ಗಣೇಶ ಭಟ್ಟರವರ ಪರಿಚಯ ಮತ್ತು ಸ್ವಾಗತವನ್ನು ಬೆಂಗಳೂರು ಉತ್ತರ ವಲಯ -3 ರ ಕಾರ್ಯದರ್ಶಿಯವರಾದ ಶ್ರೀ ಎಂ.ವಿ.ಗಂಗಾಧರ ರವರು ನಡೆಸಿಕೊಟ್ಟರು. ಮಾಧ್ಯಮಿಕ ಶಿಕ್ಷಕ ಸಂಘ ಬೆಳೆದು ಬಂದ ಹಾದಿ, ಪ್ರತಿ ಶೈಕ್ಷಣಿಕ ವರ್ಷದಲ್ಲಿ ಸಂಘದ ಮೂಲಕ ಕೈಗೊಳ್ಳುವ ಕಾರ್ಯಕ್ರಮಗಳ ವಿವರಗಳನ್ನು ರಾಜ್ಯ ಖಜಾಂಚಿಗಳಾದ ಶ್ರೀ ಜೆ.ಎಂ.ಜೋಷಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ಡಾ.ಹೆಚ್.ಎಸ್.ಗಣೇಶ ಭಟ್ಟರು ರಾಷ್ಟ್ರೀಯ ಶಿಕ್ಷಣ ನೀತಿ-2020 ಬೆಳೆದು ಬಂದ ರೀತಿಯಿಂದ ಇಂದಿನ ಶಿಕ್ಷಕರು ವೈಜ್ಞಾನಿಕವಾಗಿ ಹೇಗೆ ತೊಡಗಿಸಿಕೊಳ್ಳಬೇಕೆಂದು ಮನಮುಟ್ಟುವಂತೆ ತಿಳಿಸಿದರು. ವಿಚಾರ ಸಂಕಿರಣದಲ್ಲಿ ಶಿಕ್ಷಕರು ಭಾಗವಹಿಸಿ ಉತ್ತಮ ಪ್ರೋತ್ಸಾಹವನ್ನು ನೀಡಿದರು. ಅನೇಕ ಶಿಕ್ಷಕರು ಹೊಸ ಶಿಕ್ಷಣ ನೀತಿಯ ಬಗ್ಗೆ ತಮಗಿರುವ ಸಂದೇಹಗಳನ್ನು ಪ್ರಶ್ನೆಗಳ ಮೂಲಕ ಪರಿಹರಿಸಿಕೊಂಡರು. ಬೆಂಗಳೂರು ವಿಭಾಗ ಪ್ರಮುಖರಾದ ಶ್ರೀ ಮಲ್ಲಿಕಾರ್ಜುನ ಕೂಡಗಿರವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿಯವರಾದ ಶ್ರೀ ಗಂಗಪ್ಪರವರು ನಿರ್ವಹಿಸಿದರು.
ವರದಿ: ಎಂ.ವಿ.ಗಂಗಾಧರ ಕಾರ್ಯದರ್ಶಿ, ಕ.ರಾ.ಮಾ.ಶಿ.ಸಂ
ಬಾಗಲಕೋಟೆ
ರೋಟರಿ ಕ್ಲಬ್ ಬಾಗಲಕೋಟೆ ಸಂಸ್ಥೆಯ ವತಿಯಿಂದ ಶಿಕ್ಷಕರಿಗಾಗಿ “ರಾಷ್ಟ್ರೀಯ ಶಿಕ್ಷಣ ನೀತಿ 2020” ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಜರುಗಿತು. ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ವಿಷಯದ ಪ್ರಾಸ್ತಾವಿಕ ನುಡಿಯನ್ನು ಶ್ರೀ ರಘುನಂದನ, ದಕ್ಷಿಣ ಮಧ್ಯ ಕ್ಷೇತ್ರ ಸಂಯೋಜಕರು, ಪ್ರಜ್ಞಾ ಪ್ರವಾಹ, (ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ) ಇವರು ಮಾತನಾಡಿದರು. ಕಾರ್ಯಾಗಾರದಲ್ಲಿ ವಿಷಯ ಮಂಡನೆ, ಸಂವಾದ ಹಾಗೂ ಸಮಾರೋಪದ ಅವಧಿಯಲ್ಲಿ ವಿವರವಾದ ಮಾಹಿತಿಯನ್ನು ಶಿಕ್ಷಕರಿಗೆ ತಲುಪಿಸುವ ಕಾರ್ಯ ಶ್ಲಾಘನೀಯ. ರೋಟರಿ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಸಿ.ಎಚ್.ಕಟಗೇರಿ, ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಪ್ರೊ. ರವಿ ಪಾಟೀಲ, ಪ್ರಜ್ಞಾ ಪ್ರವಾಹದ ಪ್ರಮುಖರು ಹಾಗೂ ಶಿಕ್ಷಕರಾದ ಶ್ರೀ ಮೋಹನ ದೇಶಪಾಂಡೆ, ಸಾಹಿತಿಗಳಾದ ಪ್ರೊ. ಜೆ.ಕೆ.ತಳವಾರ ಹಾಗೂ ಬಾಗಲಕೋಟೆ ಜಿಲ್ಲೆಯ ಶಿಕ್ಷಕರು ಉಪನ್ಯಾಸ ಮತ್ತು ಸಂವಾದದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಘಟಕ ಬಾಗಲಕೋಟೆ
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ) ಜಿಲ್ಲಾ ಘಟಕ ಬಾಗಲಕೋಟೆ ನೆರವೇರಿಸಿದ ರಾಷ್ಟ್ರೀಯ ಶಿಕ್ಷಣ ನೀತಿ 2020 ಕಾರ್ಯಾಗಾರದಲ್ಲಿ ಮುಖ್ಯ ಉಪನ್ಯಾಸಕರಾಗಿ ಸನ್ಮಾನ್ಯ ಶ್ರೀ ಅರುಣ್ ಶಹಾಪುರ ಜೀ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದರು. ಸಂಘದ ರಾಜ್ಯ ಪ್ರಕಾಶನ ಪ್ರಕೋಷ್ಠರಾದ ಶ್ರೀ ಜಿ. ಕೆ. ತಳವಾರ, ರಾಜ್ಯ ಶಿಕ್ಷಾಪ್ರಕೋಷ್ಟರಾದ ಶ್ರೀ ದಯಾನಂದ ಶಿಕ್ಕೆರಿ, ಜಿಲ್ಲಾಧ್ಯಕ್ಷರಾದ ಶ್ರೀ ಆರ್. ಜಿ. ಸನ್ನಿ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.