ವಿದ್ಯೆಯುಳ್ಳವನಿಗೆ ಭಯವಿಲ್ಲ ಎಂಬ ಯುಕ್ತಿಯಂತೆ ಕೆ. ಆರ್. ಎಂ. ಎಸ್. ಎಸ್. ಮುನ್ನುಗ್ಗಬೇಕು

ಶಿಕ್ಷಕರಿಂದ ಸಮಾಜದ ಡೊಂಕುಗಳನ್ನು ತಿದ್ದುವ ಕಾರ್ಯವಾಗಲಿ: ಡಾ. ಜ್ಯೋಶೆಫ್ ವಿ ಜಿ

ಬೆಂಗಳೂರು: ಗುರು ಆದವನಿಗೆ ನಾನು ಗುರು ಎಂಬ ಹೆಮ್ಮೆ ಅತ್ಯಧಿಕವಾಗಬೇಕು, ಕಲಿಸುವ ವಿಷಯದ ಮೇಲೆ ಹೆಚ್ಚು ಪ್ರೀತಿ ಇರಬೇಕು, ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುವ ಗೌರವಿಸುವ ಗುಣವಿರಬೇಕು ಎಂದು ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಜ್ಯೋಶೆಫ್ ವಿ ಜಿ ಹೇಳಿದರು.

ನಗರದ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಾಂತ ಅಭ್ಯಾಸ ವರ್ಗದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಮುಂದುವರೆದು ಅವರು ಮಾತನಾಡುತ್ತಾ, ಕೆ.ಆರ್.ಎಂ.ಎಸ್.ಎಸ್ ಮತ್ತು ಎ.ಬಿ.ಆರ್.ಎಸ್.ಎಂ.ನ ಗುರಿ ಯಾವತ್ತೂ ನಿಲ್ಲಬಾರದು, ವಿದ್ಯೆಯುಳ್ಳವನಿಗೆ ಭಯವಿಲ್ಲ ಎಂಬ ಯುಕ್ತಿಯೊಂದಿಗೆ ಈ ಸಂಘಟನೆ ದುಡಿಯಬೇಕು ಎಂದು ಹೇಳಿದರು.

ರಾಜ್ಯ ರಾಷ್ಟ್ರಗಳಲ್ಲಿ ಆಗುತ್ತಿರುವ ಅನ್ಯಾಯ, ಭ್ರಷ್ಟಾಚಾರಗಳ ವಿರುದ್ಧ ಹೊರಡುವ ವ್ಯಕ್ತಿತ್ವಗಳನ್ನು ಬೆಳೆಸುವ ಜವಾಬ್ದಾರಿಯನ್ನು ಈ ಸಂಘಟನೆಯಲ್ಲಿರುವ ಶಿಕ್ಷಕರು ಮಾಡಬೇಕು ಎಂದು ಹೇಳಿದರು.

ನಾವು ಉತ್ತಮ ಶಿಕ್ಷಕರು, ಪ್ರಜೆಗಳು ಆಗಬೇಕೆಂದರೆ ನಾವು ಶಿಕ್ಷಕರು ಈ ಸಮಾಜದ ಡೊಂಕುಗಳನ್ನು ತಿದ್ದುವ ಕಾರ್ಯ ನಮ್ಮಿಂದ ಆಗಬೇಕಾಗಿದೆ ಎಂದು ಹೇಳಿದರು.

ಎ.ಬಿ.ಆರ್.ಎಸ್.ಎಂ ಸಂಘದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ್ ಜೀ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ ಮತ್ತು ಶಿಕ್ಷಕನ ಹಿತಕ್ಕಾಗಿ ಸಮಾಜ ಎಂಬ ಧ್ಯೇಯದೊಂದಿಗೆ ಎ.ಬಿ.ಆರ್.ಎಸ್.ಎಂ. ಮತ್ತು ಕೆ.ಆರ್.ಎಂ.ಎಸ್.ಎಸ್ ಕಾರ್ಯ ಮಾಡುತ್ತಿದೆ. ಎಂದು ಹೇಳಿದರು.

ಎ.ಬಿ.ಆರ್.ಎಸ್.ಎಂ. ಮತ್ತು ಕೆ.ಆರ್.ಎಂ.ಎಸ್.ಎಸ್ ನಿಂದ ಸಾವಿರಾರು ಶಿಕ್ಷಕರಿಗೆ ಸಹಾಯವಾಗಿದೆ, ವೇತನ ಭಡ್ತಿ, ಉದ್ಯೋಗ ಭಡ್ತಿ, ಹೀಗೆ ಅನೇಕ ಸವಲತ್ತು ಆರ್ಥಿಕ ಸವಲತ್ತುಗಳನ್ನು ನೀಡುತ್ತಾ ಕೆಲಸ ಮಾಡುತ್ತಿವೆ. ಬೇರೆ ಶಿಕ್ಷಕ ಸಂಗದ ರೀತಿಯಲ್ಲಿ ನಮ್ಮ ಸಂಘಟನೆ ಇಲ್ಲ. ಒಳ್ಳೆಯ ಶಿಕ್ಷಕರ ಹಿತಕ್ಕಾಗಿ ದುಡಿಯುತ್ತಿದೆ ಎಂದು ಹೇಳಿದರು.

ಈ ರಾಷ್ಟ್ರವನ್ನು ಬಲಿಷ್ಟಗೊಳಿಸುವ ದೃಷ್ಟಿಕೋನವನ್ನು ಮತ್ತು ವಿಕಸಿತ ಭಾರತಕ್ಕಾಗಿ ಎ.ಬಿ.ಆರ್.ಎಸ್.ಎಂ. ಮತ್ತು ಕೆ.ಆರ್ ಎಸ್ ಎಂ ಗಳು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಭಾರತದ ಹಳ್ಳಿಗಳ ಬಗ್ಗೆ ಹುಯನ್ ತ್ಸಾಂಗ ನಂತಹ ಬೇರೆ ಬೇರೆ ವಿದೇಶಿ ಚಿಂತಕರು ತಮ್ಮ ಪುಸ್ತಕಗಳಲ್ಲಿ ಭಾರತದ ಪರಂಪರೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ಇಂದಿನ ದಿನಮಾನಗಳಲ್ಲಿ ಭಾರತದ ಎಲ್ಲ ಪರಂಪರೆ, ಸಂಸ್ಕೃತಿ ಯು ವಿದೇಶಿ ಹಾಗೂ ಬೇರೆ ಬೇರೆ ಧರ್ಮೀಯರ ಆಡಳಿತದಿಂದ ಹಾಳು ಮಾಡುವ ಪ್ರಯತ್ನ ಆಯಿತು ಎಂದು ವಿಷಾಧ ವ್ಯಕ್ತಪಡಿಸಿದರು.

ಎ.ಬಿ.ಆರ್.ಎಸ್.ಎಂ. ನಿಂದ ಪ್ರತಿವರ್ಷ ವ್ಯಾಸರ ಜಯಂತಿಯಂದು ಗುರುಪೂಜ ಉತ್ಸವ ಆಚರಿಸುತ್ತೇವೆ. ಮತ್ತು ಭಾರತದ ಪ್ರತಿಯೊಂದು ನಾಗರಿಕರು ಶಿಕ್ಷಣ ಇಲ್ಲದೆ ಇದ್ದರೂ ಅವರು ರಾಮಾಯಣ ಮಹಾಭಾರತ ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ಗಂಟೆಗಟ್ಟಲೆ ಉಪನ್ಯಾಸ ನಿಡುತ್ತಾರೆ ಎಂದು ಹೇಳಿದರು.

ಇಂದು ಭಾರತ ‘ವಸುದೈವ ಕುಟುಂಬಕಂ’ ಎಂಬ ತತ್ವದ ಮೇಲೆ ನಂಬಿಕೆ ಇಟ್ಟಿದೆ, ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಜ್ಞಾನವನ್ನು ಇಂದು ಭಾರತ ಹೊಂದಿದೆ ಎಂದು ಹೇಳಿದರು.

ನಮ್ಮ ದೇಶದ ಅನೇಕ ದೇವಾಲಯಗಳಲ್ಲಿ ನಾವು ನೋಡಿದರೆ ತಿಳಿಯುತ್ತದೆ, ನಮ್ಮ ದೇಶದ ವಾಸ್ತು-ಶಿಲ್ಪಗಳು, ಜ್ಞಾನ, ತಂತ್ರಜ್ಞಾನದ ಬಗ್ಗೆ ಅನೇಕ ಮಾಹಿತಿ ಗಳನ್ನ ಅಂದಿನ ದಿನಮಾನದಲ್ಲಿ ಉಲ್ಲೇಖ ಮಾಡಿರುವುದು ಕಂಡು ಬರುತ್ತದೆ ಎಂದು ಹೇಳಿದರು.

ನಮ್ಮ ದೇಶದ ಸಂಸ್ಕೃತಿ, ನೆಲ ಜಲವನ್ನು ಉಳಿಸುವುದಕ್ಕಾಗಿ, ಅನೇಕ ದೇಶಭಕ್ತರು ತಮ್ಮ ಪ್ರಾಣವನ್ನು ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ಇವತ್ತಿನ ದಿನಮಾನದಲ್ಲಿ ವಿದ್ಯಾರ್ಥಿಗಳು ತುಂಬಾ ಬುದ್ಧಿವಂತರು ಮತ್ತು ಅವರು ಬಹಳ ಮುಂದುವರೆಯುತ್ತಿದ್ದು, ಅಂತವರನ್ನು ಗುರುತಿಸುವ ಕಾರ್ಯ ಎ ಬಿ ಆರ್ ಎಸ್ ಎಂ ಮತ್ತು ಕೆ ಆರ್ ಎಂ ಎಸ್ ಎಸ್ ನಿಂದ ಆಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಯಾದ ನಾರಾಯಣ ಭಟ್ಟರು ಮತ್ತು ಪ್ರಾಂತ ಸಂಘಟನಾ ಕಾರ್ಯದರ್ಶಿ ವೃಷಭೇಂದ್ರ ಸ್ವಾಮಿ ಹಾಗೂ ಮಾಜಿ ಎಂ.ಎಲ್.ಸಿ ಬಾಲಕೃಷ್ಣ ಭಟ್ಟರು, ರಾಜ್ಯ ಖಜಾಂಚಿ ಸುರೇಂದ್ರ, ರಾಜ್ಯ ಉಪಾಧ್ಯಕ್ಷರಾದ ಆರ್ ಕೊಟ್ರಪ್ಪ ಸೇರಿದಂತೆ ನೂರಾರು ಶಿಕ್ಷಕರು ಭಾಗವಹಿಸಿದ್ದರು.

ಕೆಆರ್.ಎಂ.ಎಸ್.ಎಸ್ ಎನ್ ರಾಜ್ಯಾಧ್ಯಕ್ಷ ಪ್ರೊ. ಸಂದೀಪ್ ಬೂದಿಹಾಳ ಪ್ರಾಸ್ತಾವಿಕ ನುಡಿ ನುಡಿದರು, ರಾಜ್ಯ ಸಹ ಪ್ರದಾನ ಕಾರ್ಯದರ್ಶಿ ಗಳಾದ ಅನೀಲ್ ಬಿರಾದರ್ ಸ್ವಾಗತಿಸಿದರು. ಪ್ರಾಂತ ಉಪಾಧ್ಯಕ್ಷರಾದ ಗಂಗಾಧರ ಆಚಾರ್ಯ ನಿರೂಪಿಸಿದರು. ಶ್ರೀಮತಿ ಮಾಯಾ ಪ್ರಭು ಸರಸ್ವತಿ ವಂದನೆ ಗೀತೆ ಹೇಳಿದರು, ಮಹಿಳಾ ಪ್ರಮುಖರಾದ ಮನೋರಮಾ ವಂದಿಸಿದರು.

Highslide for Wordpress Plugin