ವಿವಿಧೆಡೆಗಳಲ್ಲಿ ನಡೆದ ಕರ್ತವ್ಯ ಬೋಧ ದಿನ

ಬಳ್ಳಾರಿ ಜಿಲ್ಲೆ : ಕರ್ತವ್ಯ ಬೋಧ ದಿನದ ರಾಷ್ಟ್ರೋತ್ಥಾನ ಶಾಲೆಯ ಕಾರ್ಯಕ್ರಮದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಹೆಚ್ ಬಿ ಆನಂದರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯ ಅಧ್ಯಾಪಕರಾದ ಶ್ರೀ ಎಂ ಪಾಪಣ್ಣ ವಕ್ತಾರರಾಗಿ ಮಾಧ್ಯಮಿಕ ಶಿಕ್ಷಕ ಸಂಘದ ಉಪಾಧ್ಯಕ್ಷ ಆರ್ ಕೊಟ್ರಪ್ಪ ಇತರೆ ಶಿಕ್ಷಕರು ಸಂಕಲ್ಪ ಭೋದನೆ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.

ಬೆಳಗಾವಿ ಜಿಲ್ಲೆ : ದಿನಾಂಕ 21 ಜನವರಿ 2023 ರಂದು ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಜಿ ಜಿ ಚಿಟ್ನಿಸ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಕರ್ತವ್ಯ ಬೋಧ ದಿನವನ್ನು ಮಧ್ಯಾಹ್ನ 12 ಗಂಟೆಗೆ ಆಚರಿಸಲಾಯಿತು. ಶ್ರೀ ವಿ ಎನ್ ಜೋಷಿ, ನಿವೃತ್ತ ಪ್ರಾಚಾರ್ಯರು, ಆರ್.ಎಲ್.ಎಸ್ ಕಾಲೇಜು, ಬೆಳಗಾವಿ ಇವರು ಉಪನ್ಯಾಸ ನೀಡಿದರು. ಶ್ರೀ ಆರ್.ಪಿ ಒಂಟಗೋಡೆ, ಶ್ರೀ ಸಂಜೀವ ಕೋಷ್ಟಿ, ಶ್ರೀ ವಿಶ್ವಜೀತ ಹಾಸ್ಬೆ, ಶ್ರೀಮತಿ ನವೀನ ಶೆಟ್ಟಿಗಾರ್, ಮಹಿಳಾ ಪ್ರಮುಖ್, ಶ್ರೀಮತಿ ರೋಹಿಣಿ ನಾಯಕ್, ಕ.ರಾ.ಮಾ.ಶಿ.ಸಂಘದ ರಾಜ್ಯ ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಒಂಟಗೋಡೆ ಅವರಿಗೆ ಸತ್ಕರಿಸಲಾಯಿತು. ಶ್ರೀಮತಿ ರೋಹಿಣಿ ನಾಯಕ್‌ರವರು ಸಭೆಯಲ್ಲಿದ್ದ ಶಿಕ್ಷಕರೆಲ್ಲರಿಗೂ ಪ್ರಮಾಣ ಬೋಧನೆ ಮಾಡಿದರು. ಶ್ರೀಮತಿ ನವೀನ ಶೆಟ್ಟಿಗಾರ್ ಇವರು ಎಲ್ಲರಿಗೂ ಸ್ವಾಗತಿಸಿದರು, ಶ್ರೀ ಸುರೇಶ್ ಕಲ್ಲೇಕಾರ್ ಇವರು ವಂದನೆ ಸಲ್ಲಿಸಿದರು.

ಗುಲ್ಬರ್ಗ ಜಿಲ್ಲೆ : ಜನವರಿ 12, 2023 ರಂದು ಕರ್ತವ್ಯ ಬೋಧ ದಿನವನ್ನು ಸರ್ಕಾರಿ ಪ್ರೌಢಶಾಲೆ, ಚಿತ್ತಾಪುರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಕಾಶಿರಾಯ ಎಸ್, ಶ್ರೀ ರವಿ ಬಿಕೆ, ಶ್ರೀ ಹಯ್ಯಾಳಿ ಕನ್ನಡ ಪಂಡಿತ್, ಶ್ರೀ ನರಸಿಂಹ ಆಲ್ಮೇಲ್ಕರ್ ಚಿತ್ರಕಲಾ ಶಿಕ್ಷಕರು, ಶ್ರೀಮತಿ ರೇಖಾ ಮನಗೂಳಿಕರ್, ಶ್ರೀಮತಿ ರಾಜಲಕ್ಷ್ಮಿ, ಕುಮಾರಿ ವಿಜಯಲಕ್ಷ್ಮಿ, ಶ್ರೀಮತಿ ಸಯ್ಯದ ಹರ್ಷಿಯಾ ತರನುಮ್, ಶ್ರೀಮತಿ ಫರ್ಜನ ಬೇಗಂ, ಶ್ರೀಮತಿ ಸಬಿಹ ಯಾಸ್ಮಿನ್, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬೆಂಗಳೂರು ಉತ್ತರ ಜಿಲ್ಲೆ : ದಿನಾಂಕ 23-1-2023 ರ ಸೋಮವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ಜನವರಿ 12 ರ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಜನವರಿ ೨೩ರ ನೇತಾಜಿ ಸುಭಾಷ್ ಚಂದ್ರ ಭೋಸ್ ಜಯಂತಿಯ ಸಂದರ್ಭದಲ್ಲಿ ಇಬ್ಬರೂ ಮಹಾನ್ ರಾಷ್ಟ್ರ ನಾಯಕರನ್ನು ಸ್ಮರಿಸುತ್ತಾ ಅವರ ತತ್ವ, ಸಿದ್ಧಾಂತಗಳು ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಯಲ್ಲಿ ಪ್ರಚುರ ಪಡಿಸುವ ಮತ್ತು ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುವ ಶಿಕ್ಷಕರಲ್ಲಿ ಇರುವ ಮೌಲ್ಯಗಳು, ಆದರ್ಶಗಳನ್ನು ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಬಳಸುವ ನಿಟ್ಟಿನಲ್ಲಿ ಸಂಕಲ್ಪ ದಿನಾಚರಣೆ ಯನ್ನು ಶಾಲೆಯಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬೆಂಗಳೂರು ಉತ್ತರ ವಲಯ-3ರ ವಿವಿಧ ಶಾಲೆಗಳ ಶಿಕ್ಷಕರೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಮಲ್ಲಿಕಾರ್ಜುನ ಸ್ವಾಮಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ವಿಶಾಲಾಕ್ಷಿ ಆರ್‌ರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕರ್ನಾಟಕ ರಾಜ್ಯಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಕೂಡಗಿರವರು ವೇದಿಕೆಯ ಮೇಲೆ ಆಸೀನರಾದ ಗಣ್ಯರನ್ನು ಸಭೆಗೆ ಪರಿಚಯಿಸಿ, ಸಭಾಂಗಣದಲ್ಲಿ ನೆರೆದ ಎಲ್ಲರನ್ನೂ ಸ್ವಾಗತಿಸಿದರು. ವೇದಿಕೆಯ ಮೇಲಿನ ಗಣ್ಯರು ದೀಪ ಪ್ರಜ್ವಲನ ಮಾಡಿ ಶ್ರೀ ಸ್ವಾಮಿ ವಿವೇಕಾನಂದರು ಮತ್ತು ನೇತಾಜಿ ಸುಭಾಷ್ ಚಂದ್ರಭೋಸರ ಭಾವ ಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಖಜಾಂಚಿಗಳಾದ ಶ್ರೀ ಜೆ. ಎಂ ಜೋಷಿರವರು ಪ್ರಾಸ್ತಾವಿಕ ಭಾಷಣದಲ್ಲಿ ಸಂಘದ ಪರಿಚಯವನ್ನು ಮಾಡಿಕೊಡುತ್ತಾ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮುಖಾಂತರ ನಡೆಸುವ ಎಲ್ಲಾ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳ ವಿವರಗಳನ್ನು ನೀಡಿ ಸಭಾಂಗಣದಲ್ಲಿ ನೆರೆದಿರುವ ಶಿಕ್ಷಕರಲ್ಲಿ ಸಂಘದ ಸದಸ್ಯತ್ವ ಪಡೆದುಕೊಳ್ಳುವಂತೆ ಪ್ರೇರೇಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ವಲಯ-೩ರ ಅಧ್ಯಕ್ಷರಾದ ಶ್ರೀ ಗಂಗಾಧರ ಎಂ.ವಿರವರು ಉತ್ತಮ ರೀತಿಯಲ್ಲಿ ನಡೆಸಿಕೊಟ್ಟರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲರು ಎಲ್ಲಾ ಶಿಕ್ಷಕರಿಗೂ ಸಂಕಲ್ಪ ಬೋಧನೆ ಮಾಡಿಸಿದರು.

ಕಾರ್ಯಕ್ರಮದ ಪ್ರಮುಖ ವಕ್ತಾರರಾಗಿ ಆಗಮಿಸಿದ್ದ ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜು, ಜಯನಗರದ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ|| ಲೋಕೇಶ್.ಟಿ.ಎನ್‌ರವರು ನಮ್ಮ ರಾಷ್ಟ್ರದ ಭವ್ಯ ಪರಂಪರೆಯನ್ನು ಸ್ಮರಿಸುತ್ತಾ ರಾಷ್ಟ್ರಕ್ಕಾಗಿ ಶ್ರೀ ಸ್ವಾಮಿ ವಿವೇಕಾನಂದರು ಹಾಗೂ ನೇತಾಜಿ ಸುಭಾಷ್ ಚಂದ್ರಭೋಸರು ತ್ಯಾಗ, ತತ್ವ ಸಿದ್ಧಾಂತಗಳ ಮೂಲಕ ದೇಶಕ್ಕೆ ಕೊಟ್ಟ ಸಂದೇಶಗಳನ್ನು ನೆನಪಿಸಿದರು. ನೇತಾಜಿ ಸುಭಾಷ್ ಚಂದ್ರಭೋಸರು ಜಲಮಾರ್ಗದ ಮುಖೇನ 87 ದಿನಗಳು ಯಾವ ರೀತಿ ಪ್ರಯಾಣಿಸಿ ಬಂದು ಅವರ ಸೇನೆಯನ್ನು ನಿರ್ಮಿಸಿದರು ಎಂಬುದನ್ನು ನೆನಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೆಂಟ್ ಅಲ್ಫೋನ್ಸಸ್ ಸಂಸ್ಥೆಗಳ ವ್ಯವಸ್ಥಾಪಕರಾದ ರೆವೆರೆಂಡ್ ಫಾದರ್ ಡಾ|| ಜಾನ್ ಮ್ಯಾಥ್ಯೋರವರು ರಾಷ್ಟ್ರ ನಿರ್ಮಾಣದಲ್ಲಿ ಸ್ವಾಮಿ ವಿವೇಕಾನಂದರು ಮತ್ತು ಸುಭಾಷ್ ಚಂದ್ರ ಭೋಸರ ಕರ್ತವ್ಯವನ್ನು ಸ್ಮರಿಸಿದರು ಮತ್ತು ತಮ್ಮ ಸಂಸ್ಥೆಯ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘಕ್ಕೆ ಎಲ್ಲಾ ರೀತಿಯಲ್ಲೂ ಸಹಕರಿಸುವುದಾಗಿ ತಿಳಿಸಿದರು. ಹಾಗೆಯೇ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಹಾಗೂ ಗ್ರಾಮಾಂತರ ಜಿಲ್ಲೆಯ ವಿಭಾಗ ಪ್ರಮುಖರಾದ ಶ್ರೀ ಗಂಗಪ್ಪರವರು ಬೆಂಗಳೂರು ಉತ್ತರ ವಲಯ-3ರ ಎಲ್ಲಾ ಪದಾಧಿಕಾರಿಗಳ ಘೋಷಣೆ ಮಾಡಿ ನೂತನ ಪದಾಧಿಕಾರಿಗಳನ್ನು ವೇದಿಕೆಗೆ ಆಹ್ವಾನಿಸಿ ಗೌರವ ಸಮರ್ಪಣೆ ಮಾಡಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ವಲಯ-೩ರ ಕಾರ್ಯದರ್ಶಿ ಕಿರಣ್‌ಕುಮಾರ.ಎಸ್‌ರವರು ವಂದನಾರ್ಪಣೆ ನಡೆಸಿಕೊಟ್ಟರು. ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ ಹರಿದಾಸ್‌ರವರ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Highslide for Wordpress Plugin