ಸರ್ಕಾರದಿಂದ ಪ್ರತಿ ತಿಂಗಳು ನೌಕರರ ವೇತನ ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೇತನ ಬಜೆಟ್ ಕೊರತೆಯಿಂದ, ಅಥವಾ ಬಟವಾಡೆ ಅಧಿಕಾರಿಗಳ ವರ್ಗಾವಣೆಯಿಂದ ಅಥವಾ ಇತರೆ ಕಾರಣಗಳಿಂದ ವಿಳಂಬವಾಗುತ್ತಿದೆ. ಇದರಿಂದಾಗಿ ಸರಕಾರದ ಸಂಸ್ಥೆಯಾದ ಕರ್ನಾಟಕ ಸರ್ಕಾರ ವಿಮಾ ಇಲಾಖೆ (KGID) ಮಾಸಿಕ ಕಂತು ಹಾಗೂ ಸಾಲದ ವಿಮಾ ಕಂತುಗಳ ವಿಳಂಬಕ್ಕೆ ಬಡ್ಡಿಯನ್ನು ವಿಧಿಸುತ್ತಿದೆ. ಅಲ್ಲದೆ ಪ್ರತಿ ತಿಂಗಳು ಈ ಕಂತುಗಳನ್ನು ನಗದು ರೂಪದಲ್ಲಿ ಬರಿಸಲು ಕೂಡ ಅವಕಾಶ ಇರುವುದಿಲ್ಲ. ಇದರಿಂದ ರಾಜ್ಯ ಸರ್ಕಾರಿ ನೌಕರರಿಗೆ ಅನ್ಯಾಯವಾಗುತ್ತಿದೆ.

ಈ ಕುರಿತು ಅಧಿವೇಶನದಲ್ಲಿ ಚರ್ಚಿಸಿ ಇದರಿಂದ ವಿನಾಯಿತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸುವಂತೆ ರಾಜ್ಯ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು ಜಂಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲ್ಬುರ್ಗಿ ಜಿಲ್ಲಾ ಘಟಕದ ನಿರ್ದೇಶಕ ಮಹೇಶ ಬಸರಕೋಡ ಅಳಂದ ತಾಲೂಕ ಘಟಕದ ನಿರ್ದೇಶಕರಾದ ಚಂದ್ರಶೇಖರ ಪಾಟೀಲ ಯಳಸಂಗಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷ ಸಂಜೀವ ಕುಮಾರ ಪಾಟೀಲ ಶಿಕ್ಷಕರುಗಳಾದ ಶಂಕರಲಿಂಗ ಕಲಶೆಟ್ಟಿ ಪ್ರಶಾಂತ ಪಾಟೀಲ ಮಹೇಶ ಪತ್ತಾರ ಇತರರು ಹಾಜರಿದ್ದರು.