ದಿನಾಂಕ 12-1-2021 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಮೈಸೂರು ಜಿಲ್ಲೆಯವರು ಕರ್ತವ್ಯ ಬೋಧ ದಿವಸವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಎ.ಬಿ.ಆರ್.ಎಸ್.ಎಮ್ ನ ಮಹಾಮಂತ್ರಿಗಳಾದ ಶ್ರೀ ಶಿವಾನಂದ ಸಿಂಧನಕೇರಾರವರು ಭಾಗವಹಿಸಿ ಸಭಿಕರಿಗೆ ಕರ್ತವ್ಯ ದಿನದ ಬಗ್ಗೆ ಸವಿವರವಾಗಿ ತಿಳಿಸಿದರು.
ಶ್ರೀಯುತ ನಾಗಮಲ್ಲೇಶ್, ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆಯವರು ಭಾಗವಹಿಸಿ ಗುರು-ಶಿಷ್ಯ ಪರಂಪರೆಯ ಬಗ್ಗೆ ಸವಿವರವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಕೆ.ಎನ್. ಜಯದೇವರಾಜ ಅರಸ್, ಜಿಲ್ಲಾ ಅಧ್ಯಕ್ಷರು, ಮೈಸೂರು ಜಿಲ್ಲೆ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ.ರಾ.ಮಾ.ಶಿ.ಸಂಘ, ಮೈಸೂರು ಜಿಲ್ಲೆಯ ಕೆ.ಆರ್ ಉದಯರವಿಪ್ರಕಾಶ್, ಜಿಲ್ಲಾ ಪ್ರಧಾನಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಒಟ್ಟು ೫೦ ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.