ವಿವಿಧೆಡೆಗಳಲ್ಲಿ ಜಿಲ್ಲಾ ಘಟಕದ ಸಭೆ

ತುಮಕೂರು ಜಿಲ್ಲಾ ಘಟಕದ ಸಭೆ
ದಿ.೨೪.೦೮.೨೫ ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ತುಮಕೂರು ಜಿಲ್ಲಾ ಘಟಕದ ಸಭೆ ನಡೆಸಲಾಯಿತು. ಸ್ವಾಗತ & ಪರಿಚಯವನ್ನು ಶ್ರೀ ಅಜಯ್ ಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿರವರು ನೆರವೇರಿಸಿದರು, ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷರಾದ ಶ್ರೀ ಯೋಗಾನಂದ ರವರು ಮಾತನಾಡಿದರು. ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಜೈಪುರದಲ್ಲಿ ನಡೆಯಲಿರುವ ಎ.ಬಿ.ಆರ್.ಎಸ್.ಎಂ.ನ ರಾಷ್ಟ್ರೀಯ ಅಧಿವೇಶನದಲ್ಲಿ ಭಾಗವಹಿಸುವವರ ಪಟ್ಟಿ ತಯಾರಿಸಿ ಇದೇ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು, ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ವೃಷಬೇಂದ್ರಸ್ವಾಮಿರವರು, ಪ್ರಾಂತ ಉಪಾಧ್ಯಕ್ಷರಾದ ಶ್ರೀ ಎ. ಗಂಗಾಧರಾಚಾರಿರವರು ಜಿಲ್ಲಾ ಸಂಘಟನೆಯ ಹಿರಿಯರಾದ ಶ್ರೀ ಉಮಾಮಹೇಶರವರು, ಮತ್ತು ಶ್ರೀ ಸಿದ್ದಲಿಂಗಪ್ಪನವರು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು, ಸಭೆಯಲ್ಲಿ ಎಲ್ಲಾ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.

ವರದಿ-ಯೋಗಾನಂದ, ಜಿಲ್ಲಾಧ್ಯಕ್ಷರು

ಮಧುಗಿರಿ ಶೈಕ್ಷಣಿಕ ಜಿಲ್ಲಾ ಘಟಕದ ಸಭೆ
ದಿ. ೨೪.೮.೨೦೨೫ ರಂದು ಶಿರಾ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು, ಈ ಸಭೆಯಲ್ಲಿ ಜಿಲ್ಲಾ ಘಟಕವನ್ನು ಪುನರ್ ರಚಿಸಲಾಯಿತು. ಜೈಪುರದಲ್ಲಿ ನಡೆಯಲಿರುವ ಎ.ಬಿ.ಆರ್.ಎಸ್.ಎಂ ನ ರಾಷ್ಟ್ರೀಯ ಅಧಿವೇಶನದಲ್ಲಿ ಭಾಗವಹಿಸುವವರ ಪದಾಧಿಕಾರಿಗಳ ಪಟ್ಟಿಯನ್ನು ತಯಾರಿಸಿ, ಇದೇ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಶ್ರೀ ವೃಷಭೇಂದ್ರ ಸ್ವಾಮಿರವರು, ಪ್ರಾಂತ ಉಪಾಧ್ಯಕ್ಷರಾದ ಶ್ರೀ ಗಂಗಾಧರ ರವರು ಹಾಗೂ ಜಿಲ್ಲಾ ಸಂಘಟನೆಯ ಹಿರಿಯರಾದ ಶ್ರೀ ಎ.S. ರೇಣುಕಾನಂದರವರು, ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು, ವಿಶೇಷ ಆಹ್ವಾನಿತರಾದ ಶ್ರೀಮತಿ ತ್ರಿವೇಣಿ ರವರು,ಜಿಲ್ಲಾ ಪದಾಧಿಕಾರಿಗಳು, ಸದಸ್ಯರು ಸಭೆಯಲ್ಲಿದ್ದು ಸಭೆ ಯಶಸ್ವಿಗೆ ಕಾರಣರಾದರು.

– ಚಂದ್ರಶೇಖರ, ಜಿಲ್ಲಾಧ್ಯಕ್ಷರು. ಪ್ರಕಾಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ.

Highslide for Wordpress Plugin