ಬೆಂಗಳೂರು: ಸಮಾಜ ಪರಿವರ್ತನೆ ಆಗಬೇಕಾದರೆ ಶಿಕ್ಷಕನ ಮಾನಸಿಕತೆ ಪರಿವರ್ತನೆಯಾಗಬೇಕಾಗಿದೆ, ಶಿಕ್ಷಕ ಪರಿವರ್ತನೆಯಾಗಬೇಕೆಂದರೆ ಶಿಕ್ಷಕ ಸಂಘಟನಾತ್ಮಕವಾಗಿ ಸೇರಬೇಕಾಗಿದೆ ಎಂದು ಎ.ಬಿ.ಆರ್.ಎಸ್.ಎಂ ಎನ್ ರಾಷ್ಟ್ರೀಯ ಸಂಘಟನ ಮಂತ್ರಿ ಶ್ರೀ ಮಹೇಂದ್ರ ಕಪೂರ್ ಹೇಳಿದರು.
ನಗರದ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಕೇಂದ್ರದಲ್ಲಿ ರವಿವಾರ ನಡೆದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಾಂತ ಅಭ್ಯಾಸ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ, ಶಿಕ್ಷಕನ ಹಿತಕ್ಕಾಗಿ ಸಮಾಜ ಎಂಬುದು ಬರೀ ಘೋಷಣೆ ಅಲ್ಲ ಅದು ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.
ನಮ್ಮದು ರಾಷ್ಟ್ರದ ಸಂಸ್ಕೃತಿ ಮತ್ತು ವಿಚಾರಗಳನ್ನುಪಾಲನೆ ಪೋಷಣೆ ಮಡುವ ಕಾರ್ಯ ನಮ್ಮಿಂದಾಗಬೇಕು ಮತ್ತು ಹೊಟ್ಟೆ ತುಂಬಿಸಿಕೊಳ್ಳಲು ಕೆಲಸ ಮಾಡುವವನು ಶಿಕ್ಷಕನ ಅಲ್ಲ, ಜವಾಬ್ದಾರಿಯಿಂದ ಸಮಾಜದಲ್ಲಿನ ಪ್ರತಿಯೊಬ್ಬರನ್ನೂ ಯೋಧನಂತೆ ತಯಾರು ಮಾಡುವವನು ನಿಜವಾದ ಶಿಕ್ಷಕ ಎಂದು ಹೇಳಿದರು.
ಶ್ರದ್ಧೆ ಯಾವಾಗ ಶಿಕ್ಷಕನಿಗೆ ಕಡಿಮೆ ಆಗುತ್ತದೆ ಅಂದೆ ಶಿಕ್ಷಣದ ಪರಿಸ್ಥಿತಿ ಅಧೋಗತಿಗೆ ಹೋಗುತ್ತದೆ. ನಾವು ನಮ್ಮ ಮನೆಯ ಅಭಿವೃದ್ಧಿಗಾಗಿ ದುಡಿಯಬಾರದು ರಾಷ್ಟ್ರದ, ಸಮಾಜದ ಏಳಿಗೆಗಾಗಿ ಸಂಘಟನೆಯನ್ನು ಮಾಡಬೇಕು ಎಂದು ಹೇಳಿದರು.
ಹಿಂದುಳಿದ ಬಡ ವಿದ್ಯಾರ್ಥಿಗಳ ಬಗ್ಗೆ ಚಿಂತನೆ ಮಾಡಿ ಪರಿವರ್ತನೆ ಮಡುವ ಗುಣವನ್ನು ಶಿಕ್ಷಕ ಹೊಂದಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ದಕ್ಷಿಣ ಪ್ರಾಂತ ಕಾರ್ಯವಾಹ್ ತಿಪ್ಪೇಸ್ವಾಮಿ ಅವರು ಮಾತನಾಡುತ್ತಾ ಶಿಕ್ಷಕ ಸಂಘಟನೆಗಳು ಶಾಲೆಗಳಲ್ಲಿ ಮಕ್ಕಳಿಗೆ ನೀರನ್ನು ಮಿತವಾಗಿ ಬಳಸುವ ಮತ್ತು ಪ್ಲಾಸ್ಟಿಕ್ ಬಳಕೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ಸ್ವತಂತ್ರ ಬಂದು 78 ವರ್ಷಗಳಾದರೂ ಸಹ ಸ್ಪೃಷ್ಯ ಅಷ್ಪೃಶ್ಯ ಎಂಬ ಭಾವ ಇನ್ನೂ ಹಾಗೆ ಇದೆ, ಹಾಗಾಗಿ ಇಂದಿನ ದಿನಮಾನದಲ್ಲಿ ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ಎಲ್ಲಾರೂ ಒಂದೇ ಎಂಬ ಭಾವ ಮೂಡಿಸುವ ಬಗೆಗೆ ಚಿಂತನೆಗಳು ಆಗಬೇಕಿದೆ ಎಂದರು.
ಮನೆಗಳಲ್ಲಿ ಸಂಸ್ಕೃತಿಗಳನ್ನು ಹಾಳುಮಾಡುವ ಚಟುವಟಿಕೆಗಳನ್ನು ಮಾಡದೆ ಮಕ್ಕಳಲ್ಲಿ ಇಂತ ಸಂಗತಿಗಳು ಸಮಾಜವನ್ನು ಹಾಳು ಮಾಡುತ್ತಿರುವ ಘಟನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಯಾದ ನಾರಾಯಣ ಭಟ್ಟರು ಮತ್ತು ಪ್ರಾಂತ ಸಂಘಟನಾ ಕಾರ್ಯದರ್ಶಿ ವೃಷಭೇಂದ್ರ ಸ್ವಾಮಿ ಹಾಗೂ ಮಾಜಿ ಎಂ.ಎಲ್.ಸಿ ಬಾಲಕೃಷ್ಣ ಭಟ್ಟರು ಸೇರಿದಂತೆ ನೂರಾರು ಶಿಕ್ಷಕರು ಭಾಗವಹಿಸಿದ್ದರು.
ನಾಗರಿಕ ಶಿಷ್ಟಾಚಾರವನ್ನು ಎಲ್ಲರಿಗೂ ಹೇಳಿಕೊಡಬೇಕು ಮತ್ತು ಸಮಾಜವನ್ನು ಮತ್ತು ವ್ಯಕ್ತಿಗಳನ್ನು ಅಧ್ಯಾಯ ಮಾಡುವದು ಜಾಗೃತ ಪ್ರಜೆಯಾದ ಶಿಕ್ಷಕನಲ್ಲಿ ಬರಬೇಕು ಎಂದು ಹೇಳಿದರು.
ಕೆಆರ್.ಎಂ.ಎಸ್.ಎಸ್ ಎನ್ ರಾಜ್ಯಾಧ್ಯಕ್ಷ ಪ್ರೊ. ಸಂದೀಪ್ ಬೂದಿಹಾಳ, ಎ.ಬಿ.ಆರ್.ಎಸ್.ಎಂ ನ ಕ್ಷೇತ್ರ ಪ್ರಮುಖ್ ವಿಷ್ಣುವರ್ಧನ್ ರೆಡ್ಡಿ, ರಾಷ್ಟ್ರೀಯ ಸಹ ಸಂಘಟನಾ ಮಂತ್ರಿ ಜಿ ಲಕ್ಷ್ಮಣ್, ಅಖಿಲ್ ಭಾರತೀಯ ಮಹಾವಿದ್ಯಾಲಯ ಪ್ರಮುಖ್ ಡಾ. ರಘು ಅಕಾಮಂಚಿ ಮತ್ತು ಸಂಘದ ಪದಾಧಿಕಾರಿಗಳು ನೂರಾರು ಶಿಕ್ಷಕರು ಉಪಸ್ಥಿತರಿದ್ದರು. ಪ್ರಾಂತ ಉಪಾಧ್ಯಕ್ಷರಾದ ಗಂಗಾಧರ ಆಚಾರ್ಯ ನಿರೂಪಿಸಿದರು. ಚಂದ್ರಶೇಖರ್ ಪಾಟೀಲ್ ವಂದಿಸಿದರು.