ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಲ್ಲಾ ಪಂಚಾಯತ್ ಉಸ್ತುವಾರಿಗೆ ವಹಿಸಿದ ಬಗ್ಗೆ ವಿರೋಧಿಸಿ, ಪರೀಕ್ಷಾ ವಿಭಾಗವನ್ನು ಪುನಃ ಪಿಯು ಇಲಾಖೆಗೆ ವರ್ಗಾಯಿಸಲು, ಎರಡನೇ ಪೂರಕ ಪರೀಕ್ಷೆ ರದ್ದುಗೊಳಿಸಲು ಮತ್ತು ಶಾಲಾ ಶಿಕ್ಷಣ (ಪದವಿ ಪೂರ್ವ ಶಿಕ್ಷಣ) ಹೆಸರು ಕೈಬಿಟ್ಟು ಮೊದಲಿನಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಎಂದು ಮುಂದುವರೆಸಲು ಒತ್ತಾಯಿಸಿ ದಿನಾಂಕ 1-12-2023 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಅಧ್ಯಕ್ಷರಾದ ಸಂದೀಪ ಬೂದಿಹಾಳ ಹಾಗೂ ಕಾರ್ಯಾಧ್ಯಕ್ಷರಾದ ಅರುಣ ಶಹಾಪುರ ಮತ್ತು ಪ್ರಮುಖರು ಭಾಗವಹಿಸಿದ್ದರು.