ಸಮಾಜದ ಬಗ್ಗೆ ಕಳಕಳಿ ಇರುವ ಸಹ ಮನಸ್ಕ ಮಹಿಳೆಯರ ಏಕತ್ರೀಕರಣಕ್ಕಾಗಿ ವಿವಿಧ ವೃತ್ತಿಜೀವನ ನಡೆಸುತ್ತಿರುವ ಮಹಿಳೆಯರಿಗೆ ಸಮಾಜಮುಖೀ ದೃಷ್ಟಿಯನ್ನು ನೀಡಲು ಅವರವರ ಆಸಕ್ತಿಗನುಗುಣವಾದ ಸಮಾಜ ಸೇವೆಯ ಅವಕಾಶ ಏರ್ಪಡಿಲು, ಇದೇ ತಿಂಗಳ ನವೆಂಬರ್ 26 ರಂದು ನಾರಿಶಕ್ತಿ ಸಮ್ಮೇಳನವನ್ನು ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಮರ್ಥ ಭಾರತ ವತಿಯಿಂದ ಬೆಂಗಳೂರು ದಕ್ಷಿಣ ವಿಭಾಗ ಮಟ್ಟದ ಮಹಿಳಾ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು.
ಡಾ|| ವಿಜಯಲಕ್ಷ್ಮಿ ದೇಶಮಾನೆ ಅಧ್ಯಕ್ಷತೆ, ಡಾ|| ಗೋಮತಿ ದೇವಿಯವರ ಉಪಾಧ್ಯಕ್ಷತೆಯಲ್ಲಿ ಭಾರತೀಯ ಚಿಂತನೆಯಲ್ಲಿ ಮಹಿಳೆ ವಿಚಾರ ಸಂಕಿರಣ ನಡೆಯಿತು.
ಮಹಿಳಾ ಸಮ್ಮೇಳನದ ಉದ್ದೇಶ ಹಾಗೂ ಸಮರ್ಥ ಭಾರತದ ವತಿಯಿಂದ ದೇಶದ ಇತರ ಭಾಗಗಳಲ್ಲಿ ನಡೆದ ಕಾರ್ಯಕ್ರಮದ ವಿವರ ತಮ್ಮ ಪ್ರಾಸ್ತಾವಿಕ ಭಾಷಣದ ಮೂಲಕ ಶ್ರೀಮತಿ ವಸಂತಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹಿಕರವರು ಪ್ರಸ್ತುತ ಪಡಿಸಿದರು.
ಹನುಮ ಭೀಮರಿಗೆ ಜನುಮವಿತ್ತಿರುವ ಮಾತೆ ಅಬಲೆಯೆಂತು ಎಂದು ಸುಶ್ರಾವ್ಯ ಕಂಠದಿಂದ ಶ್ರೀಮತಿ ಬಿ.ವಿ ಆರತಿಯವರು ತಮ್ಮ ಸ್ವಾಗತ ಭಾಷಣ ಪ್ರಾರಂಭಿಸಿದರು. ನಾರಿಶಕ್ತಿಗೆ ಕಾರಣ ತಂದೆ ಹಾಗೂ ತಾಯಿ ಇಬ್ಬರಿಂದಲೂ 50% + 50% ಬಂದಿರುವ ಅನುವಂಶೀಯತೆ ಕಾರಣವೆಂದು ತಿಳಿಸಿದರು. ಯಾವುದೇ ಪುರುಷ ಜಗದ್‌ಜಟ್ಟಿಯಾದರೂ ಮಗುವನ್ನು ಹಡೆಯಲಾರ ಅದು ನಾರಿಗೆ ಮಾತ್ರ ಸಾಧ್ಯ. ಮಾತೃತ್ವದ ವಿಶೇಷತೆ ಮಹಿಳೆಗೆ ಜನ್ಮಜಾತವಾಗಿ ಬಂದಿರುವ ಭಗವಂತನ ಅನುಗ್ರಹ. ಸ್ತ್ರೀಯಲ್ಲಿರುವ ಸೃಜನಾತ್ಮಕ ಶಕ್ತಿ, ಪ್ರತಿಭೆ ಎಲ್ಲವೂ ಅವಳ ಮನದಾಳದಿಂದಲೇ ಹೊರಹೊಮ್ಮಬೇಕು. ಇದೇ ಭಾರತೀಯ ಚಿಂತನೆ.
ಕಾರ್ಯೇಷುದಾಸಿ ಕರಣೇಶು ಮಂತ್ರಿ ಪೂಜ್ಯೇಷು ಮಾತಾ ರೂಪೇಷು ಲಕ್ಷ್ಮಿ ಕ್ಷಮಯಾಧರಿತ್ರಿ ಶಯನೇಷುರಂಭಾ ಎನ್ನುವಂತೆ ವಿವಿಧ ರೀತಿಯ ಕೆಲಸಗಳನ್ನು ಮಹಿಳೆ ನಿರ್ವಹಿಸಬಲ್ಲಳು. ಮತ್ತೆ ಕೆಲವು ಮಹಿಳೆಯರಿಗೆ ಎಲ್ಲಾ ಕೆಲಸ ನಾವು ಮಾಡಬೇಕಾ? ಎನ್ನುವ ಮನೋಭಾವವಿರುತ್ತದೆ ಈ ರೀತಿಯ ಮನಸ್ಥಿತಿ ಒಳ್ಳೆಯದಲ್ಲ. ನಾವೇ ಮಾಡಬಲ್ಲೆವು ಎಂದು ಹೆಮ್ಮೆಯಿಂದ ಮಾಡಿತೋರಿಸಬೇಕೆಂದು ಎಲ್ಲ ಮಹಿಳೆಯರನ್ನು ಹುರಿದುಂಬಿಸಿದರು. ನಮ್ಮ ಸಾಮರ್ಥ್ಯಕ್ಕನುಗುಣವಾಗಿ ಎಲ್ಲವನ್ನೂ ಪಡೆಯಬೇಕು. ಹೊರತಾಗಿ ಬಿಟ್ಟಿ ಭಾಗ್ಯಗಳ ಹಿಂದೆ ದಾಸರಾಗಬಾರದು ಮಾತೃತ್ವದ ಶಕ್ತಿಯನ್ನು ಸದ್ವಿನಿಯೋಗ ಪಡಿಸಿ ಸಂಭ್ರಮಿಸಬೇಕು. ಹೊರತಾಗಿ ಸ್ತ್ರೀವಾದ ಹಾಗೂ ನಕಾರಾತ್ಮಕವಾದ ಮಾತನ್ನು ಆಲಿಸಬಾರದು. ಹೆಣ್ಣು ಮಕ್ಕಳು ಈ ರೀತಿಯ ಸನ್ನಿವೇಶದಿಂದ ದೂರವಿದ್ದರೆ ಶಕ್ತಿರೂಪಿಯಾಗುತ್ತಾಳೆಂದು ತಿಳಿಸಿ ಸ್ವಾಗತ ಭಾಷಣ ಮುಗಿಸಿದರು.
ಎರಡನೇ ಅವಧಿಯಲ್ಲಿ:- ಸ್ಥಾನೀಯ ಮಹಿಳೆಯರ ಸ್ಥಿತಿ, ಸವಾಲುಗಳು ಮತ್ತು ಪರಿಹಾರ
ಈ ವಿಷಯದ ಬಗ್ಗೆ 3 ತಂಡಗಳಲ್ಲಿ ಚರ್ಚೆ ನಡೆದು ಪರಸ್ಪರ ವಿಚಾರ ಮಂಡನೆ ನಡೆಯಿತು. ಶಾರದಾಶ್ರಮದ ಸನ್ಯಾಸಿನಿ ರಾಮಪ್ರಿಯಾರವರು ನಾರಿಯರಿಗೆ ಅವರ ಸಾಮರ್ಥ್ಯದ ಬಗ್ಗೆ ಕರ್ತವ್ಯದ ಬಗ್ಗೆ ಎಚ್ಚರಿಸಿ ತಿಳುವಳಿಕೆ ನೀಡಿದರು.
ಕಡೆಯದಾಗಿ ಶ್ರೀಮತಿ ಎಸ್. ಆರ್ ಲೀಲಾರವರು ಆಧುನಿಕ ಭಾರತ ವಿಕಾಸದಲ್ಲಿ ಮಹಿಳೆಯರ ಪಾತ್ರ ಎನ್ನುವ ಬಗ್ಗೆ ವಿಷಯ ಮಂಡಿಸುತ್ತಾ ಆಧುನಿಕ ಭಾರತದಲ್ಲಷ್ಟೇ ಅಲ್ಲ ಪ್ರಾಚೀನ ಭಾರತದಲ್ಲಿಯೂ ನಮ್ಮ ಪರಂಪರೆ ಉತ್ಕೃಷ್ಟವಾಗಿತ್ತು. ಸ್ತ್ರೀಯರ ಸ್ಥಾನಮಾನ, ಸಮಾಜಮುಖಿಯಾಗಿ ಅವಳು ಮಾಡಿದ ಕೆಲಸ ಅಪಾರ. ಬೃಹತ್ ಸಂಹಿತೆ ಗ್ರಂಥದಲ್ಲಿಯೂ ಇದನ್ನು ತಿಳಿಸಿದ್ದಾರೆ. ಪ್ರಾಚೀನ ಕಾಲದಲ್ಲಿಯೇ ನಳಂದ, ತಕ್ಷಶಿಲಾ ಮೊದಲಾದ ಬೃಹತ್ ವಿಶ್ವವಿದ್ಯಾಲಯ ಪ್ರಾರಂಭವಾದವು.
ವರಾಹಮಿಹಿರ ಎನ್ನುವ ಖಗೋಳಶಾಸ್ತ್ರಜ್ಞ ಸ್ತ್ರೀಪ್ರಶಂಸಾಧ್ಯಾಯ ಎಂಬ ಪುಸ್ತಕವನ್ನೇ ಬರೆದಿದ್ದಾನೆ. ಪ್ರಾಚೀನಕಾಲದ ಋಷಿಕೆಯರ ಸಮಾಜಮುಖೀ ಕೊಡುಗೆ ಅಪಾರವಾದದ್ದು. ದಾಳಿಕೋರರಿಂದ ನಮ್ಮ ಪ್ರಾಚೀನ ಪರಂಪರೆಗೆ ಏಟುಬಿದ್ದ ಯಾವುದೇ ಕ್ಷೇತ್ರ ಆರಿಸಿಕೊಂಡರೂ ಕೂಡ ಅದ್ಭುತ ಕೆಲಸ ಮಾಡುವ ಸಾಮರ್ಥ್ಯ ಸ್ತ್ರೀಯರಿಗಿದೆ.
ಆಧುನಿಕ ಭಾರತದ ವಿಕಾಸದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸ್ತ್ರೀಯರ ಕ್ರಿಯಾಶೀಲತೆಯನ್ನು ಗುರುತಿಸಬಹುದು.
ಇತ್ತೀಚಿನವರು ಉದಾ:
೧. ಕಮಲ್ ಸೊಹೋನಿ (Bio chemist Scientist)
೨. ಎಂ.ಎಸ್.ಸುಬ್ಬಲಕ್ಷ್ಮಿ (Queen of music)
೩. ಕಲ್ಪನಾ ಚಾವ್ಲ (NASA – ಗಗನ ಯಾತ್ರಿ)
೪. ಸಾಲುಮರದ ತಿಮ್ಮಕ್ಕ (ವೃಕ್ಷಮಾತೆ-200 ಆಲದಮರ ನೆಡುವಿಕೆ)
೫. ಕಿರಣ್‌ಬೇಡಿ (ಮೊದಲ ಐ.ಪಿ.ಎಸ್ ಅಧಿಕಾರಿ)
೬. ಕರ್ಣಂಮಲ್ಲೇಶ್ವರಿ (weight lifter)
೭. ನೀರಜಾ ಬಾನೋಟ್ (ಪ್ಯಾಲಿಸ್ಟೇನ್‌ನಲ್ಲಿ ಬಂಧಿತವಾಗಿದ್ದ 300 ಕ್ಕೂ ಅಧಿಕ ಪ್ರಯಾಣಿಕರಿಗೆ ಪುನರ್ಜೀವನ ನೀಡಿ ಪ್ರಾಣಾರ್ಪಣೆ ಮಾಡಿದ ಧೀರೆ)
೮. ಕಮಲಾದೇವಿ ಚಟ್ಟೋಪಾಧ್ಯಾಯ (ಸಮಾಜ ಸುಧಾರಣೆಯಲ್ಲಿ ಪದ್ಮವಿಭೂಷಣ ಪುರಸ್ಕೃತೆ, ಸ್ವಾತಂತ್ರ ಹೋರಾಟಗಾರ್ತಿ
೯. ಲಕ್ಷ್ಮೀಬಾಯಿ ನೇವಾಳ್ಕರ್ – ಸ್ವಾತಂತ್ರ ಹೋರಾಟಗಾರ್ತಿ
ಇದಲ್ಲದೆ ಮೋದಿಯವರ ಕ್ಯಾಬಿನೇಟ್‌ನಲ್ಲಿ 7 ಜನ ಮಹಿಳೆಯರಿದ್ದಾರೆ. ಮೊದಲ ಮಹಿಳಾ ಕುಲಪತಿ ಹಂಸ ಮೆಹತಾರವರು.
ಇದಲ್ಲದೆ ಆಡಳಿತ ಕ್ಷೇತ್ರದಲ್ಲಿ ಅನೇಕ ಮಹಿಳೆಯರು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. (multi tasking ability) ಎಲ್ಲ ಕ್ಷೇತ್ರದಲ್ಲಿಯೂ ಅದ್ಭುತ ಕೆಲಸ ನಿರ್ವಹಿಸುವ ಸಾಮರ್ಥ್ಯ ಮಹಿಳೆಗೆ ಇದೆ ಎಂದು ವರಾಹ ಮಿಹಿರಾ ಕೂಡ ತಿಳಿಸಿದ್ದಾರೆ. ಸ್ತ್ರೀ represents ಅಗ್ನಿ ಎನ್ನುವರು. ಎಷ್ಟೇ ರೀತಿಯ ಸಮಸ್ಯೆ ಅಡ್ಡಿ ಆತಂಕಗಳು ಬಂದಾಗ್ಯೂ ಅವುಗಳನ್ನು ಪರಿಹರಿಸಿಕೊಂಡು ನೋವನ್ನು ನುಂಗಿ ದೇಶ, ಮನೆ, ಸಮಾಜಕ್ಕೆ ಪ್ರೇರಕ ಶಕ್ತಿಯಾಗಿ ದುಡಿಯುವ ಶಕ್ತಿ (will power) ಮನಃಶಕ್ತಿ ಅಗ್ನಿಯಿಂದ ಕೊಡಲ್ಪಟ್ಟಿದೆ ಎನ್ನುವರು.
ಈ ಶಕ್ತಿಯನ್ನು ಸ್ತ್ರೀಯರಾದ ನಾವು ಉಳಿಸಿ ಬೆಳಸಬೇಕು. ಸಹಕಾರ, ಸಮ್ಮತಿ, ಸಹಬಾಳ್ವೆಯಿಂದ ಸ್ತ್ರೀ ಶಕ್ತಿಯನ್ನು ಹೆಚ್ಚಿಸುವ ದಿಶೆಯಲ್ಲಿ ಪುರುಷರ ಸಹಕಾರ ಅಗಾಧವಾಗಿದೆ ಎನ್ನುವುದನ್ನು ತಮ್ಮ ಸಮಾರೋಪ ಭಾಷಣದಲ್ಲಿ ಸ್ಮರಿಸಿಕೊಂಡರು.
ಸ್ತ್ರೀ ಪುರುಷರಿಗೆ ತಾತ್ವಿಕ ವ್ಯತ್ಯಾಸವಿಲ್ಲ. ಸ್ತ್ರೀ ಪುರುಷರು ಒಂದು ಬಟಾಣಿಯ 2 ಭಾಗವಿದ್ದ ಹಾಗೆ. ವಿವೇಕಾನಂದರು ಹೇಳಿದಂತೆ ಪತ್ನಿಯು ಅರ್ಧಾಂಗಿ (better half).
ಮಾನ್ಯ ಪ್ರಧಾನಿ ನರೇಂದ್ರಮೋದಿಯವರು ಸ್ತ್ರೀಗೆ ಅತಿ ಗೌರವಯುತ ಸ್ಥಾನ ನೀಡಿ ಸ್ತ್ರೀಯರ ಏಳಿಗೆಗೆ ಸಹಕಾರ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಸಮ್ಮೇಳನದ ಅಂಗವಾಗಿ ಭಾರತದ ಮಹಿಳಾ ಸಾಧಕಿಯರ ಪರಿಚಯಾತ್ಮಕ ಪ್ರದರ್ಶಿಸಿ, ರಾಷ್ಟ್ರೀಯ ಸಾಹಿತ್ಯ ಮಳಿಗೆ, ವನವಾಸಿ ಗೋ ಉತ್ಪನ್ನ ಹಾಗೂ ಸ್ವದೇಶೀ ಮಳಿಗೆಗಳು, ಪರ್ಯಾವರಣ ಸಂರಕ್ಷಣೆ ಮೊದಲಾದ ಪ್ರದರ್ಶಿನಿಯನ್ನು ಏರ್ಪಡಿಸಲಾಗಿತ್ತು.
ನಾರೀಶಕ್ತಿ ಸಮ್ಮೇಳನ ಯಶಸ್ವಿಯಾಗಿ ನಡೆದಿದ್ದು ನಮ್ಮೆಲ್ಲರಿಗೂ ತುಂಬ ಹರ್ಷ ತಂದಿದೆ.
೧. ಭಾರತದ ಎಲ್ಲ ರಾಜ್ಯಗಳಲ್ಲಿಯೂ ನಾರೀಶಕ್ತಿ ಸಮ್ಮೇಳನ ನಡೆದಿದೆ. ಇಡೀ ದೇಶದಲ್ಲಿ 480 ಸಮ್ಮೇಳನ ನಡೆದಿದೆ. 11 ಶ್ರೇಣಿಗಳಲ್ಲಿನ ಪ್ರತಿನಿಧಿಗಳು ಎಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ನಮ್ಮ ಕರ್ನಾಟಕದ 28, ಕಡೆ ಹೊಯ್ಸಳ ಪ್ರಾಂತದಲ್ಲಿ 14 ಕಡೆ ನಡೆದಿದೆ.
೨. ಹರ್ಷದ ಗುಂಗಿನಲ್ಲಿಯೇ ನಾವು ಉಳಿದರೆ ಸಮ್ಮೇಳನದ ಉದ್ದೇಶ ಈಡೇರುವುದಿಲ್ಲ. ಭಾಗವಹಿಸಿದ ಪ್ರತಿನಿಧಿಗಳು ಸಮಾಜ ಆಧಾರಿತ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದಕ್ಕಾಗಿ ಕೆಲವು ಗಂಟೆಗಳ ಸಮಯವನ್ನು ಮೀಸಲಿಡಬೇಕು. ತನ್ಮೂಲಕ ರಾಷ್ಟ್ರೀಯ ಕಾರ್ಯದಲ್ಲಿ ತೊಡಗಿಸಿದರೆ, ನಾರೀಶಕ್ತಿಯ ಸಾಮರ್ಥ್ಯ ಉತ್ತುಂಗಕ್ಕೇರಿ ಭಾರತ ವಿಶ್ವಗುರುವಾಗುವ ನಿಟ್ಟಿನಲ್ಲಿ ಕೈ ಜೋಡಿಸಿದ ಹೆಮ್ಮೆ ನಮ್ಮದಾಗುತ್ತದೆ. ಎಲ್ಲ ಭಗಿನಿಯರಿಗೂ ವಂದನೆಗಳು.