ನಿಯೋಗದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಭೇಟಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ನಿಯೋಗ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಶ್ರೀಮತಿ ಸಿಂಧು ರೂಪೇಶ ರವರನ್ನು ಭೇಟಿಯಾಗಿ ಪಿ ಯು ಕಾಲೇಜುಗಳ ಮಾನ್ಯತೆ ನವೀಕರಣ, ಅನುದಾನಿತ ಉಪನ್ಯಾಸಕರ ಕಾರ್ಯಭಾರ ಸರಿಪಡಿಸುವುದು, ಖಾಲಿ ಹುದ್ದೆಗಳ ಭರ್ತಿ ಗೆ ಅನುಮತಿ ನೀಡುವ ಬಗ್ಗೆ, ಅನುದಾನರಹಿತ ಕಾಲೇಜುಗಳ SATS Portal ಚಾಲ್ತಿ ಮಾಡುವ ಬಗ್ಗೆ ಮತ್ತು ದ್ವಿತೀಯ ಪಿಯುಸಿ 1 , 2, 3 ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳ ಮೇಲೆ ಆಗುತ್ತಿರುವ ಒತ್ತಡ ಮತ್ತು ತರಗತಿಗಳು ಸರಿಯಾಗಿ ನಡೆಯದಿದ್ದರೆ ಫಲಿತಾಂಶ ಕುಸಿತವಾಗಿವ ಸಮಸ್ಯೆಗಳ ಬಗ್ಗೆ ಸುದೀರ್ಘ ಸಭೆ ನಡೆಸಿ ಮನವಿ ಸಲ್ಲಿಸಲಾಯಿತು.

ABRSM ಅಖಿಲ ಭಾರತ ಸಹ ಸಂಘಟನಾ ಮಂತ್ರಿ ಲಕ್ಷ್ಮಣ್ ಜೀ, ಕಾರ್ಯಾಧ್ಯಕ್ಷರಾದ ಶ್ರೀ ಅರುಣ್ ಶಹಾಪುರ, ಅಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳ, KRMSS ಉಪಾಧ್ಯಕ್ಷರಾದ ಡಾ. ಶಿವಪೂಜಿ ಕೋಟಿ ನಿಯೋಗದಲ್ಲಿ ಉಪಸ್ಥಿತರಿದ್ದರು.

Highslide for Wordpress Plugin
Loading...