ಕ.ರಾ.ಮಾ.ಶಿ.ಸಂಘ(ರಿ.) ಬೆಂಗಳೂರು, ಕಾರ್ಯಕಾರಣಿ & ಸಾಮಾನ್ಯ ಸಭೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ದಿನಾಂಕ: 28-7-2024 ರ ಭಾನುವಾರ ಬೆಂಗಳೂರಿನ ಕೇಂದ್ರ ಕಾರ್ಯಾಲಯ ಯಾದವಸ್ಮೃತಿಯಲ್ಲಿ ಜರುಗಿತು.

ಮೊದಲನೆ ಅವಧಿ: ಉದ್ಘಾಟನಾ ಅವಧಿ: ಈ ಅವಧಿಯಲ್ಲಿ ವೇದಿಕೆಯ ಮೇಲಿದ್ದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘದ ಅಖಿಲ ಭಾರತದ ಸಹ ಸಂಘಟನಾ ಕಾರ್ಯದರ್ಶಿಗಳಾದ ಮಾನನೀಯ ಶ್ರೀ ಜಿ. ಲಕ್ಷ್ಮಣ ಜಿ ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳ, ರಾಜ್ಯ ಸಹ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅನಿಲ ಬಿರಾದಾರ ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ ಗಂಗಾಧರಾಚಾರಿರವರು ಸರಸ್ವತಿ ಮಾತೆಗೆ ಹೂ ಅರ್ಚನೆ ಮಾಡುವ ಮೂಲಕ ಹಾಗೂ ಸಾಮೂಹಿಕವಾಗಿ ಸರಸ್ವತಿ ವಂದನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವೇದಿಕೆಯ ಮೇಲಿರುವ ಸರ್ವರನ್ನು ರಾಜ್ಯ ಸಹ ಪ್ರಧಾನ ಕಾಯದರ್ಶಿಗಳಾದ ಶ್ರೀ ಅನಿಲ ಬಿರಾದಾರರವರು ಸ್ವಾಗತಿಸಿದರು. ರಾಜ್ಯ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಎಲ್ಲರ ಪರಿಚಯ ಹಾಗೂ ಜಿಲ್ಲೆಗಳ ವರದಿಯನ್ನು ಪಡೆಯಲಾಯಿತು. ರಾಜ್ಯ ಉಪಾಧ್ಯಕ್ಷರಾದ ಶ್ರೀ ಗಂಗಾಧರಾಚಾರಿರವರು ೨೦೨೩-೨೪ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು. ಸರ್ವರ ಸಮ್ಮತಿ ಪಡೆಯಲಾಯಿತು. ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳರವರು ರಾಜ್ಯದಲ್ಲಿ ಹಾಗೂ ದೇಶದಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಮಾತನಾಡಿದರು. ಶ್ರೀ ಅನಿಲ ಬಿರಾದಾರರವರು ಮುಂಬರುವ ರಾಜ್ಯ ಹಾಗೂ ದೇಶದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ತಿಳಿಸಿದರು.

ಮುಂಬರುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು
1. ಪ್ರಾಂತ ಅಭ್ಯಾಸ ವರ್ಗ: ಸೆಪ್ಟೆಂಬರ್ 14 ಮತ್ತು 15 -2024೨೦೨೪,  ಸ್ಥಳ: ಬೆಂಗಳೂರು
2. ಪೂರ್ಣಾವಧಿ ಕಾರ್ಯಕರ್ತರ ಅಖಿಲ ಭಾರತ ಮಟ್ಟದ ಅಭ್ಯಾಸ ವರ್ಗ ದಿನಾಂಕ: ಆಗಸ್ಟ್ 7, 8 & 9 2024: ಜೈಪುರ, ರಾಜಸ್ಥಾನ
3. ಅಖಿಲ ಭಾರತ ಮಾಧ್ಯಮ ಪ್ರಕೋಷ್ಠ ಬೈಠಕ್ ದಿನಾಂಕ : 17-18  ಆಗಸ್ಟ್ : ಸ್ಥಳ : ಭೂಪಾಲ್
4. ಅಖಿಲ ಭಾರತ ಕಾರ್ಯಕಾರಣಿ ಬೈಠಕ್ ಹಾಗೂ ಸಾಮಾನ್ಯ ಸಭೆ, ದಿನಾಂಕ: 4, 5, 6 ಅಕ್ಟೋಬರ್ 2024- ಸ್ಥಳ ಭೂಪಾಲ್
5. ಅಂತರಾಷ್ಟ್ರೀಯ ಅಧಿವೇಷನ ದಿನಾಂಕ 15 ಫೆಬ್ರವರಿ 2025 ಸ್ಥಳ: ನವದೆಹಲಿ

ಅವಧಿ-2: ಶ್ರೀ ಲಕ್ಷ್ಮಣ ಜೀ, ಅಖಿಲ ಭಾರತ ಸಹ ಸಂಘಟನಾ ಮಂತ್ರಿರವರು ಸಂಘಟನೆಯ ವಿಷಯದ ಕುರಿತು ತಮ್ಮ 33 ವರ್ಷದ ಅನುಭವದ ಮೂಲಕ ಪ್ರೇರಣಾದಾಯಕವಾದ ಮಾಡನಾಡಿದರು. ಸಂಘಕ್ಕೆ ಸದಸ್ಯತ್ವವೇ ಜೀವಾಳ, ಅದರಂತೆ ಎಲ್ಲ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ಜೊತೆ ಚರ್ಚಿಸಿ ಎಲ್ಲರ ಒಮ್ಮತದ ದಿನಾಂಕವನ್ನು ನಿರ್ಧರಿಸಿದರು. ಆಗಸ್ಟ್ 1 ರಿಂದ 31 ರ ವರೆಗೆ ಸದಸ್ಯತಾ ಅಭಿಯಾನವನ್ನು ನಡೆಸಿ ಹೆಚ್ಚಿನ ಸದಸ್ಯತ್ವವನ್ನು ಮಾಡಲು ತಿಳಿಸಿದರು.

ಅವಧಿ-3 : ಈ ಅವಧಿಯಲ್ಲಿ ವೇದಿಕೆಯ ಮೇಲಿದ್ದ ಶ್ರೀ ವೃಷಬೇಂದ್ರಸ್ವಾಮಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳರವರು ಶಿಕ್ಷಕ ಹಾಗೂ ಉಪನ್ಯಾಸಕರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳ ಪಟ್ಟಿ ಮಾಡಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.

ಅವಧಿ-4 ಸಮಾರೋಪ: ಸಮಾರೋಪ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆದರಣೀಯ ಶ್ರೀ ತಿಪ್ಪೇಸ್ವಾಮಿ ಜಿ ಕ್ಷೇತ್ರೀಯ ಕಾರ್ಯವಾಹ ದಕ್ಷಿಣ ಮಧ್ಯ ಕ್ಷೇತ್ರ ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ಆಗಮಿಸಿ ಸಂಘಟನೆಯ ಬಲವರ್ಧನೆ ಹಾಗೂ ಪಂಚಪರಿವರ್ತನೆ ಕುರಿತು ಮಾರ್ಗದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ನೂತನ ಅಧ್ಯಕ್ಷ ಸ್ಥಾನವನ್ನು ಶ್ರೀ ಪ್ರಕಾಶ ವಳಪುರ ಹಾಗೂ ಧಾರವಾಡ ಜಿಲ್ಲಾಧ್ಯಕ್ಷರಾಗಿ ಶ್ರೀ ವೇಣುಗೋಪಾಲ ಹೆಚ್.ಆರ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಷಣ್ಮುಖ ಅಂಗಡಿರವರ ಹೆಸರುಗಳನ್ನು ರಾಜಾಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳರವರು ಘೋಷಿಸಿದರು. ಸಾಮೂಹಿಕ ಶಾಂತಿಮಂತ್ರದೊಂದಿಗೆ ರಾಜ್ಯ ಕಾರ್ಯಕಾರಣಿ ಸಭೆ ಮುಗಿಸಲಾಯಿತು.

Highslide for Wordpress Plugin