ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಸಹಯೋಗದೊಂದಿಗೆ ದಿನಾಂಕ 10-4-2021, ಶನಿವಾರದಂದು ಸಂಘದ ಕೇಂದ್ರ ಕಛೇರಿ ಯಾದವಸ್ಮೃತಿಯಲ್ಲಿ ಯುಗಾದಿ ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭ ನೆರವೇರಿತು.
ಶ್ರೀಮತಿ ಸುಭದ್ರ, ಪವನ್ ಇಂಗ್ಲೀಷ್ ಸ್ಕೂಲ್‌ರವರು ವಿದ್ಯಾಧಿದೇವತೆಯಾದ ಸರಸ್ವತಿಯ ಪ್ರಾರ್ಥನೆಯನ್ನು ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಡಾ|| ವೆಂಕಟರಮಣ ದೇವರು ಭಟ್, ಬೆಂಗಳೂರು ದಕ್ಷಿಣ ಜಿಲ್ಲಾಕಾರ್ಯದರ್ಶಿರವರು ಯುಗಾದಿಯ ಆಚರಣೆ ಭಾರತೀಯ ಪರಂಪರೆಯಲ್ಲಿ ಎಷ್ಟು ಮಹತ್ವಪೂರ್ಣವಾಗಿದೆ ಎಂಬುದನ್ನು ತಿಳಿಸಿ, ಗಣ್ಯರನ್ನು ಪರಿಚಯಿಸಿ ಸ್ವಾಗತ ಕೋರಿದರು.
ಶ್ರೀ ಜೆ.ಎಂ ಜೋಶಿಯವರು ಕರ್ನಾಟಕ ರಾಜ್ಯಮಾಧ್ಯಮಿಕ ಶಿಕ್ಷಕ ಸಂಘ ರಾಜ್ಯದ ಕೋಶಾಧ್ಯಕರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಪ್ರಮುಖವಾದ ಕಾರ್ಯಕ್ರಮಗಳನ್ನು ವಿವರಿಸಿ ದಿನದರ್ಶಿಕೆ ಬಿಡುಗಡೆಯ ಹಿನ್ನೆಲೆಯನ್ನು ತಿಳಿಸಿದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಶ್ರೀ. ಅ. ದೇವೇಗೌಡರು ವಿಧಾನ ಪರಿಷತ್ ಸದಸ್ಯರು, ಬೆಂಗಳೂರು ಪದವೀಧರ ಕ್ಷೇತ್ರ ಇವರು ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಸಂಘದ ಕಾರ್ಯಕ್ರಮಗಳನ್ನು ಮೆಚ್ಚಿ ಸಂಘದ ಸಾಧನೆ ಬೇರೆ ಸಂಘಗಳಿಗಿಂತ ವಿಶಿಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು. ೫೨ ವರ್ಷಗಳ ಇತಿಹಾಸವನ್ನು ಹೊಂದಿದ ಸಂಘವನ್ನು ನೋಂದಣಿ ಮಾಡಲು ಸಹಕರಿಸುವುದಲ್ಲದೇ ಶಿಕ್ಷಕರ ಯಾವುದೇ ಸಮಸ್ಯೆಗಳಿದ್ದರೂ ಸರ್ಕಾರದ ಜೊತೆ ಮಾತನಾಡಿ ಸಹಕರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಜಿ.ಎಸ್ ಕೃಷ್ಣಮೂರ್ತಿರವರು ಮಾತನಾಡುತ್ತಾ, ನಮ್ಮ ಭಾರತೀಯ ಪರಂಪರೆಯಲ್ಲಿ ಹುಣ್ಣಿಮೆಗಳ ಆಚರಣೆಗಳು ಹಾಗೂ ದೇವಸ್ಥಾನಗಳ ನಿರ್ಮಾಣ ಅತ್ಯಂತ ವೈಜ್ಞಾನಿಕವೆಂಬುದನ್ನು ಫೇಸ್‌ಬುಕ್‌ನಲ್ಲಿ ಅಮೇರಿಕನ್ನರು ವಿಮರ್ಶೆ ಮಾಡಿರುವುದನ್ನು ಹಂಚಿಕೊಂಡರು. ಯುಗಾದಿಯನ್ನು ಸೂರ್ಯಸಿದ್ಧಾಂತ ಮತ್ತು ಚಾಂದ್ರಮಾನ ಸಿದ್ಧಾಂತವನ್ನು ಆಧರಿಸಿ ಹೇಗೆ ಆಚರಿಸುತ್ತಾರೆ ಎಂಬುದನ್ನು ತಿಳಿಸಿಕೊಟ್ಟರು.
ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಗಂಗಪ್ಪರವರು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಗಣ್ಯರನ್ನು ಸ್ಮರಿಸಿಕೊಂಡು ವಂದನಾರ್ಪಣೆ ಮಾಡಿದರು.
ವಿದ್ವಾನ್ ನಾರಾಯಣ ಭಟ್ಟರು ಉತ್ತರವಲಯದ ಕಾರ್ಯದರ್ಶಿಗಳು ಯುಗಾದಿ ದಿನದರ್ಶಿಕೆಯ ಬಿಡುಗಡೆ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು.