ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ನಿಯೋಗದಿಂದ ಮನವಿ

ದಿನಾಂಕ 3-1-25 ಶುಕ್ರವಾರ ದಂದು ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರನ್ನು ಭೇಟಿ ಮಾಡಿ ೨೦೨೪-೨೫ ನೇ ಸಾಲಿನ ಎಸ್ ಎಸ್ ಎಲ್ ಸಿ ಪೂರ್ವಭಾವಿ ಪರೀಕ್ಷೆಯನ್ನು ಪ್ರತಿದಿನ ಒಂದು ವಿಷಯದ ಪರೀಕ್ಷೆ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿತ್ತು. ಸಂಜೆ ಒಳಗಾಗಿ ಅಪರ ಆಯುಕ್ತರು ಆದೇಶ ಬದಲಾವಣೆ ಮಾಡಿ ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವೇಳಾ ಪಟ್ಟಿಆದೇಶ ಹೊರಡಿಸಿದ್ದಾರೆ. ಮಾನ್ಯ ಶ್ರೀ ಜಯಶ್ರೀ ಶಿಂತ್ರಿ, ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರಿಗೆ ಮಾಧ್ಯಮಿಕ ಶಿಕ್ಷಕ ಸಂಘ ವತಿಯಿಂದ ಅಭಿನಂದನೆಗಳು. ಈ ನಿಯೋಗದಲ್ಲಿ ಅಧ್ಯಕ್ಷರಾದ ಸಂದೀಪ ಬೂದಿಹಾಳ, ರಾಜ್ಯ ಕಾರ್ಯದರ್ಶಿ ಶ್ರೀಧರ ಪಾಟೀಲ ಕುಲಕರ್ಣಿ, ಉಪನ್ಯಾಸಕರಾದ ಸುಭಾಷ್ ಮಾಸ್ಗೋಣಿ ಭಾಗವಹಿಸಿದ್ದರು.

Highslide for Wordpress Plugin