ಎಸ್‌ಎಸ್‌ಎಲ್‌ಸಿ ವಿಜ್ಞಾನ ಪ್ರಶ್ನೆ ಪತ್ರಿಕೆ ವಿನ್ಯಾಸ ಮತ್ತು ರಚನೆಯಲ್ಲಿ ಬದಲಾವಣೆಗೆ ಒತ್ತಾಯಿಸಿ ಸಚಿವರಿಗೆ ಮನವಿ

ಅಖಿಲ ಕರ್ನಾಟಕ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆ ವತಿಯಿಂದ ಧಾರವಾಡದಲ್ಲಿ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪನವರನ್ನು ಭೇಟಿಯಾಗಿ ಎಸ್‌ಎಸ್‌ಎಲ್‌ಸಿ ವಿಜ್ಞಾನ ಪ್ರಶ್ನೆ ಪತ್ರಿಕೆ ವಿನ್ಯಾಸ ಮತ್ತು ರಚನೆಯಲ್ಲಿ ವಿದ್ಯಾರ್ಥಿ ಸ್ನೇಹಿಯಾದ ಪ್ರಶ್ನೆ ಪತ್ರಿಕೆಯಲ್ಲಿ ಸೂಕ್ತ ಬದಲಾವಣೆಗೆ ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ವೇದಿಕೆ ರಾಜ್ಯ ಅಧ್ಯಕ್ಷರಾದ ಶ್ರೀಧರ ಪಾಟೀಲ ಕುಲಕರ್ಣಿ, ಶಿಕ್ಷಕ ಸಂಘದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ಬಸವರಾಜ ಗುರಿಕಾರ ಸರ್, ಮತ್ತು ವೇದಿಕೆ ಪದಾಧಿಕಾರಿಗಳಾದ ವಿ ಎಸ್ ಹುದ್ದಾರ, ಸಂಜೀವಕುಮಾರ ಬುಶೆಟ್ಟಿ, ಡಿ. ಬಿ. ದೊಡ್ಡಮನಿ, ಪ್ರಮೋದ ವಾದಿರಾಜ, ಆರ್ ಹೆಚ್ ಕುಂದರಗಿ, ಶ್ರೀಮತಿ ಪ್ರತಿಭಾ ಹೂಗಾರ, ಶ್ರೀಮತಿ ವಿ. ಡಿ. ಹೂಗಾರ, ಎಸ್. ವಿ. ಸಂಟಿ, ಶ್ರೀಮತಿ ದೀಪಾ ನಾಯಕ್, ಸಿ. ಎಂ. ಲಾಲಣ್ಣವರ್, ಎಲ್ ಎಂ ಪೀರ್ಜಾದೆ, ಶ್ರೀಮತಿ ವಿ. ಡಿ. ಸಿಂಚನಾ ಮೇಡಂ ನಿಯೋಗದಲ್ಲಿದ್ದರು.

Highslide for Wordpress Plugin