ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ (ರಿ.) “ಪ್ರಾಣ ಬಿಟ್ಟೇವು ಪಿಂಚಣಿ ಬಿಡೆವು” ಎಂದು ವಿವಿಧ ಬೇಡಿಕೆಗಳ ಬೃಹತ್ ಧರಣಿ ಸತ್ಯಾಗ್ರಹವನ್ನು ಬೆಳಗಾವಿಯ ಸುವರ್ಣ ಸೌಧದ ಮುಭಾಂಗದಲ್ಲಿ ಸತ್ಯಾಗ್ರಹ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಸಂಪೂರ್ಣ ಬೆಂಬಲ ಘೋಷಣೆ ಮಾಡಲಾಯಿತು.

ಈ ವೇಳೆಯಲ್ಲಿ ಶಿಕ್ಷಣ ಸಚಿವರಾದ ಶ್ರೀ. ಮಧುಬಂಗಾರಪ್ಪ ಅವರು, ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಅರುಣ ಶಹಾಪುರ ಸರ್, ವಿಧಾನ ಪರಿಷತ್ ಸದಸ್ಯರಾದ ಶ್ರೀ. ಸಿ. ಪುಟ್ಟಣ್ಣ ಅವರು, ಶ್ರೀ. ಡಿ. ಟಿ. ಶ್ರೀನಿವಾಸ್ ಅವರು, ಶ್ರೀ ಶಶೀಲ್ ನಮೋಶಿ ಸರ್, ಶ್ರೀ ಎಸ್ ವಿ ಸಂಕನೂರ ಸರ್, ಶ್ರೀ ಹನುಮಂತ ನಿರಾಣಿ ಸರ್, ಶ್ರೀ ಭೋಜೇಗೌಡರು, ಶ್ರೀ ಹೆಚ್ ಕೆ ವಿವೇಕಾನಂದ ಸರ್, ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಶ್ರೀ ರವೀಂದ್ರನಾಥ ದಂಡಿನ್ ಸರ್, ಅಧ್ಯಕ್ಷರಾದ ಹನುಮಂತಪ್ಪ ಸರ್ ,ಪ್ರಧಾನ ಕಾರ್ಯದರ್ಶಿ ಮುತ್ತುರಾಜ್ ಸರ್, ಶ್ರೀಮತಿ ಮಾಲಿನಿ ಮೇಡಂ, ಸುಧೀಂದ್ರ ದೇಶಪಾಂಡೆ ಸರ್, ಸಂಘದ ಉಪಾಧ್ಯಕ್ಷರಾದ ಗಂಗಾಧರಾಚಾರಿ ಸರ್, ಚಿದಾನಂದ ಪಾಟೀಲ ಸರ್, ಸಂಘಟನಾ ಕಾರ್ಯದರ್ಶಿಗಾಳದ ವೃಷಭೇಂದ್ರಸ್ವಾಮಿ ಸರ್, ಆರ್ ಕೊಟ್ರಪ್ಪ ಸರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.