ರಾಷ್ಟ್ರೀಯ ಕಾರ್ಯಕಾರಿಣಿ – ಒಂದು ವರದಿ

“ನಾವು ಹಿಂದೂಗಳು, ಸೆಕ್ಯುಲರ್‌ಗಳು ಅಲ್ಲ. ಸೆಕ್ಯುಲರ್ ಎಂಬ ಪದದ ಅನುವಾದವನ್ನು ಭಾರತದ ಯಾವ ಭಾಷೆಯಲ್ಲಿಯೂ ಮಾಡಬಾರದು. ಅದರ ಅವಧಾರಣೆಯೂ ಭಾರತದ್ದಲ್ಲ. ನನ್ನ ಧರ್ಮವೇ ಶ್ರೇಷ್ಠ ಎಂದು ನಂಬುವವರು ಭಾರತೀಯರಲ್ಲ. ಸಂವಿಧಾನ ಮಾಡುವಾಗಲೂ ಸೆಕ್ಯುಲರ್ ಪದದ ಉಪಯೋಗವಾಗಬೇಕೇ ಎಂದು ಚರ್ಚೆಯಾಯಿತು. ಆದರೆ ಸಂವಿಧಾನದಲ್ಲಿ ಆ ಶಬ್ದದ ಉಪಯೋಗ ಮಾಡಬಾರದೆಂದು ತೀರ್ಮಾನಿಸಲಾಯಿತು” ಎಂದು ದಿನಾಂಕ 30-1-2021 ಮತ್ತು 31-1-2021 ರಂದು ಗುಜರಾತಿನಲ್ಲಿ ನಡೆದ ಎ.ಬಿ.ಆರ್.ಎಸ್.ಎಮ್.ನ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮನಮೋಹನ್ ವೈದ್ಯಜೀಯವರು ಅಭಿಪ್ರಾಯಪಟ್ಟರು.

ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ 18 ರಾಜ್ಯಗಳ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದರು. ಮೊದಲನೇ ದಿನದಂದು ಎ.ಬಿ.ಆರ್.ಎಸ್.ಎಮ್.ನ ಅಧ್ಯಕ್ಷರಾದ ಶ್ರೀ ಜೆ. ಪಿ. ಸಿಂಘಾಲ್ ಜಿಯವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿವರವಾಗಿ ಹೇಳಿದರು. ಇಲ್ಲಿಯವರೆಗೆ ಮೆಕಾಲೆ ಶಿಕ್ಷಣ ಇತ್ತು. ಭಾರತ ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿಯಾದರು ಭಾರತೀಯ ಶಿಕ್ಷಣ ನೀಡುವುದೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿಯೆಂದು ಹೇಳಿದರು.

ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ ಪ್ರತಿನಿಧಿಗಳು ತಮ್ಮ ತಮ್ಮ ರಾಜ್ಯದಲ್ಲಿ ನಡೆದ ಕಾರ್ಯಕ್ರಮಗಳ ವರದಿಯನ್ನು ಸಭೆಗೆ ನೀಡಿದರು. ತಮ್ಮ ತಮ್ಮ ಶಾಲೆಗಳಲ್ಲಿ ಮಾಡುತ್ತಿರುವ ಹೊಸ ಹೊಸ ಪ್ರಯೋಗಗಳ ಬಗ್ಗೆಯೂ ಸಭೆಗೆ ಮಾಹಿತಿ ನೀಡಿದರು.

“ಮೇರಾ ವಿದ್ಯಾಲಯ-ಮೇರಾ ತೀರ್ಥ” ಎಂಬ ಕಾರ್ಯಕ್ರಮವನ್ನು ದೇಶದ ಎಲ್ಲಾ ರಾಜ್ಯಗಳಲ್ಲೂ ಅಳವಡಿಸಿಕೊಳ್ಳಬೇಕೆಂದು ಎ.ಬಿ.ಆರ್.ಎಸ್.ಎಮ್. ನ ಸಂಘಟನಾ ಮಂತ್ರಿಗಳಾದ ಶ್ರೀ ಮಹೇಂದ್ರ ಕಪೂರ್ ರವರು ತಿಳಿಸಿದರು.

ಸಂಘಟನೆಯ ಮುಂದಿನ ಕಾರ್ಯಕ್ರಮಗಳ ಬಗ್ಗೆಯೂ ಕಾರ್ಯಕಾರಿಣಿಯಲ್ಲಿ ಚರ್ಚೆಯಾಯಿತು. ಮುಂದಿನ ನಿರ್ದಿಷ್ಟ ಕಾರ್ಯಕ್ರಮಗಳ ಬಗ್ಗೆಯೂ ಸೂಚನೆ ನೀಡಲಾಯಿತು.

ಕಾರ್ಯಕಾರಿಣಿಯಲ್ಲಿ http:/news.abrsm.in ಅನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮನಮೋಹನ್ ವೈದ್ಯಜೀಯವರು ಉದ್ಘಾಟನೆ ಮಾಡಿದರು.

ಕಾರ್ಯಕಾರಿಣಿಯಲ್ಲಿ ಒಟ್ಟು 18 ರಾಜ್ಯಗಳಿಂದ 112 ಸದಸ್ಯರು ಹಾಜರಾಗಿದ್ದರು. ಕರ್ನಾಟಕದಿಂದ ಎ.ಬಿ.ಆರ್.ಎಸ್.ಎಮ್. ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಸಿಂಧನಕೇರಾರವರು, ಮಧ್ಯಕ್ಷೇತ್ರಿಯ ಸಂಘಟನಾ ಪ್ರಮುಖರಾದ ಶ್ರೀ ಬಾಲಕೃಷ್ಣ ಭಟ್‌ರವರು, ಮಹಿಳಾ ವಿಭಾಗ ಸಂಯುಕ್ತ ಸಚಿವರಾದ ಶ್ರೀಮತಿ ಮಮತಾ ಡಿ.ಕೆ., ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ್, ಪ್ರಧಾನ ಕಾರ್ಯದರ್ಶಿಗಳಾದ ಶ್ರಿ ಚಿದಾನಂದ್ ಕೆ. ಪಾಟೀಲ್, ಸಹ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಂಗಾಧರ್ ಆಚಾರ್ಯರವರು, ಮಹಿಳಾ ವಿಭಾಗದ ಪ್ರಮುಖರಾದ ಶ್ರೀಮತಿ ವಾಸುಕಿಯವರು ಭಾಗವಹಿಸಿದ್ದರು.

Highslide for Wordpress Plugin