ಧಾರವಾಡ: ಕೆ.ಆರ್.ಎಂ.ಎಸ್.ಎಸ್ ಸಂಸ್ಥಾಪನ ದಿನ ಹಾಗೂ ಶಿಕ್ಷಕರ ದಿನಾಚರಣೆ ನಿಮಿತ್ತ ಪ್ರೇರಣಾ ದಿವಸ ಮತ್ತು ಒಂದು ದಿನದ ವಿಚಾರ ಸಂಕಿರಣ ಉದ್ಘಾಟನೆ 4-9-2024 ರಂದು ಕರ್ನಾಟಕ ವಿಶ್ವವಿದ್ಯಾಲಯದ ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ನೆರವೇರಿತು.
“ಶಿಕ್ಷಕರ ಅಭಿವೃದ್ಧಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಉಪಕ್ರಮಗಳು” “ಟೀಚರ್ ಡೆವಲಪ್‌ಮೆಂಟ್ : ಯುಜಿಸಿ ಇನಿಷೀಯಟಿವ್ಸ್” ವಿಷಯದ ಮೇಲೆ ಡಾ. ತ್ಯಾಗರಾಜ, ಕುಲಪತಿಗಳು, ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರು ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಡಾ. ಪ್ರಮೋದ ಗಾಯಿ ಸರ್ ನಿವೃತ್ತ ಕುಲಪತಿಗಳು ಕೆ ಯು ಡಿ . ಡಾ. ಪ್ರಕಾಶ ಹೊಸಮನಿ, ಸಹ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಧಾರವಾಡ, ಡಾ. ಸುಭಾಷ್‌ಚಂದ್ರ ನಾಟೀಕರ್, ಅಧ್ಯಕ್ಷರು ಪ.ಜಾ.-ಪ.ಪಂ. ಸ್ನಾತಕೋತ್ತರ ಶಿಕ್ಷಕ ಸಂಘ ಕ.ವಿ.ವಿ. ಧಾರವಾಡ, ಡಾ. ಮೋತಿಲಾಲ್ ರಾಠೋಡ್, ಅಧ್ಯಕ್ಷರು ಕೆ.ಜಿ.ಸಿ.ಟಿ.ಎ. ದಾರವಾಡ ವಲಯ ಇವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಅತ್ತ್ಯುತ್ತಮ ಸಾಧನೆ ಮಾಡಿರುವ ಅಧ್ಯಾಪಕರುಗಳಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ, ಉತ್ತಮ ಶಿಕ್ಷಕ, ಉತ್ತಮ ಸಂಶೋಧಕ, ಉತ್ತಮ ಆಡಳಿತಗಾರ, ಉತ್ತಮ ಗ್ರಂಥಪಾಲಕ ಕಾಲೇಜು ಅಧ್ಯಾಪಕರಿಗಾಗಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಡಾ ರಘು ಆಕಮಂಚಿ ಸರ್ ದಕ್ಷಿಣ ಮಧ್ಯ ಕ್ಷೇತ್ರೀಯ ಪ್ರಮುಖ ಎ ಬಿ ಆರ್ ಎಸ್ ಎಮ್, ಡಾ ಗುರುನಾಥ ಬಡಿಗೇರ ಅಧ್ಯಕ್ಷರು ಕೆ ಆರ್ ಎಂ ಎಸ್ ಎಸ್ , ಡಾ ಸಿ ವಿ ಮರಿದೇವರ್ಮಠ್ ಸರ್, ಡಾ. ಜಿ. ಸಿ. ಗುಮ್ಮಗೋಳಮಠ, ಅಧ್ಯಕ್ಷರು ಕವಿವಿ ವಿಭಾಗ, ಡಾ ಜಯಾನಂದ ಹಟ್ಟಿ ಕಾರ್ಯದರ್ಶಿ ಕೆ ಯು ಡಿ ವಿಭಾಗ, ಡಾ. ಶೈಲಜಾ ಹುದ್ದಾರ, ಡಾ ಸಂಗೀತಾ ಕಟ್ಟಿಮನಿ, ಸಂದೀಪ ಬೂದಿಹಾಳ ಅಧ್ಯಕ್ಷರು ಮಾಧ್ಯಮಿಕ ಶಿಕ್ಷಕ ಸಂಘ ವೇದಿಕೆ ಮೇಲೆ ಉಪಸ್ಥಿತರಿದ್ದರು.