ದಿನಾಂಕ 14-4-2022 ರ ಗುರುವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಮತು ದಕ್ಷಿಣ ಜಿಲ್ಲೆಗಳ ವತಿಯಿಂದ ಸಂಘದ ಕೇಂದ್ರ ಕಛೇರಿ ಯಾದವಸ್ಮೃತಿಯಲ್ಲಿ ಹಮ್ಮಿಕೊಂಡಿದ್ದ ಯುಗಾದಿ ದಿನದರ್ಶಿಕೆ ಲೋಕಾರ್ಪಣೆ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫೋನ್‌ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಪನ್ಮೂಲ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ಉತ್ತರಜಿಲ್ಲಾ ಖಜಾಂಚಿಗಳಾದ ಶ್ರೀ ಹರಿದಾಸ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀಯುತ ಸುರೇಂದ್ರ, ಅಧ್ಯಕ್ಷರು, ಕ.ರಾ.ಮಾ.ಶಿ.ಸ ಬೆಂಗಳೂರು ದಕ್ಷಿಣ ಜಿಲ್ಲೆ ಇವರು ಎಲ್ಲರಿಗೂ ಸ್ವಾಗತವನ್ನು ಕೋರಿದರು. ಶ್ರೀ ಜೆ.ಎಂಜೋಷಿ, ರಾಜ್ಯಕೋಶಾಧ್ಯಕ್ಷರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ಸಪ್ತಗಿರಿಗೌಡರು, ಸಮಾಜ ಸೇವಕರು ಹಾಗೂ ಬೆಂಗಳೂರು ಕೇಂದ್ರದ ಭಾ.ಜ.ಪ ಪ್ರಮುಖರು ಯುಗಾದಿ ದಿನದರ್ಶಿಕೆಯನ್ನು ಲೋಕಾರ್ಪಣೆ ಮಾಡಿ, ಫೋನ್‌ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಪನ್ಮೂಲ ಶಿಕ್ಷಕರನ್ನು ಸನ್ಮಾನಿಸಿ ಶಿಕ್ಷಣದ ಮಹತ್ವ ಮತ್ತು ಸನಾತನವಾಗಿ ಆಚರಿಸಿಕೊಳ್ಳುತ್ತಿರುವ ಸಂಸ್ಕೃತಿಯ ಬಗ್ಗೆ ತಿಳಿಸಿದರು. ಸಂಪನ್ಮೂಲ ಶಿಕ್ಷಕರಾದ ಶ್ರೀ ಎಸ್.ವಿ. ರಮೇಶ ಹಾಗೂ ಶ್ರೀ ಚನ್ನಕೃಷ್ಣಪ್ಪರವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲರು ಫೋನ್‌ಇನ್ ಕಾರ್ಯಕ್ರಮವು ಇಡೀ ಕರ್ನಾಟಕ ರಾಜ್ಯದಲ್ಲಿ ಯಶಸ್ಸನ್ನು ಕಂಡಿದೆ ಎಂದು ತಿಳಿಸಿದರು.
ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಗಂಗಪ್ಪರವರು ವಂದನಾರ್ಪಣೆ ಮಾಡಿದರು. ಕ.ರಾ.ಮಾ.ಶಿ ಸಂಘದ ಬೆಂಗಳೂರು ಉತ್ತರ ವಲಯ-3ರ ಕಾರ್ಯದರ್ಶಿಗಳಾದ ಶ್ರೀ ಎಂ.ವಿ. ಗಂಗಾಧರರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಬೆಂಗಳೂರು ಉತ್ತರಜಿಲ್ಲೆಯ ಮಹಿಳಾ ಪ್ರಮುಖರಾದ ಶ್ರೀಮತಿ ಸೀತಾಭಟ್ಟರವರ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
– ಶ್ರೀ ಎಂ. ವಿ ಗಂಗಾಧರ್, ಕಾರ್ಯದರ್ಶಿ, ಉತ್ತರವಲಯ-೩, ಕ.ರಾ.ಮಾ.ಶಿ ಸಂಘ ಬೆಂಗಳೂರು