‘ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ, ಶಿಕ್ಷಕರ ಹಿತಕ್ಕಾಗಿ ಸಮಾಜ ಎಂಬ ಧ್ಯೇಯ ವಾಕ್ಯದೊಂದಿಗೆ ಸುಮಾರು 34 ವರ್ಷಗಳಿಂದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಕಾರ್ಯನಿರ್ವಹಿಸುತ್ತಾ ಬಂದಿದೆ.
ಪ್ರಸ್ತುತ ಕೊರೊನಾ ಸಂಕಷ್ಟದ ವಿಷಮ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಆತ್ಮ ಸ್ಥೈರ್ಯ, ಮನೋಸ್ಥೈರ್ಯ, ಮನೋಬಲ ತುಂಬುವ ಕೆಲಸ ವಿವಿಧ ಹಂತಗಳಲ್ಲಿ ಮಾಡುತ್ತಾ ಬಂದಿದೆ. ಆಯುರ್ವೇದ ತಜ್ಞರು, ಅಂಕಣಕಾರರಾದ ಖ್ಯಾತ ವೈದ್ಯ ಡಾ|| ಗಿರಿಧರ ಕಜೆ ಅವರು ಕೊರೊನಾವನ್ನು ಎದುರಿಸಲು ಸಹಕಾರಿಯಾಗುವ ಬಹಳ ಉಪಯುಕ್ತ ಮಾಹಿತಿ ನೀಡಿದ್ದಾರೆ.
ರೋಗ ಬಂದಾಗ ರೋಗದ (ಜೊತೆ) ವಿರುದ್ಧ ಹೋರಾಡುವುದರ ಬದಲಾಗಿ ರೋಗ ಬರದ ಹಾಗೆ ನಮ್ಮ ದೇಹವನ್ನು ಪೂರ್ವಸಿದ್ಧತೆ ಮಾಡಿಕೊಳ್ಳುವುದು ಉತ್ತಮ ಎನ್ನುವ ವಿಷಯವನ್ನು ವಿದ್ಯಾರ್ಥಿಗಳು ಎದುರಿಸುವ ಪರೀಕ್ಷೆಗೆ ಹೋಲಿಸಿ ಸರಳವಾಗಿ ಮನಮುಟ್ಟುವಂತೆ ವಿವರಿಸಿದರು. ವಿದ್ಯಾರ್ಥಿಗಳು ಸತತವಾಗಿ ಅಧ್ಯಯನ ಮಾಡಿದರೆ 100 ಕ್ಕೆ 100 ರಷ್ಟು ಅಂಕ ಗಳಿಸಲು ಪರೀಕ್ಷೆಯನ್ನು ಸರಳವಾಗಿ ಆತ್ಮವಿಶ್ವಾಸದಿಂದ ಧೈರ್ಯದಿಂದ ನಿಭಾಯಿಸುತ್ತಾರ. ಅಲ್ಪ ಸ್ವಲ್ಪ ತಯಾರಿ ಮಾಡಿಕೊಂಡ ವಿದ್ಯಾರ್ಥಿ ಅಂದರೆ 100 ಕ್ಕೆ 60 ರಿಂದ 70 ರಷ್ಟು ಅಂಕ ಗಳಿಸುವ ವಿದ್ಯಾರ್ಥಿ ಸ್ವಲ್ಪ ತಡವರಿಸುತ್ತಾ ಪರಿಣಾಮಕಾರಿ ಇಲ್ಲದ ಹಾಗೆ ಎದುರಿಸುತ್ತಾನೆ. ಓದದೆ ಇರುವ ವಿದ್ಯಾರ್ಥಿ ಯಾವ ಪ್ರಯತ್ನವೂ ಮಾಡದೆ ಇರುವ ವಿದ್ಯಾರ್ಥಿ ಪರೀಕ್ಷೆಯನ್ನು ತುಂಬಾ ಭಯಭೀತನಾಗಿ ಎದುರಿಸುತ್ತಾನೆ.
ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ವೈರಾಣು ದುರ್ಬಲವಾಗಿದೆ. ವ್ಯಕ್ತಿ ಸದೃಢವಾಗಿದ್ದರೆ ಯಾವುದೇ ಅಪಾಯ ಆಗುವುದಿಲ್ಲ. ಇದಕ್ಕೆ ದೇಹ ಒಗ್ಗುವ ಪಾರಂಪರಿಕ ಆಹಾರ ಸೇವನೆ ಮಾಡಬೇಕು.
ಇಷ್ಟೆಲ್ಲ ಜಗತ್ತನ್ನು ತಲ್ಲಣಗೊಳಿಸಿದ ಕೊರೋನಾ ಜೀವಿಸುವ ಕಲೆ ಕಲಿಸಿದೆ. ಮಾನವೀಯತೆ, ಕರುಣೆ, ಸ್ವೇಚ್ಛಾಚಾರ, ಸಾಮರಸ್ಯ, ಕೂಡಿಬಾಳುವುದು, ನಿಜವಾದ ಸ್ವಾತಂತ್ರ್ಯದ ಅರ್ಥ ಹಾಗೂ ಬದುಕುವ ಕಲೆ ಕಲಿಸಿಕೊಟ್ಟಿದೆ. ಮನುಷ್ಯ ಹಣಗಳಿಸುವುದೇ ಜೀವನ ಅಲ್ಲ ಎನ್ನುವ ವಾಸ್ತವ ಕಲಿಸಿಕೊಟ್ಟಿದೆ. ಕೂಡಿಬಾಳಿದರೆ ಸ್ವರ್ಗವೇ ಅಲ್ಲಿರುವುದು. ನಗು ಎನ್ನುವುದು ಸಂತೋಷದ ಒಂದು ಭಾಗವಾಗಿದೆ. ಕೊರೋನಾ ಮೊಬೈಲ್ ಇದ್ದ ಹಾಗಾಗಿದೆ. ಅದರಿಂದ ಒಳಿತು, ಕೆಡಕು ಎರಡೂ ಇದೆ. ಕೊನೆಯದಾಗಿ ಕೊರೋನಾ ಆಗಿದೆ ನಾನು ಉಳಿಯೋದಿಲ್ಲವೇನೋ ಎಂದು ಗಾಬರಿಗೊಂಡು ಅಂಜಿದರೆ ಧೈರ್ಯಬಿಟ್ಟರೆ ಅಪಾಯಕ್ಕೆ ಕಾರಣವಾಗುತ್ತದೆ.
ಈ ಒಂದು ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಶ್ರೀ ಸಂದೀಪ್ ಬೂದಿಹಾಳ, ಎ.ಬಿ.ಆರ್.ಎಸ್.ಎಂನ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಾನಂದ ಸಿಂಧನಕೇರಾ, ಮಹಿಳಾ ವಿಭಾಗದ ಸಹ ಕಾರ್ಯದರ್ಶಿಗಳಾದ ಶ್ರೀಮತಿ ಮಮತಾ ಡಿ. ಕೆ., ಕ.ರಾ.ಮಾ.ಶಿ.ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲ, ಹಿರಿಯರಾದ ಶ್ರೀ ನರಹರಿ ಜಿ, ಶ್ರೀ ಬಾಲಕೃಷ್ಣ ಭಟ್ ಜಿ, ಎಂಎಲ್‌ಸಿಗಳಾದ ಶ್ರೀ ಅರುಣ ಶಹಾಪೂರ ಜಿ, ಖಜಾಂಚಿ ಶ್ರೀ ಜೆ. ಎಂ. ಜೋಷಿ, ರಾಜ್ಯ ಮಹಿಳಾ ಪ್ರಮುಖರಾದ ವಾಸುಕಿ ಜಿ. ಎನ್., ಎಲ್ಲಾ ಜಿಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು, ತಾಲ್ಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ವರದಿಗಾರರು : ಶ್ರೀ ಧನಸಿಂಗ್ ರಾಥೋಡ, ಜೇವರ್ಗಿ, ಕ.ರಾ.ಮಾ.ಶಿ.ಸಂಘದ ಮಾಧ್ಯಮ ಘಟಕದ ಸದಸ್ಯರು.