ಪದವಿ ಪೂರ್ವ ಶಿಕ್ಷಣ ಇಲಾಖೆ 2020-21 ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ತರಗತಿಗಳನ್ನು ಪ್ರಾರಂಭ ಮಾಡುವ ಕುರಿತು ಸಭೆಯನ್ನು ಮಾನ್ಯ ಶ್ರೀ ಎಸ್. ಸುರೇಶಕುಮಾರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ನಡೆಸಿದರು.
ಎಲ್ಲರಿಂದ ಬಹಳ ಉತ್ಸಾಹದಾಯಕ ಪ್ರತಿಕ್ರಿಯೆ ಕೇಳಿಬಂತು. ಜೊತೆಗೆ ಮೊದಲನೇ ಪಿಯುಸಿ ತರಗತಿಗಳನ್ನು ಎಲ್ಲಾ ಕ್ರಮಗಳನ್ನು ಅನುಸರಿಸಿ ಪ್ರಾರಂಭಿಸುವ ಅಗತ್ಯತೆ ಕುರಿತು ಆಗ್ರಹ ಕೇಳಿಬಂದಿದೆ. ಈ ಬಗ್ಗೆ ರಾಜ್ಯದ ತಜ್ಞರ ಸಮಿತಿ ಸಲಹೆ ಕೇಳಿ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಲಾಯಿತು.
ಸಭೆಯಲ್ಲಿ ಶ್ರೀ ಉಮಾಶಂಕರ IAS, ಪ್ರಧಾನ ಕಾರ್ಯದರ್ಶಿ ಶಿಕ್ಷಣ ಇಲಾಖೆ. ಶ್ರೀಮತಿ ಸ್ನೇಹಲ್ ಆರ್. IAS, ಮಾನ್ಯ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ರಾಜ್ಯದ ವಿವಿಧ ಶಿಕ್ಷಕ ಸಂಘಟನೆಗಳ ಅಧ್ಯಕ್ಷರು ಭಾಗವಹಿಸಿದ್ದರು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಅಧ್ಯಕ್ಷರಾದ ಸಂದೀಪ್ ಬೂದಿಹಾಳ್ ರವರು ಮತ್ತು ಸಹ ಕಾರ್ಯದರ್ಶಿಗಳಾದ ಗಂಗಾಧರಾಚಾರ್ಯರು ಭಾಗವಹಿಸಿದ್ದರು.