ಅನುದಾನಿತ ಶಿಕ್ಷಣ ಸಂಸ್ಥೆಗಳ ವರ್ಗಾವಣೆ ಅಧಿಸೂಚನೆ ದಿನಾಂಕವನ್ನು ವಿಸ್ತರಿಸುವಂತೆ ಆಗ್ರಹ

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವರ್ಗಾವಣೆಯ ಅಧಿಸೂಚನೆಯನ್ನು ಶಿಕ್ಷಣ ಇಲಾಖೆಯ, ಬೇಸಿಗೆ ರಜೆ ಕಾಲದಲ್ಲಿ ಮೇ ತಿಂಗಳ ಅವಧಿಯೊಳಗೆ ವರ್ಗಾವಣೆ ಪ್ರಕ್ರಿಯೆಯನ್ನು ಮುಗಿಸುವಂತೆ ಸೂಚಿಸಿದ್ದರು.

ಅನೇಕ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಬೇಸಿಗೆ ರಜೆಯಲ್ಲಿ ಮೌಲ್ಯಮಾಪನ ಕಾರ್ಯ ಹಾಗೂ ಲೋಕಸಭೆಯ ಚುನಾವಣಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಲಿಯವರು ಬೇಸಿಗೆ ರಜೆಯಲ್ಲಿ ಲಭ್ಯವಿರದ ಕಾರಣದಿಂದ ಆಡಳಿತ ಮಂಡಲಿಗಳ ನಿರಪೇಕ್ಷಣಾ ಪತ್ರಗಳನ್ನು ಪಡೆಯಲು ಸಾಧ್ಯವಿಲ್ಲದ ಕಾರಣದಿಂದ ವರ್ಗಾವಣೆಯಲ್ಲಿ ಅವಧಿಯನ್ನು ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು, ಇಲಾಖೆಯ ನಿರ್ದೇಶಕರು(ಪ್ರೌಢಶಿಕ್ಷಣ) ನಿರ್ದೇಶಕರು(ಪ್ರಾಥಮಿಕ ಶಿಕ್ಷಣ)ರವರುಗಳನ್ನು ದಿನಾಂಕ: 1-6-2024 ರ ಶನಿವಾರದಂದು ಭೇಟಿ ಮಾಡಿ ಚರ್ಚಿಸಿ ವರ್ಗಾವಣೆಯ ಅವಧಿಯನ್ನು ವಿಸ್ತರಿಸುವಂತೆ ಮನವಿಯನ್ನು ನೀಡಿ ಆಗ್ರ್ರಹಪಡಿಸಲಾಯಿತು.

– ಶ್ರೀ ಗಂಗಾಧರ.ಎಂ.ವಿ, ಅಧ್ಯಕ್ಷರು, ಕ.ರಾ.ಮಾ.ಶಿ.ಸಂ., ಬೆಂಗಳೂರು ಉತ್ತರವಲಯ-೩

Highslide for Wordpress Plugin