ಬೆಂಗಳೂರು ದಕ್ಷಿಣ ಜಿಲ್ಲೆ – ಸಂಕಲ್ಪ ದಿವಸ
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ದಕ್ಷಿಣ ವಿಭಾಗದ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ, ಕಾಡುಗೋಡಿ ಇಲ್ಲಿ ಕರ್ತವ್ಯ ಬೋಧ ದಿವಸವನ್ನು ಆಚರಿಸಲಾಯಿತು. ವಿಶೇಷ ಉಪನ್ಯಾಸ ನೀಡಿದ ಡಾ|| ವೆಂಕಟರಮಣ ದೇವರು ಭಟ್ಟರವರು ಕರ್ತವ್ಯ ಬೋಧ ದಿವಸದ ಆಚರಣೆಯ ಹಿನ್ನೆಲೆ, ಮಹತ್ವ, ಭಾರತ ದೇಶದ ಹಿರಿಮೆ, ಈ ದೇಶಕ್ಕೆ ಸ್ವಾಮಿ ವಿವೇಕಾನಂದರ ಮತ್ತು ಸುಭಾಸ್ ಚಂದ್ರ ಬೋಸ್‌ರವರ ಕೊಡುಗೆಗಳನ್ನು ವಿವರಿಸುತ್ತ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಆರಂಭದಲ್ಲಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ದೀಪ ಬೆಳಗಿಸಿ ಭಾರತ ಮಾತೆ, ಸುಭಾಸ್ ಚಂದ್ರ ಬೋಸ್ ಮತ್ತು ಸ್ವಾಮಿ ವಿವೇಕಾನಂದರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಉಪಪ್ರಾಂಶುಪಾಲರಾದ ಶ್ರೀ ಮುನಿರಾಜುರವರು ಸ್ಯಾಗತ ಕೋರಿದರು. ಶ್ರೀ ಮಾರೇಗೌಡರವರು ಸಂಕಲ್ಪ ವಿಧಿ ಬೋಧಿಸಿದರು. ಶ್ರೀ ಚನ್ನ ಕೃಷ್ಣಪ್ಪರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಮಂಜುನಾಥ ಬಿ ಕೆರವರು ವಂದನಾರ್ಪಣೆ ಮಾಡಿದರು. ವೇದಿಕೆಯ ಮೇಲೆ ಶ್ರೀ ಯೋಗೇಶ ಸಿ.ಆರ್. ಪಿ ಕಾಡುಗೋಡಿ ಕ್ಲಸ್ಟರ್ ಹಾಗೂ ಶ್ರೀಮತಿ ಸುಮಿತ್ರ ಅಧ್ಯಕ್ಷರು ಎಸ್.ಡಿ.ಎಂ.ಸಿ ರವರು ಉಪಸ್ಥಿತರಿದ್ದರು. ವಿವಿಧ ಶಾಲೆಗಳಿಂದ ಶಿಕ್ಷಕರು ಭಾಗವಹಿಸಿದ್ದರು. ಶ್ರೀಮತಿ ಇಂದ್ರಾಣಿ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಮೈಸೂರು ಸಂಕಲ್ಪ ದಿವಸ್
7-1-2023 ರಂದು ಕೆ ಆರ್ ಎಂ ಎಸ್ ಎಸ್ ಮೈಸೂರು ಜಿಲ್ಲಾ ಘಟಕವತಿಯಿಂದ ಸ್ವಾಮಿ ವಿವೇಕಾನಂದರು ಹಾಗೂ ನೇತಾಜಿ ಸುಭಾಷ್ ಚಂದ್ರಬೋಸ್‌ರ ಜನ್ಮದಿನಾಚರಣೆಯ ನಿಮಿತ್ತ ಕರ್ತವ್ಯ ಬೋಧ ದಿವಸ ಕಾರ್ಯಕ್ರಮವನ್ನು ಗೋಪಾಲ ಸ್ವಾಮಿವಿದ್ಯಾಸಂಸ್ಥೆ ಮೈಸೂರು ಇಲ್ಲಿ ಆಯೋಜಿಸಲಾಗಿದ್ದು ಕಾರ್ಯಾಕ್ರಮದ ವೇದಿಕೆಯ ಅಧ್ಯಕ್ಷತೆಯನ್ನು ಶ್ರೀ ಅರುಣ್ ಕುಮಾರ್ ಸಂಘಟನಾ ಕಾರ್ಯದರ್ಶಿ ಏಖಒSS ಇವರು ಹಾಗೂ ಮುಖ್ಯ ಅತಿಥಿ ಹಾಗೂ ಭಾಷಣಕಾರರಾಗಿ ಶ್ರೀ ಮಂಜುನಾಥರವರು ಗೋಪಾಲಸ್ವಾಮಿ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿಗಳ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಶ್ರೀ ಉದಯರವಿಪ್ರಕಾಶ್. ಸಹಸಂಘಟನಾ ಕಾರ್ಯದರ್ಶಿ ಶ್ರಿ ವಿಜಯಕುಮಾರ್ ಓP ಹಾಗೂ ಕೆಂಪಯ್ಯ ಉಪಸ್ಥಿತರಿದ್ದರು. ವಿಶೇಷವಾಗಿ ಪ್ರೌಢಶಾಲಾ ಶಿಕ್ಷಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ. ಇದು ಕಾರ್ಯಕ್ರಮದ ಅಧ್ಯಕ್ಷರಾದ ಅರುಣ್ ಕುಮಾರ್‌ರವರ ವೈಯಕ್ತಿಕ ಸಂಪರ್ಕದಿಂದ ಎಂದು ತಿಳಿಸಲು ಹರ್ಷಿಸುತ್ತೇವೆ. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ(ರಿ).ಬೆಂಗಳೂರು.
ಕರ್ನಾಟಕ ರಾಜ್ಯ ಮಹಾವಿದ್ಯಾನಿಲಯ ಶಿಕ್ಷಕ ಸಂಘ ವಿವಿಗಳಲ್ಲಿ ದೇಶೀಯ ಚಿಂತನೆ ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ
ವಿಶ್ವವಿದ್ಯಾನಿಲಯಗಳಲ್ಲಿ ದೇಶೀಯ ಚಿಂತನೆ ಇದ್ದಾಗ, ಸಂಸ್ಕಾರ ಪರ ಚಿಂತನೆಯಿದ್ದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಅದನ್ನು ನಿರೀಕ್ಷಿಸಲು ಸಾಧ್ಯ. ಅಧ್ಯಾಪಕರು ತಮ್ಮ ಹೊಣೆಗಾರಿಕೆ ಅರಿತಾಗ, ಶಾಲೆ-ಕಾಲೇಜುಗಳ ಬಗ್ಗೆ ಜನರಲ್ಲಿ ಗೌರವ ಮೂಡಿದಾಗ ಮಾತ್ರ ನಾವು ದೇಶದ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾನಿಲಯ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಡಾ. ರಘು ಅಕ್ಮಂಜಿ ಅಭಿಪ್ರಾಯಪಟ್ಟರು.
ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಹಾವಿದ್ಯಾನಿಲಯ ಶಿಕ್ಷಕ ಸಂಘದ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ವತಿಯಿಂದ ನಡೆ ಕರ್ತವ್ಯ ಬೋಧ ದಿವಸ್ ಮತ್ತು ಸಿಂಡಿಕೇಟ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಆರ್‌ಎಂಎಸ್‌ಎಸ್ ಅಧ್ಯಾಪಕರ ಶ್ರಮವನ್ನು ಗುರುತಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ನಾವು ಯಾವುದೇ ಹುದ್ದೆಯಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿದಾಗ, ಕರ್ತವ್ಯ ಪ್ರಜ್ಞೆ ಇದ್ದಾಗ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ. ಮಂಗಳೂರು ವಿಶ್ವವಿದ್ಯಾನಿಲಯದ ಸಾಧನೆಯಲ್ಲಿ ಸರ್ಕಾರದಿಂದ ನೇಮಕವಾದ ಆರು ಮಂದಿ ಮತ್ತು ರಾಜ್ಯಪಾಲರಿಂದ ನಾಮಾಂಕಿತಗೊಂಡ ಇಬ್ಬರು ಸಿಂಡಿಕೇಟ್ ಸದಸ್ಯರು ಮತ್ತು ಅಧಿಕಾರಿ ವರ್ಗದ ಪಾಲು ದೊಡ್ಡದಿದೆ ಎಂದು ಸ್ಮರಿಸಿಕೊಂಡರು.
ಇದೇ ವೇಳೆ ಕೆಆರ್‌ಎಂಎಸ್‌ಎಸ್ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ವತಿಯಿಂದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ, ಕುಲಸಚಿವ (ಪರೀಕ್ಷಾಂಗ) ಡಾ. ರಾಜು ಕೃಷ್ಣ ಚಲ್ಲಣ್ಣವರ್, ಪೂರ್‍ವತನ ಕುಲಸಚಿವ(ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್‍ಮ, ಹಣಕಾಸು ಅಧಿಕಾರಿ ಡಾ. ಸಂಗಪ್ಪ ವೈ. ಸಿಂಡಿಕೇಟ್ ಸದಸ್ಯರಾದ ರಮೇಶ್ ಕೆ, ರವಿಚಂದ್ರ ಪಿ ಎಂ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಕೆ ಮತ್ತು ರವಿಚಂದ್ರ ಪಿ ಎಂ ವಿಶ್ವವಿದ್ಯಾನಿಲಯ ವಿದ್ಯಾರ್ಥಿಪರ ಮತ್ತು ಪ್ರಾಧ್ಯಾಪಕರ ಪರ ಇರುವಂತೆ ನಾವು ಶ್ರಮಿಸಿದ್ದೇವೆ ಎಂದರಲ್ಲದೆ ಕುಲಪತಿ, ಅಧಿಕಾರಿಗಳ ಧನಾತ್ಮಕ ನಿಲುವನ್ನು ಪ್ರಶಂಸಿಸಿದರು. ಕುಲಸಚಿವ ಡಾ. ಕಿಶೋರ್‌ಕುಮಾರ್ ಸಿ. ಕೆ ಮಾತನಾಡಿ ಸಿಂಡಿಕೇಟ್ ಸದಸ್ಯರು ವಿವಿಯ ಘನತೆಗೆ ಕುಂದು ಬರದಂತೆ, ಕಾನೂನಿನ ಚೌಕಟ್ಟಿನೊಳಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನೆರವಾಗಿದ್ದಾರೆ ಎಂದರು. ಪೂರ್ವತನ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ ಮಾತನಾಡಿ, ವಿವಿಯ ಕಷ್ಟಕಾಲದಲ್ಲಿ ಸಿಂಡಿಕೇಟ್ ನೆರವಾಯಿತು. ನಾನು ಕಣ್ಣೀರು ಸುರಿಸುವ ಪರಿಸ್ಥಿತಿ ಬಂದಾಗ, ರಾಜೀನಾಮೆ ನೀಡಿದಾಗ ಕುಲಪತಿ ಸ್ವಾರ್ಥವಿಲ್ಲದೆ ಕೆಲಸ ಮಾಡಿದ ಸಿಂಡಿಕೇಟ್ ಸದಸ್ಯರು ಧೈರ್ಯ ತುಂಬಿದರು. ಎಂದರು. ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಲಕ್ಷ್ಮೀ ದೇವಿ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ ಎಂ ಕೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಕಾರ್ಯದರ್ಶಿ ವೆಂಕಟೇಶ್ ನಾಯಕ್ ಧನ್ಯವಾದ ಸಮರ್ಪಿಸಿದರು. ಡಾ. ಸುಭಾಷಿಣಿ ಶ್ರೀವತ್ಸ, ಡಾ. ಸುಧಾ ಎನ್, ವೈದ್ಯ ಡಾ. ಯತೀಶ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ಸಂಧ್ಯಾ ಕಾಲೇಜಿನ ಕನ್ನಡ ಪ್ರಾಧ್ಯಾಪಿಕೆ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.