ಬೀಳ್ಕೊಡುಗೆ ಸಮಾರಂಭ

ಶ್ರೀ ನಾರಾಯಣ ಭಟ್ಟ

ಇವರು ಸರ್ಕಾರಿ ಪ್ರೌಢಶಾಲೆ ಸಬ್ ಮಂಗಲ ಆನೇಕಲ್ ತಾಲ್ಲೂಕು ಬೆಂಗಳೂರು ದಕ್ಷಿಣ ಜಿಲ್ಲೆಯ ಮುಖ್ಯ ಶಿಕ್ಷಕರಾಗಿದ್ದು ದಿನಾಂಕ ೩೧-೦೫-೨೦೨೫ ಶನಿವಾರ ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ ಆನೇಕಲ್ ತಾಲ್ಲೂಕಿನ ಶಿಕ್ಷಣಾಧಿಕಾರಿ ಮಾನ್ಯ ಶ್ರೀ ಎನ್ ವೆಂಕಟೇಶ್ ಅವರ ಉಪಸ್ಥಿತಿಯಲ್ಲಿ ಈ ಭಾವಪೂರ್ಣ ಕಾರ್ಯಕ್ರಮ ಸುಸಂಪನ್ನವಾಯಿತು.

ಅವರ ಅನೇಕ ಹಿತೈಷಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು, Sಆಒಅ ಸದಸ್ಯರು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು, ಪೋಷಕರು ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಶ್ರೀಯುತರಿಗೆ ಶುಭ ಹಾರೈಸಿದರು.

ಶ್ರೀ ನಾರಾಯಣ ಭಟ್ಟರು ಶಿಕ್ಷಣ ಕ್ಷೇತ್ರದಲ್ಲಿ ಸಹ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ನಿರಂತರ ೩೫ ವರ್ಷಗಳ ಕಾಲ ಅನನ್ಯ ಸೇವೆಯನ್ನು ಸಲ್ಲಿಸಿ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಸಂಘದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಸಂಸ್ಕೃತ ಭಾಷೆಗೆ ಶೋಭೆಯನ್ನು ತರುವುದರ ಜೊತೆ ಇಲಾಖೆಯ ವತಿಯಿಂದ ವಯೋನಿವೃತ್ತಿಯನ್ನು ಹೊಂದುತ್ತಿರುವ ನಾರಾಯಣ ಭಟ್ಟರವರಿಗೆ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸಿ ಶಿಕ್ಷಣ ರಂಗದಲ್ಲಿ ಅವರ ಅನುಪಮ ಸೇವೆ ಇನ್ನೂ ಹೆಚ್ಚಿನ ವಿಶಿಷ್ಟ ರೀತಿಯಲ್ಲಿ ಸಮಾಜಕ್ಕೆ ಸಿಗುವ ಹಾಗೆ ಭಗವಂತ ಕರುಣಿಸಲಿ. ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತರ ಸೇವೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಲ್ಲಿ ಹೀಗೆ ಮುಂದುವರೆಯಲಿ ಎಂದು ಶುಭವನ್ನು ಕೋರುತ್ತೇವೆ.

ಶ್ರೀ ಆರ್. ಚನ್ನಕೃಷ್ಣಪ್ಪ
ಇವರು ಶಿಕ್ಷಣ ಕ್ಷೇತ್ರದಲ್ಲಿ ಸಹ ಶಿಕ್ಷಕರಾಗಿ ಇಅಔ ಆಗಿ ಹಾಗೂ ಸ್ಕೌಟ್ಸ್ ಮತ್ತು ಗೌಡ್ಸ್‌ನಲ್ಲಿ ನೈಪುಣ್ಯತೆ ಹೊಂದಿ ನಿರಂತರ ೩೫ ವರ್ಷಗಳ ಕಾಲ ಅನನ್ಯ ಸೇವೆಯನ್ನು ಸಲ್ಲಿಸಿ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲೆಯ ಪದಾಧಿಕಾರಿಗಳಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸಂಘದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಇಲಾಖೆಯ ವತಿಯಿಂದ ವಯೋನಿವೃತ್ತಿಯನ್ನು ಹೊಂದುತ್ತಿರುವ ಶ್ರೀ ಆರ್ ಚನ್ನಕೃಷ್ಣಪ್ಪನವರಿಗೆ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸಿ ಶಿಕ್ಷಣ ರಂಗದಲ್ಲಿ ಅವರ ಅನುಪಮ ಸೇವೆ ಇನ್ನೂ ಹೆಚ್ಚಿನ ವಿಶಿಷ್ಟ ರೀತಿಯಲ್ಲಿ ಸಮಾಜಕ್ಕೆ ಸಿಗುವ ಹಾಗೆ ಭಗವಂತ ಕರುಣಿಸಲಿ. ಶ್ರೀಯುತರ ಸೇವೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಲ್ಲಿ ಹೀಗೆ ಮುಂದುವರೆಯಲಿ ಎಂದು ಶುಭವನ್ನು ಕೋರುತ್ತೇವೆ. ಇವರ ವಯೋನಿವೃತ್ತಿಯ ಸಮಾರಂಭದಲ್ಲಿ ಮಾಧ್ಯಮಿಕ ಶಿಕ್ಷಕ ಸಂಘದ ಖಜಾಂಚಿಗಳಾದ ಶ್ರೀ ಸುರೇಂದ್ರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಿ ಶುಭವನ್ನು ಹಾರೈಸಿದರು.

Highslide for Wordpress Plugin