ಸಂಕಲ್ಪ ದಿನ – ಯಾದಗಿರಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಯಾದಗಿರಿ ವತಿಯಿಂದ ಜವಾಹರ ಪ್ರೌಢಶಾಲೆ ಯಾದಗಿರಿಯಲ್ಲಿ ಕರ್ತವ್ಯ ಬೋಧ, ಸಂಕಲ್ಪ ದಿನ ಆಚರಿಸಲಾಯಿತು. ಜವಾಹರ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈ ಕಾರ್ಯಕ್ರಮವು ಪ್ರಾರಂಭವಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ್ ಪೂಜಾರಿ ಸರ್ ಇವರು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯು ಶ್ರೀ ರಾಮಕೃಷ್ಣಾಶ್ರಮದ ಸಂಚಾಲಕರಾದ ಆದರಣಿಯ ಶ್ರೀ ವೇಣುಗೋಪಾಲ್ ಜಿ ಅವರು ಉಪಸ್ಥಿತರಿದ್ದು, ಕಾರ್ಯಕ್ರಮ ಕುರಿತು ಉದ್ಘಾಟನೆ ಮಾಡಿದರು. ಪ್ರಾರ್ಥನೆ ಹಾಗೂ ವಿವೇಕಾನಂದರ ಗೀತೆಯಿಂದ ಪ್ರಾರಂಭವಾಗಿ, ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ವಿಧಿವತ್ತಾಗಿ ಶುಭಾರಂಭವಾಯಿತು.

ಪ್ರಸ್ತಾವಿಕ ನುಡಿಗಳನ್ನಾಡಿದ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ಬಿರಾದಾರ್‌ರವರು ಮಾಧ್ಯಮಿಕ ಶಿಕ್ಷಕರ ಸಂಘವು ಶೈಕ್ಷಣಿಕ ಸಂವರ್ಧನೆಯನ್ನು ಕೇಂದ್ರವಾಗಿಟ್ಟುಕೊಂಡು, ವಿವಿಧ ಕ್ರಿಯಾ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿ, ಶೈಕ್ಷಣಿಕ ದಿಸೆಯಲ್ಲಿ ತನ್ನದೇ ಆದ ವಿಶಿಷ್ಟ ಕೆಲಸಕಾರ್ಯಗಳು ಮಾಡುತ್ತಿದೆ. ನಮ್ಮ ಸಂಘದ ಧ್ಯೇಯೋದ್ದೇಶವಾದ ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ, ಶಿಕ್ಷಕನ ಹಿತಕ್ಕಾಗಿ ಸಮಾಜ ಎಲ್ಲರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರೆ ವಿದ್ಯಾರ್ಥಿಗಳ ಸರ್ವಾಗೀಂಣ ವಿಕಾಸವಾಗಿ ದೇಶದಲ್ಲಿ ಸತ್ಪ್ರಜೆಗಳು ನಿರ್ಮಾಣವಾಗುತ್ತಾರೆ. ಇದೊಂದು ತತ್ವಾಧಾರಿತ ಸಂಘಟನೆ, ಇಲ್ಲಿರುವ ಎಲ್ಲಾ ಶಿಕ್ಷಕರು ತುಂಬಾ ಸಮರ್ಪಿತ ಭಾವದಿಂದ ಸೇವೆ ಮಾಡುವಂಥವರು. ನಮ್ಮ ಸಂಘಟನೆಯ ಆದ್ಯಪ್ರವರ್ತಕರೆಂದರೆ ಶ್ರೀ ಕೃ ನರಹರಿ ಜಿ ಇವರ ವಿಶಾಲ ದೃಷ್ಟಿಕೋನ ಹಾಗೂ ಕರ್ತವ್ಯ ಶೀಲತೆಯ ಪ್ರೇರಣೆಯೊಂದಿಗೆ ನಮ್ಮ ಸಂಘ ರಾಷ್ಟ್ರದ ಹಿತವನ್ನು ಕೇಂದ್ರವಾಗಿಟ್ಟುಕೊಂಡು ಅನೇಕ ಕೆಲಸ ಕಾರ್ಯಗಳು ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಮಲ್ಲಿಕಾರ್ಜುನ್ ಪೂಜಾರಿ ಸರ್ ಇವರು ಮಾತನಾಡಿ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯವೆಂದರೆ ನೇರವಾಗಿ ಶಿಕ್ಷಣಕ್ಕೆ ಸಂಬಂಧಿಸಿದ್ದು, ಎಲ್ಲಾ ಶಿಕ್ಷಕರು ತಮ್ಮ ತಮ್ಮ ಕರ್ತವ್ಯದ ಆತ್ಮಾವಲೋಕನ ಮಾಡಿಕೊಂಡು, ಈ ವಿಶೇಷ ಸಂದರ್ಭದಲ್ಲಿ ಕರ್ತವ್ಯ ಬೋಧ ದಿನದಿಂದ ಪ್ರೇರಣೆ ಪಡೆಯಬಹುದು. ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯಿಂದ ಪ್ರಾರಂಭವಾದ ಈ ಕಾರ್ಯಕ್ರಮ ನೇತಾಜಿ ಸುಭಾಷ್ ಚಂದ್ರ ಬೋಸರ ಜನ್ಮಜಯಂತಿಯ ಸವಿ ನೆನಪಿನಲ್ಲಿ ಮುಕ್ತಾಯವಾಗುತ್ತದೆ.

ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ವೇಣುಗೋಪಾಲ್ ರಾಮಕೃಷ್ಣ ಆಶ್ರಮ ಇವರು ಭಾರತಕ್ಕೆ ಸ್ವತಂತ್ರ ಸಿಕ್ಕುವಲ್ಲಿ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಸ್ವಾಮಿ ವಿವೇಕಾನಂದರ ಪಾತ್ರ ಅತ್ಯಂತ ದಟ್ಟವಾಗಿ ಕಾಣುತ್ತದೆ. ಒಂದೇ ವೇದಿಕೆಯಲ್ಲಿ ವಿವೇಕಾನಂದರನ್ನು ಹಾಗೂ ನೇತಾಜಿ ಸುಭಾಶ್ಚಂದ್ರ ಬೋಸರನ್ನು ನೆನಪಿಸಿಕೊಳ್ಳುತ್ತಿರುವುದು ನನಗೆ ತುಂಬಾ ಪ್ರೇರಣೆ ನೀಡಿದೆ ಎಂದು ನುಡಿದರು. ವಿವೇಕಾನಂದರು ಮತ್ತು ನೇತಾಜಿ ಇವರಿಬ್ಬರ ವ್ಯಕ್ತಿತ್ವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸ್ವಾಮಿ ವಿವೇಕಾನಂದರು ಕೂಡ ವಿದೇಶದಿಂದ ಭಾರತದ ಏಳಿಗೆಗಾಗಿ ಕೆಲಸ ಮಾಡಿದರು. ನೇತಾಜಿಯವರು ಕೂಡ ವಿದೇಶದಿಂದಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿದರು. ಅಂದಿನ ಕಾಲದಲ್ಲಿ ಹಿಟ್ಲರ್‌ನನ್ನು ಭೇಟಿಯಾಗುವ ಸಾಹಸ ನೇತಾಜಿಯವರಲ್ಲಿ ಇದ್ದಿದ್ದು ಅಂದಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿತ್ತು. “ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂಬ ಅವರ ಮಂತ್ರ ಹಿಂದಿನ ಕಾಲಕ್ಕೆ ಅನುಸರಿಸಿದಾಗ ನೀವು ನಮಗೆ ಉತ್ತಮವಾದ ಆಡಳಿತ ಕೊಡಿ, ನಾವು ನಿಮಗೆ ಉತ್ತಮವಾದ ಪ್ರಜೆಗಳನ್ನು ಕೊಡುತ್ತೇವೆ ಎಂದು ನಾವು ಅಂದುಕೊಳ್ಳಬಹುದು. ಇಂದು ಕ್ರಾಂತಿ ಅವಶ್ಯಕತೆಯಿಲ್ಲ, ಕರ್ತವ್ಯದ ಅವಶ್ಯಕತೆ ತುಂಬಾ ಇದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಯಾದಗಿರಿ ತಾಲೂಕಿನ ತಾಲೂಕು ಅಧ್ಯಕ್ಷರಾಗಿ ಶ್ರೀ ಬಸವರಾಜ, ಮುಖ್ಯಶಿಕ್ಷಕರು, ಜವಾಹರ ಪ್ರೌಢಶಾಲೆ, ಯಾದಗಿರಿ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಅಣ್ಣಾರಾಯರ ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು, ಯಾದಗಿರಿ ಅವರನ್ನು ನೇಮಿಸಲಾಯಿತು. ಕಾರ್ಯಕ್ರಮದಲ್ಲಿ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಸವರಾಜ್ ಬಾನರ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಬಿಸಿ ಪಾಟೀಲ್ ಶಹಪುರ್, ತಾಲೂಕು ಪ್ರಮುಖರಾದ ಈರಣ್ಣ ಕೊಳ್ಳಿ ಹಾಗೂ ಜಿಲ್ಲಾ & ತಾಲೂಕು ಪದಾಧಿಕಾರಿಗಳು, ಶಿಕ್ಷಕರು ಜವಾಹರ ಸಂಸ್ಥೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವು ತುಂಬಾ ಅಚ್ಚುಕಟ್ಟಾಗಿ ನೆರವೇರಿತು.

Highslide for Wordpress Plugin