ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಕಲಬುರಗಿಯ ನೂತನ ಜಿಲ್ಲಾ ಪದಾಧಿಕಾರಿಗಳ ಪ್ರಥಮ ಸಂಘಟನಾತ್ಮಕ ಸಭೆ ದಿನಾಂಕ ೨೯.೦೩.೨೦೨೪ರಂದು ನಡೆಯಿತು. ತಾಲೂಕು ಘಟಕಗಳ ರಚನೆಯ ಕುರಿತು ಹಾಗೂ ಬರುವ ಶೈಕ್ಷಣಿಕ ವಷದಲ್ಲಿ ನಡೆಸಬಹುದಾದ ಶೈಕ್ಷಣಿಕ ಹಾಗೂ ಹೋರಾಟಾತ್ಮಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಯಿತು. ಸಭೆಯು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಪಾಲ ಭೋಗಾರ ಅವರ ಸ್ವಾಗತದೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಸಂಜು ಕುಮಾರ್ ಪಾಟೀಲ್ ವಹಿಸಿದ್ದರು. ಶಾಂತಿ ಮಂತ್ರದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.